ಈ ಪುಟವನ್ನು ಪ್ರಕಟಿಸಲಾಗಿದೆ

126

ಮಿಂಚು

ಝಗಿಸಿದವು. ಶಾಲುಗಳು ಮಿರಮಿರನೆ ಹೊಳೆದುವು. ಕಾಣಿಕೆನೀಡಿಕೆ ಮುಗಿಯು
ವವರೆಗೂ ಧನಂಜಯಕುಮಾರ ಹೊಸ ಮುಖ್ಯಮಂತ್ರಿಯ ಮಗ್ಗುಲಲ್ಲೇ ಇದ್ದ.
ಅಧ್ಯಕ್ಷೆ ಸೌದಾಮಿನಿಯದು ಚುಟುಕು ಭಾಷಣ,
“ಕಂಠಮುಮ್ಮಳಿಸುಪು ದಶ್ರು ಭರದಿಂದ ಜಡವಾದುದು ದೃಷ್ಟಿ-ಅಂತ
ಮಹಾಕವಿ ಕಾಳಿದಾಸ ಹೇಳಿರಲಿಲ್ಲವೇ? ಅಂಥ ಅವಸ್ಥೆ ನನಗೀಗ ಒದಗಿದೆ. ಈ
ಬೀಳ್ಕೊಡುಗೆ ಕಿಷ್ಕಿಂಧೆಯ ಇತಿಹಾಸದಲ್ಲಿ ದಾಖಲೆಯಾಗುವ ಸಮಾರಂಭ. (ಮೊದಲ
ಸಾಲಿನಲ್ಲಿದ್ದ ಶಿವುಭಾವು ಚೌಗುಲೆಯತ್ತ ನೋಡಿದಳು.) ಜನನಾಯಕ ಜಾಣಪ್ಪಾಜಿ,
ಕಿಷ್ಕಿಂಧೆ ನಿಮ್ಮ ತಾಯಿನಾಡು, ನೀವು ಎಲ್ಲೇ ಇರಿ, ಎಂತೇ ಇರಿ, ನಮ್ಮನ್ನು
ಮರೆಯದಿರಿ. (ಕರವಸ್ತ್ರವನ್ನು ಕಣ್ಣಿಗೆ ಮುಟ್ಟಿಸಿ) ಇನ್ನು ಹೆಚ್ಚು ಹೇಳಲಾರೆ.
ಹೋಗಿಬನ್ನಿ ..ಸಂಗಪ್ಪ”
ಬಾಲಾಜಿ ಸ್ವಾಗತ ಭಾಷಣ ಮಾಡಿದ್ದ. ಸಂಗಪ್ಪನಿಂದ ವಂದನಾರ್ಪಣೆ.
ಅದೂ ಒಂದು ಭಾಷಣವೇ, ಇನ್ನೇನು ಮುಗಿಸಬೇಕು. ಅಷ್ಟರಲ್ಲಿ, ಮುಖ್ಯಮಂತ್ರಿ
ಹಿಂದೆಯೇ ಸೂಚಿಸಿದ್ದು ನೆನಪಾಯಿತು. ಅವನೆಂದ:
"ಕಾಣಿಕೆಗಳನ್ನು ನೋಡಿ ಸಂತೋಷಪಟ್ಟಿರಲ್ಲ ? ಅದಕ್ಕೆಲ್ಲ ಕಾರಣರು ಸಣ್ಣ
ಪೇಟೆ ಸಾಹುಕಾರ ಧನಂಜಯಕುಮಾರರು. (ಇಲ್ಲಿ ನಿಂತಿದ್ದಾರೆ ನೋಡಿ) ಇವರಿಗೆ
ನಾವು ಅತ್ಯಂತ ಕೃತಜ್ಞರು.”
ಸಮಾರಂಭ ಮುಗಿಯಿತೆಂದು ಜನ ಎದ್ದರು. ಬ್ಯಾಂಡು ಜನಗಣಮನ ಬಾರಿ
ಸಿತು.
ಮೇಲಿನ ವರದಿಗೆ ಬಾಲಂಗೋಚಿ ಇಷ್ಟೆ:
ಮಾರನೆಯ ಮಧ್ಯಾಹ್ನ ಕಿಷ್ಕಿಂಧೆಯ ರಾಜ್ಯಪಾಲರು ಜಾಣಪ್ಪನವರ ಗೌರ
ವಾರ್ಥ ಆತ್ಮೀಯ ಭೋಜನ ಕೂಟ ಏರ್ಪಡಿಸಿದರು, 'ಆಮಂತ್ರಿತ ಗಣ್ಯರಲ್ಲಿ
ಧನಂಜಯಕುಮಾರ ಸಾಹುಕಾರರಿದ್ದರು' (ಪತ್ರಿಕಾವರದಿಯಿಂದ) ರಾತ್ರೆಯ ರೈಲಿ
ನಲ್ಲಿ ಜಾಣಪ್ಪನವರು ತಿರುವನಂತಪುರಕ್ಕೆ ಹೊರಟರು, ಆಹಾರದ ಬಗ್ಗೆ ಹೆಚ್ಚು
ಗಮನವಿಡಬೇಕಾದ ವಯಸ್ಸು, ತಮ್ಮ ಖಾಸಾ ಅಡುಗೆಯವನನ್ನೂ ಕರೆದೊಯ್ದರು.
(ಉಸ್ತುವಾರಿಗೆ ಹೆಂಡತಿ).
“ಮಾತಾಜಿ, ಒಮ್ಮೆ ಕೇರಳಕ್ಕೆ ಬನ್ನಿ, ವಿದ್ಯುಚ್ಛಕ್ತಿ ವಿಷಯವೋ ಇನ್ನೇನೋ
ಅಲ್ಲಿನ ಮುಖ್ಯಮಂತ್ರಿ ಜತೆ ಮಾತುಕತೆ ಇಟ್ಕೊಳ್ಳಿ.”
"ಆಗಲಿ, ಆಗಲಿ.”