ಈ ಪುಟವನ್ನು ಪ್ರಕಟಿಸಲಾಗಿದೆ
54
ಮಾರುಮಾಲೆ

ಧಾರಣವಾದುದು. ತುಳು ಆಟಗಳ ನೂರಾರು ಪ್ರಸಂಗಗಳ ಬಹು ಸಹಸ ಸಂಖ್ಯೆಯ ಪ್ರದರ್ಶನಗಳಲ್ಲಿ ಸೃಷ್ಟಿಯಾದ ತುಳು ಅರ್ಥಗಾರಿಕೆಯ 'ಸಾಹಿತ್ಯ', ತುಳು ಸಂಸ್ಕೃತಿಯ ಮಹತ್ಸದ್ಧಿಗಳ ಸಾಲಿನಲ್ಲಿ ನಿಲ್ಲುತ್ತದೆ. ಪೋಷಕ ಸಾಹಿತ್ಯದ ಹಿನ್ನೆಲೆ (ಅಂದರೆ ಶಿಷ್ಟ ಕಾವ್ಯಾದಿಗಳು) ಇಲ್ಲದೆ, ಹೆಚ್ಚಿನ ಪ್ರಸಂಗಗಳಲ್ಲೂ ವಿಶೇಷ ವಸ್ತು ವಿಸ್ತಾರವಿಲ್ಲದೆ ಇದ್ದಾಗಲೂ ಇಡಿ ರಾತ್ರಿಗಳ ಅಸಂಖ್ಯ ಪ್ರದರ್ಶನಗಳನ್ನು ರೋಚಕಗಳನ್ನಾಗಿ ರೂಪಿಸಿದ ಕಲಾವಿದರೂ, ಪ್ರಸಂಗ- ಕರ್ತೃಗಳೂ ಅಭಿನಂದನಾರ್ಹರು. ತುಳು ಯಕ್ಷಗಾನ ರಂಗದ ಹಾಸ್ಯವಂತೂ, ವಿಶೇಷವಾದ ಗಮನಕ್ಕೆ, ಪ್ರಶಂಸೆಗೆ ಅರ್ಹವಾದದ್ದು. `ಸಾಂಸ್ಕೃತಿಕ ವಿಕೇಂದ್ರೀ ಕರಣ'ವು ತುಳು ಯಕ್ಷಗಾನದ ದೊಡ್ಡ ಸಾಧನೆ.

ಇಷ್ಟೆಲ್ಲ ನಿಜ. ಆದರೆ, ಶೈಲಿಬದ್ಧವಾದ ಒಂದು ಕಲಾಪ್ರಕಾರದಲ್ಲಿ, ರೂಪಿತವಾದ ತುಳುಯಕ್ಷಗಾನ ಪ್ರಯೋಗವು, ಕಲಾದೃಷ್ಟಿಯಿಂದ, ಸೃಷ್ಟಿಸಿದ ಸಮಸ್ಯೆಗಳು ತುಂಬ ಗಂಭೀರವೂ, ಆಪತ್ಕಾರಿಯೂ ಆದ ಪರಿಣಾಮಗಳನ್ನು ಬೀರಿದುವೆಂದು ಹೇಳಲೇಬೇಕಾಗಿದೆ. ಇದು, ಕೆಲವರು ಭಾವಿಸಿರುವಂತೆ, ಕನ್ನಡ ಪಕ್ಷಪಾತದಿಂದಾಗಲಿ, ಸಂಸ್ಕೃತ ಪುರಾಣಗಳ ಪೂರ್ವಗ್ರಹದಿಂದಾಗಲಿ, ತುಳು ವಿರೋಧದಿಂದಾಗಲಿ ಮೂಡಿದ ಅನಿಸಿಕೆಯಲ್ಲ. ಬದಲಾಗಿ, ಕಲಾಸಿದ್ಧಾಂತದ ಗಟ್ಟಿತನದಿಂದಲೇ ಪ್ರೇರಿತವಾದ ನ್ಯಾಯವಾದ ಅನಿಸಿಕೆಯಾಗಿದೆ. ಕೆಲವರ ಅಭಿರುಚಿಯನ್ನು, ಹಲವರ ರುಚಿಯತ್ತ ಹೊರಳಿಸಿ, ಜನಭಾಷೆಯಲ್ಲಿ, ಕಲೆ ಯನ್ನು ಜನಪರವನ್ನಾಗಿ ರೂಪಿಸುವ ಕೆಲಸವನ್ನು ತುಳು ಯಕ್ಷಗಾನ ಸಾಧಿಸಿದೆ ಎಂಬುದನ್ನು ಒಪ್ಪಿಯೂ, ಕಲೆಗೆ ಅದರಿಂದ ಆಗಿರುವ ದುಷ್ಪರಿಣಾಮವನ್ನು ಒತ್ತಿ ಹೇಳಲೇಬೇಕಾಗಿದೆ. ಸಾಂಸ್ಕೃತಿಕ ನಾವೀನ್ಯದ ಕಾವ್ಯದಲ್ಲಿ ಕಲಾವಿವೇಕ, ಮತ್ತು ಸಿದ್ಧತೆಗಳು ಸಾಕಷ್ಟು ಇಲ್ಲದಿದ್ದಾಗ, ವ್ಯತಿರೇಕವುಂಟಾಗುವುದು ಸಹಜ. ಸಾಂಸ್ಕೃತಿಕ ವಿಕೇಂದ್ರೀಕರಣದ ಜತೆ, ಕಲಾತ್ಮಕತೆಯ ಬಲಿಯಾಯಿತು ಎಂಬುದೇ ಆತಂಕಕ್ಕೆ ಕಾರಣ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮೂಲಭೂತವಾಗಿ ಲಭ್ಯವಿದ್ದ ಕಲಾ ಸಂಪತ್ತನ್ನು ಉಳಿಸಿಕೊಂಡೇ, ತುಳು