ಈ ಪುಟವನ್ನು ಪರಿಶೀಲಿಸಲಾಗಿದೆ

 ಮಿ೦ಚು 193

“ಪ್ರಧಾನಿಯ ಆಪ್ತ ಕಾರ್ಯದರ್ಶಿಯ ಕೈಯಲ್ಲಿ ನನ್ನದೊಂದು ಮನವಿ ಕೊಟ್ಟ ಹೋಗ್ಲೆನೆ.” -

 “ನಿನ್ನಿಷ್ಟ" 
 “ರಾಷ್ಟಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಾ?" - 
 “ಬೇಡ, ಅವರಿಗಲೂ ಪ್ರಧಾನಿಗೂ ವಿರಸ, ನೀನು ಮುದುಕನನ್ನು ಭೇಟಿ

ಯಾದದ್ದು ಗೊತ್ತಾದರೆ ಪ್ರಧಾನಿ ಕೆಂಡವಾಗ್ದಾರೆ.”

 “ನೀವೊಬ್ಬರೇ ನನ್ನ ಹಿತೈಷಿ, ನನಗೆ ಏನು ಸಲಹೆ ಕೊಡ್ರೀರಿ ?" 
 ನಕುಲದೇವ್ ಕೈಗಡಿಯಾರ ನೋಡಿದ. 
 “ನಿಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಿ: ಶಾಸಕರಲ್ಲಿ ಬಹುಸಂಖ್ಯಾಕರು ನಿಮ್ಮ 

ಕಡೆ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಏನೇನು ಕ್ರಮ ಅಗತ್ಯವೋ ಆ ಕ್ರಮ ತೆಗೆದುಕೊಳ್ಳಿ.”

 “ನೀವು ಕಾಶ್ಮೀರದಿಂದ ಬಂದ ಮೇಲೆ ಪ್ರಧಾನಿಗೆ ನನ್ನ ಪರವಾಗಿ ಒಂದು 

ಮಾತು ಹೇಳಿ.' - *

 “ಹೇಳದೆ ಇರ್ತೀನಾ ?” 
 “ಕಿಷ್ಕಿ೦ಧೆ ರಾಜ್ಯಪಾಲರಿಗೂ ಫೋನ್ ಮಾಡಿ. ಚೌಗುಲೆಯಿ೦ದ೦ತೂ ನಾನು 

ಪೂರ್ಣ ಸಹಾಯ ನಿರೀಕ್ಷಿಸ್ತೇನೆ. ಆತನಿಗೂ ನೀವೊಮ್ಮೆ ಫೋನ್ ಮಾಡಿದರೆ ಕೃತಜ್ಞ ೪ಾಗ್ತೇನೆ.” - -

 “ಭಿನ್ನಮತೀಯರ ಕಿರಿಚಾಟದಿಂದ ಗಾಬರಿಯಾದೆಯ? ರಾಜಕೀಯದಲ್ಲಿ 

ಇದೆಲ್ಲ ಸಾಮಾನ್ಯ, ಮಿನಿ."

 “ನನಗಿದೆಲ್ಲ ಹೊಸದು.” 
 “ಹೊತ್ತಾಯು, ಹೋಗ್ರಿಡ್ತೀನಿ. ಕಾಣಿಕೆಗಾಗಿ ಥಾಂಕ್ಸ್. ನನ್ನ ಮರುಕಾಣಿಕೇನ 

ಮುಖ್ಯಮಂತ್ರಿಗಳ ಸಭೆಗೆ ನೀವು ಬಂದಾಗ ಸಲ್ಲಿಸ್ತೀನಿ."

 ಸೌದಾಮಿನಿ ಇಳಿದಳು. ಬಾಗಿಲು ಮುಚ್ಚಿಕೊಂಡಿತು. ಅದರಲ್ಲಿ ಕಿಟಿಕಿ 

ಗಾಜು ಭದ್ರವಾಗಿತ್ತು. ಮಾತನಾಡಿಯೂ ಪ್ರಯೋಜನವಿಲ್ಲ. ಆ ಮಾತು ಒಳಗಿನ ವರಿಗೆ ಕೇಳಿಸುವುದಿಲ್ಲ. ಮೋಹಕ ನಗೆ ಬೀರಲು ಯತ್ನಿಸುತ್ತ ಕೈ ಜೋಡಿಸಿದಳು. ಆತ ಅಂಗೈಯ ಬೆರಳು ತುದಿಗಳನ್ನು ತುಟಿಗೆ ಮುಟ್ಟಿಸಿದ.

        *               *                      *
 ನಕುಲದೇವ ಹೋದ ಸ್ವಲ್ಪ ಹೊತ್ತಿನಲ್ಲೆ ಫೆರ್ನಾಂಡೀಸ್ ಮತ್ತು ಸಿತಾರಾ 

ಬಂದರು. ರಾಷ್ತ್ರಾಪಕ್ಷದ ಕಾರ್ಯದರ್ಶಿ ಬ೦ದು ಹೋದರೆ೦ದು ತಿಳಿದಾಗ, ಕಿಷ್ಟಿಂಧೆಯ ಮೇಲೆ ಕವಿದಿರುವ ಮೋಡಗಳು ಚೆದರಿ ಹೋಗಲೂಬಹುದು, ಎಂದುಕೊಂಡರು.

 13