ಅಂದರೆ ಭಾಷೆ ಮತ್ತು ಶೈಲಿಗಳಿಗೊಂದು ಕಾಲ್ಪನಿಕ ದ್ವಂದ್ವ ಏರ್ಪಟ್ಟು, ಭಾಷೆ ಬದಲಾದುದರಿಂದ ಶೈಲಿಯೂ ಬದಲಾಗಬೇಕು ಎಂಬ 'ಸಿದ್ಧಾಂತ' ಇದು ಕಲೆಯ ಗ್ರಹಿಕೆ (Perception)ನಲ್ಲಿ ಬಂದು ಬಿರುಕು. ತಾವು ಮಾಡಿರುವ ಹೊಸ ಪ್ರಯೋಗವು, ಯಕ್ಷಗಾನವಲ್ಲ ಎಂದು ಒಂದು ಬಗೆಯಿಂದ ಒಪ್ಪಿಕೊಂಡು, ಆರಂಭಿಸಿದಂತೆ ಆಯಿತು ಇದರ ಅರ್ಥ. ಪರಿಣಾಮ, ಯಕ್ಷಗಾನದ್ದಕ್ಕಿಂತ ಭಿನ್ನವಾದ ವೇಷಗಳ ಮಾದರಿಯನ್ನು ಆರಿಸಿ ಕೊಳ್ಳಬೇಕಾದ ಅವಶ್ಯಕತೆ. ಅದಕ್ಕೆ ತಾತ್ಕಾಲಿಕ ಪರಿಹಾರ, ಐತಿಹಾಸಿಕ ನಾಟಕ ಗಳ ವೇಷ (ಕಂಪನಿಗಳ ಡ್ರಾಮಾಡ್ರೆಸ್ ಮಾದರಿ)ಗಳ ಅಂಗೀಕಾರ,
ಯಕ್ಷಗಾನ x ನಾಟಕ :
ಇದು ಮೇಲೆ ಹೇಳಿದ ದ್ವಂದ್ವ ಇದನ್ನೊಂದು ಮಗ್ಗುಲು ಎನ್ನಬಹುದು. ಪೂರ್ಣತಃ ಯಕ್ಷಗಾನರಂಗಕ್ಕೆ ಹೊಂದಿಕೆಯಾಗದ ಒಂದು ಪ್ರಯೋಗದಲ್ಲಿ ನಾಟಕ ರೂಪದ ವೇಷಗಳನ್ನು ಸೇರಿಸುವುದೇ ಸರಿ ಎಂಬ ಒಂದು ತೀರ್ಮಾನ, ಇದಕ್ಕೆ ಹಿನ್ನೆಲೆಯೂ ಇದ್ದಿತು. `ಕಂಪನಿ ನಾಟಕ' ಮಾದರಿಯ ವೇಷಗಳು ಮೊದಲಾಗಿ ಬಂದದ್ದು ತುಳು ಪ್ರಸಂಗಗಳ ಕಾಲದಲ್ಲಿ ಅಲ್ಲ. 1930ರಲ್ಲಿ ನಾಟಕ ಕಂಪೆನಿ, 1931ರಲ್ಲಿ ಆರಂಭವಾದ ಆರಂಭವಾದ ಕೊಳ್ಳೂರು ನಾಟಕ ಚೊಕ್ಕಾಡಿಯ ಕರ್ನಾಟಕ ಯಕ್ಷಗಾನ ನಾಟಕ ಸಭಾ ಇವುಗಳು, ಯಕ್ಷ ಗಾನ ನಾಟಕವೆಂಬ ಪ್ರಯೋಗಗಳನ್ನು ಆರಂಭಿಸಿದ್ದುವು. ನರ್ತನವಿಲ್ಲದ ಆಟಗಳವು. ಹಿಮ್ಮೇಳ ಯಕ್ಷಗಾನದ್ದು. ಅರ್ಥಗಾರಿಕೆಯೂ ಸ್ವತಂತ್ರ, ಹೀಗೆ ಅದು ಯಕ್ಷಗಾನ + ನಾಟಕ ಆಗಿತ್ತು. ಹೀಗೆ ಮೊದಲೇ ಬಂದಿದ್ದ ಒಂದು ಪ್ರಭಾವ, ಸಾಂಪ್ರದಾಯಿಕ ಪ್ರಸಂಗಗಳಲ್ಲಿ ಕಾಣಿಸಿ, ರೂಢವಾಗತೊಡಗಿತ್ತು. ತುಳು ಆಟಗಳಲ್ಲಿ ಇದು ಚುರುಕುಗೊಂಡು ಸಮಗ್ರವಾಗಿ ವ್ಯಾಪಿಸಿತು. ಯಕ್ಷ ಗಾನ ವೇಷಗಳಿಂದಲೇ ತುಳುವಿನಲ್ಲಿ ಆಟಗಳನ್ನಾಡುವ ಪ್ರಯತ್ನ ನಡೆದರೂ, ಬೆಳೆದು ಬಾಳಲಿಲ್ಲ. ಭಾಷೆ ಶೈಲಿಗಳ ದ್ವಂದ್ವಕ್ಕೆ ಪರಿಹಾರವಾಗಿ ಬಂದ ನಾಟ ಕೀಯ ಯಕ್ಷಗಾನ ಮತ್ತೊಂದು ದ್ವಂದ್ವವನ್ನು ಸೃಷ್ಟಿಸಿತು. ನಾಟಕ ವೇಷ ಪ್ರತ್ಯೇಕತೆಯನ್ನೇನೋ ಕಾಣಿಸಿತು. ಆದರೆ, ಯಕ್ಷಗಾನದ ಹಿಮ್ಮೇಳ, ನೃತ್ಯ ತಂತ್ರಗಳಿಗೆ ಅದು ಹೊಂದಲಿಲ್ಲ. ಕಲಾದೃಷ್ಟಿಯಿಂದ ತುಂಬ ದುರ್ಬಲವಾದ