ಈ ಪುಟವನ್ನು ಪರಿಶೀಲಿಸಲಾಗಿದೆ

139






೧೫

ವಿಧಾನ ಮಂಡಲದ ಮುಂಗಡಪತ್ರ ಅಧಿವೇಶನ ಮುಗಿದ ಬಳಿಕ ಒಂದು ದಿನ.
ಮುಖ್ಯಮಂತ್ರಿಯಿಂದ ಆದೇಶಿತನಾಗಿ ಪರಶುರಾಮ ವಾರ್ತಾ ಇಲಾಖೆಯ
ನಿರ್ದೇಶಕರಿಗೆ ಫೋನ್ ಮಾಡಿದ :
“ಸರಕಾರ ಜಾಹೀರಾತು ನೀಡುತ್ತಿರುವ ಎಲ್ಲ ಪತ್ರಿಕೆಗಳ ಪಟ್ಟಿ, ಅವರಿಗೆ ಪ್ರತಿ
ವರ್ಷ ಸಂದಾಯವಾಗುತ್ತಿರುವ ಹಣ-ಈ ಎಲ್ಲ ವಿವರ ಸಿ.ಎಂ.ಗೆ ಬೇಕಂತೆ.”
“ಬಜೆಟ್ ಪಾಸಾಯ್ತು, ಅಧಿವೇಶನ ಮುಗೀತು. ಇನ್ನು ಯಾಕೆ ವಿವರ ?”
“ಕಿಷ್ಕಿಂಧೆಗೆ ಸೌದಾಮಿನಿ ಪ್ರಣಾಳಿಕೆ-ಅಂತ ಜಾಹೀರಾತು ಕೊಡ್ತಿದೀರಲ್ಲ ?
ಆ ಪ್ರಣಾಳಿಕೆಯಲ್ಲಿ ಮಿತವ್ಯಯ ಅಂತ ಒಂದು ಶಬ್ದ ಇದೆ. ಅದಕ್ಕೆ ಸಂಬಂಧಿಸಿ”
“ಮಾತಾಜಿ ಹೇಳಿದರೊ ? ನಿಮ್ಮದೇ ತರ್ಕವೊ ?”
“ಹೇಗೆ ಬೇಕಾದರೂ ಭಾವಿಸಬಹುದು.”
“ನಿಮ್ಮದೇ ಐಡಿಯ ಆದರೆ, ನೀವು ಬೇಗನೆ ವಾರ್ತಾ ಇಲಾಖೆಯ ನಿರ್ದೇಶಕ
ರಾಗೀರಿ,”
“ಯಾರಿಗೆ ಗೊತ್ತು ? ನೀವು ಕಮೀಷನರಾಗಿ ಭಡ್ತಿ ಹೊಂದಿದರೆ....”
ತಮಾಷೆ ಸಾಕು, ಇನ್ನು ಎರಡು ದಿವಸಗಳಲ್ಲಿ ಎಲ್ಲ ವಿವರ ತಂದುಕೊಡೇನೆ.”
“ಮಿತವ್ಯಯ ಅಂತ ಜವಾನರನ್ನೆಲ್ಲ ಮನೆಗೆ ಕಳಿಸಿದಿರಾ ?”
“ಆಗಲಪ್ಪ, ಜವಾನನೇ ತಂದ್ಯೋಡ್ತಾನೆ.”
....ವಾರ್ತಾ ಇಲಾಖೆಯಿಂದ ಬಂದ ಕಟ್ಟನ್ನು ಸೌದಾಮಿನಿ ನಿವಾಸಕ್ಕೆ-ಗೃಹ
ಕಾದ್ಯಾಲಯಕ್ಕೆ ಒಯ್ದು , ತಾನೇ ಬಿಚ್ಚಿದಳು, ಕಣ್ಣುಗಳನ್ನು ಕಿರಿದುಗೊಳಿಸಿ ಪಟ್ಟಿ
ಯನ್ನು ಹಲವು ಹಾಳೆಗಳನ್ನು ಎರಡು ಬಾರಿ ಓದಿದಳು, (ಕಣ್ಣು ಕಿರಿದುಮಾಡಲು
ದೃಷ್ಟಿ ತೊಂದರೆ, ಚಾಳೀಸ್ ? ದೈಹಿಕ ಸಂಪತ್ತು ಮೂವತ್ತು ಎನ್ನಬಹುದು.
ಆದರೆ ಕಣ್ಣು ? 'ಮುಂದೆ ದಿಲ್ಲಿಗೆ ಹೋದಾಗ ಕಾಂಟಾಕ್ಟ್ ಲೆನ್ಸ್ ಹಾಕಿಸಿಕೊಳ್ಳ
ಬೇಕು. ಇರಲಿಲ್ಲ. 'ತುತ್ತೂರಿ' ಎಂಬ ಹೆಸರು ಆ ಪಟ್ಟಿಯಲ್ಲಿರಲಿಲ್ಲ. ಪತ್ರಿಕೆ
ಗಳನ್ನು ನೋಡಿದಳು. ತನ್ನ ಭಾವಚಿತ್ರವೊ ಹೇಳಿಕೆಯೊ ಭಾಷಣವೂ ಅಚ್ಚಾಗಿದ್ದ
ಸಂಚಿಕೆಗಳನ್ನೇ ಆರಿಸಿ ಕಳಿಸಿದ್ದ, ಆ ನಿರ್ದೆಶಕ ಗುರುತು ಹಾಕಿದ ಆ ಭಾಗಗಳನ್ನೆಲ್ಲ
ಮತ್ತೆ ನೋಡಿದಾಗ ಮನಸ್ಸಿಗೆ ಹಾಯೆನಿಸಿತು.
ಗುಪ್ತಚಾರ ದಳದ ಮುಖ್ಯಸ್ಥನಿಗೆ ಸೌದಾಮಿನಿ ಬರಹೇಳಿದಳು.