ಈ ಪ್ರಬಂಧದಲ್ಲಿ ತುಳು ಯಕ್ಷಗಾನವೆಂದರೆ, ತುಳು ಭಾಷೆಯಲ್ಲಿ ರಚಿತ ವಾದ ಪ್ರಸಂಗ, ಅರ್ಥಗಾರಿಕೆ, ವೇಷವಿಧಾನ, ಕನ್ನಡ ಪದ್ಯ, ಕನ್ನಡ ಅರ್ಥ ಗಾರಿಕೆಗಳಿದ್ದು ತುಳುನಾಡಿಗೆ ಸಂಬಂಧಿಸಿದ ಕಥಾನಕಗಳು, ತುಳು ಕನ್ನಡ ಮಿಶ್ರಣದ ಅಥವಾ ತಳುವಿನಲ್ಲಿ ಪ್ರದರ್ಶಿತವಾದ ಪೌರಾಣಿಕ (ಎಂದರೆ ಸಂಸ್ಕೃತ ಮೂಲದ ಕಥಾನಕ) ಕಥೆಗಳ ಪ್ರದರ್ಶನಗಳು-ಇವೆಲ್ಲ ಸೇರುತ್ತವೆ. ಮತ್ತು, ನಿನ್ನೆ ಎಂದರೆ ಸಮಾರು 1950ರ ವರೆಗಿನ ಅವಧಿ ಎಂದೂ, ಇಂದು ಎಂದರೆ ಅಂದಿನಿಂದ ನಂತರದ ಅವಧಿ ಎಂದೂ, ನಾಳೆ ಎಂದರೆ, ತುಳು ಯಕ್ಷ ಗಾನದ ಸಾಧ್ಯತೆ ಮತ್ತು ಸಂಭಾವ್ಯ ಸ್ಥಿತಿಗಳ ಬಗೆಗಿನ ಮುನ್ನೋಟ ಎಂದರ್ಥ. ಇಲ್ಲಿ, ತುಳು ಯಕ್ಷಗಾನದ ನಿನ್ನೆ, ಇಂದುಗಳನ್ನು ಪರಿಶೀಲಿಸುವಾಗ, ಮೇಳೆ ಗಳು, ಪ್ರಸಂಗಕರ್ತರು ಕಲಾವಿದರು ಮೊದಲಾದ ವಿಷಯಗಳನ್ನು ವಿವರವಾಗಿ ಪರಿಶೀಲಿಸಿ ಪಟ್ಟಿ ಮಾಡದೆ, ಪ್ರಧಾನ ಪ್ರವೃತ್ತಿಗಳನ್ನು ಗಮನಿಸಿದೆ. ಪ್ರಯೋಗದ ದೃಷ್ಟಿಯಿಂದ ಸಾಧಕ ಬಾಧಕಗಳ ಪರಿಶೀಲನೆಯೇ ಇಲ್ಲಿ ಪ್ರಧಾನ ಲಕ್ಷ್ಯ.
1950ರ ನಂತರ ವಿಶೇಷವಾಗಿ ಬಳಕೆಗೆ ಬಂದ ತುಳು ಯಕ್ಷಗ ಪ್ರದರ್ಶನಗಳು, ಪ್ರಾಚೀನ ಕಲೆಯೊಂದರ ಹೊಸ ಕವಲಾಗಿ, ಹೊಸ ವಿಸ್ತರಣ ವಾಗಿ, ಕಲೆಗೆ ಹೊಸ ಆಯಾಮವನ್ನು ಕಲ್ಪಿಸಿತು.
*ಎಪ್ರಿಲ್ 16, 1989 ರಂದು ಮುಲ್ಕಿ ಬಪ್ಪನಾಡಿನಲ್ಲಿ ನಡೆದ ತುಳು ಸಮ್ಮೇಳನದಲ್ಲಿ | ಜರಗಿದ ಗೋಷ್ಠಿಯಲ್ಲಿ ಮಾಡಿದ ಉಪನ್ಯಾಸ-ತುಳು ಯಕ್ಷಗಾನೊ ಕೊಡೆ-ಇನಿ-ಎಲ್ಲೆ- ಕನ್ನಡ ಲೇಖನ ರೂಪ. ವಿಸ್ತಾರ, ಪರಿಷ್ಕಾರಗಳೊಂದಿಗೆ.