ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪರಿಚ್ಛೇದ
೧೫

ಯುವಕನಿಗೆ ಹೆಂಡತಿಯ ಮೇಲೆ ಇದ್ದ ಪ್ರಣಯವು ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ಅವನ ಮನಸ್ಸು ಕರಗಿ ಹೋಯಿತು. ಅವನು ಉಕ್ಕಿಬಂದ ಅಶ್ರಜಲವನ್ನೊರಸಿಕೊಂಡು,‘ಶೋಭನೆ! ನಾನೇನನ್ನು ಹೇಳಿದರೂ ಪ್ರಕಾರಾಂತರವಾಗಿ ತಿಳಿಯಬೇಡ; ನನಗೆ ಉಂಟಾಗಿದ್ದ ತೀವ್ರಯಾತನೆಯಿಂದ ಮಾತುಗಳು ಹೊರಗಾದುವು; ನೀನು ನಿನ್ನ ಮನಸ್ಸಿನಲ್ಲಿದ್ದುದನ್ನೆಲ್ಲಾ ಬಿಚ್ಚಿ ಹೇಳಿದುದು ಒಳ್ಳೆಯದಾಯಿತು; ನಿನ್ನ ಮನಸ್ಸಿನಲ್ಲಿ ಮತ್ತೇನಿದ್ದರೂ ಹೇಳಿಬಿಡು; ಮುಚ್ಚು ಮರೆ ಮಾಡಬೇಡವೆಂದು ಹೇಳಿದನು.

ಶೋಭನೆ — ಎಲ್ಲಾ ಹೇಳಬೇಕೆಂದು ಇರುವಾಗ ಆವದನ್ನೂ ಮರೆ ಮಾಜುವುದಿಲ್ಲ; ಅದರಿಂದ ನನ್ನ ಅದೃಷ್ಟದಲ್ಲಿದ್ದುದು ಆಗಿಹೋಗಲಿ; ಏನು ಬಂದರೂ ಸಹಿಸಿಕೊಳ್ಳುವುದಕ್ಕೆ ಸಿದ್ಧವಾಗಿದ್ದೇನೆ; ಎಲ್ಲವನ್ನೂ ಕೇಳಿ ಈ ಪಾಪಿಯಾದವಳಿಗೆ ನಿಮ್ಮ ಚರಣದಲ್ಲಿ ಸ್ಥಳವಂ ಕೊಡಬಹುದಾದರೆ ಕೊಡಬಹುದು, ಇಲ್ಲವಾದರೆ ಸಾಯುವುದಕ್ಕೆ ಸಿದ್ದವಾಗಿದ್ದೇನೆ; ಸಾಯುವುದಕ್ಕೆನಗೆ ಸ್ವಲ್ಪವೂ ಭಯವಿಲ್ಲ; ರಾತ್ರಿ ಹಗಲು ದೇವರು ನನ್ನನ್ನು ಇಲ್ಲಿಗೆ ಸಾಕುಮಾಡಲೆಂದು ಕೇಳಿಕೊಳ್ಳುತ್ತಿದ್ದೇನೆ; ಅದನ್ನು ದೇವರೇ ಬಲ್ಲ !

ಹೀಗೆಂದು ಹೇಳಿ ತೋಭನೆಯು ಕಣ್ಣೀರನೊರೆಸಿಕೊಂಡಳು. ಯುವಕನು ವ್ಯಥೆಯಿಂದ ಅವಳ ಹೇಳಿಕೆಯನ್ನು ಕೇಳಲು ಎದುರು ನೋಡುತ್ತಿದ್ದನು.

ಶೋಭನೆ — (ಸೆರಗನ್ನು ಸರಿಮಾಡಿಕೊಂಡು) ಮದುವೆಯಾದ ಹೊಸದರಲ್ಲಿ ನೀವು ಸಾಯಂಕಾಲ ಮನೆಗೆ ಬರುತ್ತಲೇ ನನ್ನನ್ನು ನೋಡಬೇಕೆಂದಿದ್ದ ಕುತೂಹಲವು ಈಚೆಗೆ ತಪ್ಪಿಹೋಯಿತು. ಆ ಕುತೂಹಲವು ಈಗ ಎಲ್ಲಿ ಹೋಯಿತು ? ಅದಕ್ಕೆ ಬದಲಾಗಿ ಈಚೆಗೆ ಸಂಧ್ಯಾಕಾಲ ಮನೆಗೆ ಬರುತ್ತಲೇ ಆರನ್ನು ನೋಡದಿದ್ದರೆ ವ್ಯಾಕುಲವುಳ್ಳವರಾಗುವಿರಿ ? ಮತ್ತು ಆರನ್ನು ನೋಡಿದರೆ ಆ ವ್ಯಾಕುಲವು ಹೋಗಿ ಮುಖವು ಹರುಷದಿಂದ ಅರಳುವುದು ? ಅಂತಹ ಅರಳಿದ ಮುಖವನ್ನು ಚಿತ್ರದಲ್ಲಿ ಬರೆದಿಡಬೇಕೆಂದು