ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 163

ದುಃಖಾಶ್ರುವೊ ? ಆನಂದಾಶುವೊ ? ಊಹಿಸುವ ತರ್ಕಿಸುವ ಗೊಡವೆಗೆ ಹೋಗದೆ ಸೌದಾಮಿನಿ ಮೌನವಾಗಿ ಕುಳಿತಳು. ಕಂಬನಿಯ ಒರತೆ ನಿಂತಿತು.

   “ಇದು ಸಂತೋಷದ ಮಹಾಪೂರ, ಮಿನಿ. ದಂಡೆ ದಾಟಿ ಆಚೆ ಈಚೆ ಹರಿ 

ಯಿತು, ಅಷ್ಟೆ. ನಾನು ಮಲಕೊಳ್ತೀನಿ ಇನ್ನು."

   “ಜುಮ್ಕಿಗೆ ಅಲಾಗೆ ನಿದ್ದೆ ಬಂದಿದೆ.' 
   ಮಲಗಿದ ಮೃದುಲಾಗೆ ಸೌದಾಮಿನಿ ರಗ್ ಹೊದಿಸಿದಳು.  
   ರಗ್‍ನ ಸಂದಿಯಿಂದ ಮಾತು ಕೇಳಿಸಿತು: 
   “ನೀನು ಸಾಕ್ಷಾತ್ ಯೋಗಿನಿಯೇ ಆಗಿದೀಯ, ಆತ್ಮ ಸಂಯಮವೇ ನಿನಗೆ 

ಶ್ರೀರಕ್ಷೆ ಶುಭರಾತ್ರಿ!" “ಗುಡ್‍ನೈಟ್,”

              *                *                 *
  ಪತ್ರಿಕೆಗಳಲ್ಲಿ ಅನಾಥಾಶ್ರಮ ಪ್ರತಿಷ್ಠಾನ ಎಂದೆಲ್ಲ ಓದಿದ ವೇಲೆ ಪ್ರತಿಪಕ್ಷದ 

ಮುಖಂಡ ಶ್ರೀಮಾನ್ ನಾಯಕರಿಗೆ ಮೈ ಪರಚಿಕೊಳ್ಳಬೇಕೆನಿಸಿತು. “ಈ ಮುಖ್ಯ ಮಂತ್ರಿಯ ಪೂರ್ವಜನ್ಮದ ವಾಸನೆ ಬಡೀತಿದೆಯಲ್ಲ” ಎಂದುಕೊಂಡರು. ಸಂಜೆ ರಂಗಸ್ವಾಮಿ ಕ್ಲಬ್ಬಿನಲ್ಲಿ ಸಿಕ್ಕಿದಾಗ ವಿಷಯ ಮತ್ತೆ ಉಸಿರಾಡಿತು.

    “ಪೇಪರ್ ನೋಡಿದ್ರಾ ರಂಗಸ್ವಾಮಿ ?”
    “ಭಾರತಿ ಅನಾಥಾಶ್ರಮ ಪ್ರತಿಷ್ಠನ! ಮಠ ! ಮಾತಾಜಿ! ನೀವು ಪ್ರತಿಪಕ್ಷದ

ಮುಖಂಡರು. ನಿಮ್ಮ ಆರ್ಭಟವೆಲ್ಲ ವಿಧಾನಮಂಡಲದಲ್ಲಿ, ನಾನು ಬೇಕಾದರೆ ಸಾರ್ವಜನಿಕರ ಪರವಾಗಿ ಕೋರ್ಟಿಗೆ ಹೋಗ್ತೇನೆ,”

    “ಗುಟ್ಟು, ಹತ್ತಿರ ಬನ್ನಿ, ತುತೂರಿ ಅನ್ನೋ ಪತ್ರಿಕೆ ಈಗ ಪ್ರಕಟವಾಗ್ತಿ

ದೆಯೊ ?_ಅಂತ ಮುಖ್ಯಮಂತ್ರಿ ವಿಚಾರಿಸಿದರಂತೆ, ಅದರ ಸಂಪಾದಕ ಎಲ್ಲಿದ್ದಾನೆ? ಅಂತಲೂ ಕೇಳಿದರಂತೆ.”

    “ಇನ್ನೂ ಗಂಭೀರವಾದ್ದು ಏನೂ ನಡೀತಾ ಇಲ್ಲವೆ?”
    "ನಾನು ಪಾರ್ಟಿ ಬಿಟ್ಟವನು.  ನೀವು ಅಲ್ಲೇ ಇದೀರಾ. ಸ್ವಲ್ಪ ಕಾರ್ಯಸೌಧ 

ದಲ್ಲಿ ಓಡಾಡಿ ಅವರಿವರಿಗೆ ಹಲ್ಲೋ ಅನ್ನಿ, ನಿಮ್ಮ ಈ ನಿರಾಸಕ್ತಿಯೋಗ ಸರಿಯಲ್ಲ,"

    “ఆಗలి, ಭಾವೀ ಮುಖ್ಯಮಂತ್ರಿಗಳೆ,"
    “ಏನಾದರೂ ಬೇಗನೆ ಮಾಡದಿದ್ದರೆ ಬಾವಿನೇ ಗತಿ.”
    “ಸಂಪುಟದಲ್ಲಿ ಕೊಳ್ಳೆಗೆ ಸಂಬಂಧಿಸಿ ಭಿನಾಭಿಪ್ರಾಯ ಇದೆಯಂತಲ್ಲ ?"
    “ಸಣ್ಣಗೆ ಪಿಸಿಪಿಸಿ ಇದೆ. ತಿದಿ ಊದ್ಬೇಕು. ರಂಗಧಾಮ ಬಂಡಾಯ ಏಳ