ಈ ಪುಟವನ್ನು ಪ್ರಕಟಿಸಲಾಗಿದೆ
46
ಮಾರುಮಾಲೆ

ಈ ಲೇಖನವು ಪ್ರಸ್ತುತ ಗ್ರಂಥದಲ್ಲಿ ಪ್ರಕಟವಾಗಿದೆ.
19. ಈ ಸಂಪ್ರದಾಯವು, ಬಡಗುತಿಟ್ಟಿನ ಪ್ರದೇಶದ ತಾಳಮದ್ದಲೆ ಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
20. ಶೇಣಿ ಗೋಪಾಲಕೃಷ್ಣ ಭಟ್ಟರು ಎತ್ತುಗಡೆಯಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡುವುದಿದೆ.
21. ಎತ್ತುಗಡೆಯನ್ನು ಅತಿ ಕ್ಷಿಪ್ರವಾಗಿ ಕಂಡುಕೊಂಡು ಪದ್ಯಗಳನ್ನು ಎತ್ತಿಕೊಳ್ಳುವ ಹೊಂದಿಸುವಲ್ಲಿ ಕಡತೋಕ, ಬಲಿಪನಾರಾಯಣ, ಕಾಳಿಂಗ ನಾವಡಈ ಭಾಗವತರುಗಳು ತುಂಬ ಪ್ರಬುದ್ಧ ಪರಿಣತಿ ತೋರಿದ್ದಾರೆ.
22. ಗೆರೆಸೊಪ್ಪೆ ಶಾಂತಪ್ಪಯ್ಯ ರಚಿತ.
23. ಇಂತಹ ಪ್ರಯೋಗಗಳನ್ನು ತೊಡಗಿದವರು ಕಡತೋಕ ಮಂಜು ನಾಥ ಭಾಗವತರು, ಚಿಪ್ಪಾರು ಬಲ್ಲಾಳರು, ದುರ್ಗಪ್ಪ ಗುಡಿಗಾರರಂತಹ ಮದ್ದಲೆಗಾರರೊಂದಿಗೆ ಇವನ್ನು ಹಾಡಿದಾಗ, ಒಂದು ಅಸಾಧಾರಣ ರಸ ಲೋಕದ ಸೃಷ್ಟಿಯಾಗುವುದನ್ನು ನಾನು ಅನುಭವಿಸಿದ್ದೇನೆ.
24, ಯಕ್ಷಗಾನದಲ್ಲಿ ಏರುಪದ' (ವೀರರೌದ್ರ ಮುಂತಾದ ಕೆಲವು ಭಾವಗಳಿಗೆ) ಮತ್ತು 'ಸೌಮ್ಯ ಅಥವಾ ನಿಧಾನ ಪದ್ಯ'-ಎಂದು ಒಂದು ಸ್ಕೂಲ ವಾದ ವಿಭಾಗ ಸಂಪ್ರದಾಯ.
25. ದೀವಾಣ ಭೀಮಭಟ್ಟರು, ಚಿಪ್ಪಾರು ಬಲ್ಲಾಳ, ದಿ। ಕುದ್ರೆಕೂಳ್ಳು ರಾಮಭಟ್, ಹಿರಿಯಡ್ಕ ಗೋಪಾಲರಾವ್-ಇಂತಹ ಅನುಭವಿ ಮದ್ದಲೆಗಾರರು ಅರ್ಥಧಾರಿಯೊಂದಿಗೆ ಸಂವಾದಿಸುವ, ಅವನ ಪ್ರಜ್ಞೆಯನ್ನು ಕೆಣಕುವ ರೀತಿ ಕಂಡಾಗ ಈ ಮಾತು ಸ್ಪಷ್ಟವಾಗುತ್ತದೆ.
26. ಹೊಂದಿಕೆಯ ಒಳ್ಳೆಯ ಇಂತಹ ಒಂದು involvement ನ ಮಾದರಿಗಳನ್ನು ಅಗರಿ ಶ್ರೀನಿವಾಸ ಭಾಗವತರು, ದಿ। ಮಂಡೆಚ್ಚರು, ನಮ್ಮ ಹಲವು ಹಿರಿಯ ಮದ್ದಲೆಗಾರರೂ ತೋರಿದ್ದಾರೆ.