ಈ ಪುಟವನ್ನು ಪರಿಶೀಲಿಸಲಾಗಿದೆ

94

ಮಿಂಚು



ಕೊಡಿ. ನಿಮ್ಮ ಸೇವೆ ದಿಲ್ಲಿಗೆ ಬೇಕಂತೆ. ಎರಡೂ ಆಜ್ಞಾಪತ್ರಗಳನ್ನು ಚೌಗುಲೆ
ತರ್ತಾರೆ. ಅವರು ನಿಮಗೆ ಗೊತ್ತಾ ? ಒಳ್ಳೆದಾಯ್ತು."
ಆ ಕಡೆಯಿಂದ ಕ್ಷೀಣವಾಗಿ ಕೇಳಿಸಿತು :
“ಥಾಂಕ್ಸ್, ಬಯ್ ಬಯ್.” ('ಕಾಲ್ ಓವರ್.')
ಕೊಠಡಿಯಲ್ಲಿ ಇದ್ದವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಅಂದಳು :
“ಫೋನ್ ಕರೆಗಳೆಂದರೆ ಹೀಗಿರಬೇಕು. ಚಟ್ ಚಟ್, ಸುಮ್ಮನೆ ಉದ್ದ
ಎಳೆಯೋದರಲ್ಲಿ ಅರ್ಥವಿಲ್ಲ. ಫೋನನ್ನು ಹರಟೆಗೆ ಬಳಸಬಾರದು."
ಮುಖ್ಯಮಂತ್ರಿ, ಮಾಡಿದ ಸಂಜ್ಞೆ ಯನ್ನು ಗಮನಿಸಿ ಸಿತಾರಾ ನೋಟ್ಬುಕ್ಕನ್ನು
ಕೈಗೆತ್ತಿಕೊಂಡಳು,
“..ರಿಗೆ... ಚಾರ್ಜ್ ಕೊಡುವ ಬಗ್ಗೆ .”
ಈ ಪತ್ರ ತರುವ ಶಿವಭಾವು ಚೌಗುಲೆ ಐ.ಎ. ಎಸ್, ಅವರಿಗೆ ಈ ಕ್ಷಣವೆ
ಚಾರ್ಜ್ ಕೊಡಬೇಕೆಂದು ಈ ಮೂಲಕ ನಿರ್ದೇಶಿಸಲಾಗಿದೆ...."
ಫೆರ್ನಾಂಡೀಸ್ ಟೈಪ್ ರೈಟರ್ ಹುಡುಕಿ ತಂದ, ಪರಶುರಾಮ್ ತನ್ನ ಬ್ಯಾಗಿ
ನಿಂದ ಮುಖ್ಯಮಂತ್ರಿಯ ಲೆಟರ್ಹೆಡ್ ಪಾಡ್ ಹೊರತೆಗೆದ.
ಶ್ರೀಪಾದ ಬಂದು ಪರಶುರಾಮನ ಮೂಲಕ ವರದಿ ಸಲ್ಲಿಸಿದ: “ಭೋಜನ
ಸಿದ್ಧವಾಗಿದೆ”
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಗೆ ಸೂಚನೆ ಇತ್ತಳು :
“ಎರಡು ಘಂಟೆಗೆ ನಾವು ರಾಷ್ಟ್ರಪಕ್ಷದ ಕಾರಾಲಯದಲ್ಲಿರಬೇಕು.ಫೆರ್ನಾಂ
ಡೀಸ್, ನೀವು ಇಲ್ಲೇ ಇರಿ. ಸಿತಾರಾ ಡ್ಯೂಟಿ ವೇಳೆ ಆದ್ಮೆಲೆ ಇವತ್ತು ಹೋಗಲಿ.
(ಹೌದು. ನಾಳೆ-ನಾಳೆಗೆ ಬೇರೆ ವೇಳಾಪಟ್ಟಿ...)”
.....ಭೋಜನ ಕೊಠಡಿಯಲ್ಲಿ ಮುಖ್ಯಮಂತ್ರಿ ಉಣ್ಣಲು ಕುಳಿತಳು. ನಿಮಿಷ
ಗಳು ಕಳೆದಂತೆ, ತುತ್ತುಗಳು ಗಂಟಲಿನಿಂದ ಕೆಳಗಿಳಿದಂತೆ ಆಕೆಯ ಮುಖದಲ್ಲಿ ಕಂಡು
ಬಂದ ಸಮಾಧಾನದ ಹರ್ಷದ ಅಲೆಗಳನ್ನು ಕಂಡು. ಶ್ರೀ ಪಾದನ ಕಣ್ಣುಗಳು ಹನಿ
ಗೂಡಿದವು.
ಮುಖ್ಯಮಂತ್ರಿ ತನ್ನ ಕೋಣೆಗೆ ಮರಳಿದೊಡನೆ ಸಿತಾರಾ ಕೇಳಿದಳು
“ನ್ಯೂಸ್ ಟೈಮ್. ರೇಡಿಯೊ ಹಾಕಲಾ ಮಾತಾಜಿ !"
" ಹಾಕು."
ಇವರದೇ ಸುದ್ದಿ. ಕಿಷ್ಕಿಂಧೆಯ ಮುಖ್ಯಮಂತ್ರಿ ಬಂದಿದಾರೆ ಎಂದು ಒಂದು
ವಾಕ್ಯ ಹೇಳಿದರೆ ಇವರಿಗೇನು ನಷ್ಟ ? ನಾಡದು ಪೂರ್ವಾಹ್ನ ಪ್ರಧಾನಿಯನ್ನು
ಕಾಣ್ತೇನೆ, ಅದು ಸುದ್ದಿಯಾಗ್ತದೆ. ಅಪರಾಹ್ನ ವಿಮಾನದಲ್ಲಿ ಕಲಾಣನಗರದ
ದಾರಿಯಲ್ಲಿರುವಾಗ ರೇಡಿಯೋ ವಾರ್ತಾ ಪ್ರಸಾರದಲ್ಲಿ ತನ್ನ ಹೆಸರು ಬರುತ್ತದೆ....
ಈ ಮಧ್ಯೆ ಪರಶುರಾಮ ಅವಸರದ ಊಟ ಮಾಡಿದ.