ಈ ಪುಟವನ್ನು ಪರಿಶೀಲಿಸಲಾಗಿದೆ
ಎರಡನೆಯ ಪರಿಚ್ಛೇದ
೧೭

ಅವನು ವಿಲಾಯಿತಿಯಿಂದ ಬರುತ್ತಲೇ ಲಗ್ನವಾಗುವುದು. ಹೋದವರ್ಷ ಅವನಿಗೆ ಪರೀಕ್ಷೆಯಾಗಲಿಲ್ಲ. ಈ ವರ್ಷ ಪರೀಕ್ಷೆಯಾಗದಿದ್ದರೆ ಬರುವುದು ಸವ್ರ ಸಾವಕಾಶವಾಗಬಹುದು. ಹಾಗಾದರೂ ಮಾಲತಿಯನ್ನು ಬೇರೆ ಕೊಟ್ಟು ಲಗ್ನವನ್ನು ಮಾಡೆನು. ಅದಕ್ಕೋಸ್ಕರವಾಗಿ ನಿನ್ನ ಕಣ್ಣಿಗೆನ್ನ ಪ್ರೇಮವು ಹೆಚ್ಚಾದಂತೆ ಕಂಡಿತೆಂದು ತೋರುತ್ತದೆ. ಈರ್ಷೆಯಿಂದ ಮನು ಪ್ಯರು ಎಷ್ಟು ಬೇಗನೆ ಕುರುಡರಾಗುತ್ತಾರೆ ?

ಶೋಭನೆಯು ತನ್ನ ತಪ್ಪು ತನಗೆ ಉಂಟಾಗಿದ್ದ ಭಾ೦ತಿಮೂಲಕವಾ ದುದೆಂದು ತಿಳಿದುಕೊಂಡಳು.

ಯುವಕ-ಶೋಭನೆ ! ನೀನು ಹೀಗೆ ಇಲ್ಲದುದನೆಲ್ಲಾ ಭಾವಿಸಿ ಕೊಂಡು ಅನರ್ಥಕವಾಗಿ ಅಸುಖಿಯಾಗುವೆಯಲ್ಲದೆ ನನ್ನನ್ನೂ ವ್ಯಸನಕ್ಕೆ ಗುರಿಮಾಡುವೆ. ಇನ್ನು ಮುಂದೆ ಹಾಗೆ ಮಾಡಬೇಡ. ನಾನು ಏನನ್ನು ಮಾಡಿ ದರೆ ನಿನ್ನ ಅಪನಂಬಿಕೆಯು ದೂರವಾಗುವುದು, ಹೇಳು. ನಾನು ಮಾಡತ ಕುದು ಏನು? ನಿನ್ನನ್ನು ಬಿಟ್ಟು ನಾನು ಮತ್ತಾರನ್ನೂ ಹೆಚ್ಚು ಪ್ರೀತಿಸುವು ದಿಲ್ಲ. ಎಷ್ಟು ಕಾಲವಾದರೂ ಮಾಲತಿಯನ್ನು ಬಿಟ್ಟಿರುವೆನು. ನಿನ್ನನ್ನು ಬಿಟ್ಟು ಒಂದುಕ್ಷಣವಾದರೂ ಅಗಲಿರೆನು, ನಿನ್ನನ್ನು ನೋಡದಿದ್ದರೆ ನನಗೆ ಉಂಟಾ ಗುವ ಕಷ್ಟವನ್ನು ಬಣ್ಣಿಸಲಾರೆನು. ಹೊರಗೆ ಹೋಗಿ ಆ ಕೆಲಸವನ್ನು ಮಾಡುತ್ತಿದ್ದರೂ ಮನವು ನಿನ್ನ ಮೇಲಿರುವುದು. ನಿನ್ನ ಮೇಲಿನ ಜ್ಞಾನ ದಿಂದ ಮಾಡುತ್ತಿದ್ದ ಕೆಲಸವೇ ಮರೆತು ಹೋಗುವುದು. ನಿನ್ನಿಂದಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಿಕೊಳ್ಳುವುದಕ್ಕೆನಗೆ ಶಕ್ತಿಯಿರುವುದು. ಶೋಭನೆ! ಹೀಗಿದ್ದುಕೊಂಡಿದ್ದರೂ ನೀನೆನ್ನಲ್ಲಿ ನಂಬಿಕೆಯನಿಡದೆ ಕಷ್ಟವಂ ಕೊಡಬಹುದೆ? ಇನ್ನು ಮುಂದೆ ನನ್ನಲ್ಲಿ ದಯೆಯಿಲ್ಲದವಳಾಗಬೇಡ.

ಮನಸ್ಸಿನ ವ್ಯಾಕುಲತೆಯಿಂದ ಯುವಕನು ಹೆಂಡತಿಯ ಕಾಲನ್ನು ಹಿಡಿದುಕೊಳ್ಳುವುದಕ್ಕೆ ಹೋದನು. ಶೋಭನೆಯು ಚಮಕಿತೆಯಾಗಿ ಅವನ ಕೈಯನ್ನು ಹಿಡಿದು ತನ್ನ ವಕ್ಷದಮೇಲೆ ಇಟ್ಟುಕೊಂಡಳು. ಆಗವಳ ಕಣ್ಣಿಗೆ ಸ೦ಪಂಚವೇ ತಿರುಗುವಂತೆ ಕಂಡಿತು. ಎಲ್ಲವೂ ಸ್ವಪ್ನದಂತೆ ತೋರಿತು. ತನಗಿಂತ ಸುಖಿಗಳು ಪ್ರಪಂಚದಲ್ಲಿ ಮತ್ತಾರೂ ಇಲ್ಲವೆಂದು