ಈ ಪುಟವನ್ನು ಪರಿಶೀಲಿಸಲಾಗಿದೆ

ಮಿ೦ಚು 197

    “ನಿಮ್ಮಲ್ಲಿ ಸೊಗಸಾಗಿ ಟೈಪ್ ಮಾಡುವವರು ಯಾರು ?"
    "సిತಾರಾ," ఎంದ ಫೆರ್ನಾ೦ಡೀಸ್. 
    “ಮೂರು ಪ್ರತಿ ಮಾಡಮ್ಮ, ನೀವು ಫೆರ್ನಾಡೀಸ್, ಕಲ್ಯಾಣನಗರಕ್ಕೆ ಒಂದು 
 ಲೈಟ್ನಿಂಗ್ ಕಾಲ್ ಹಾಕಿ_ವಾರ್ತಾ ಇಲಾಖೆಯ ನಿರ್ದೆಶಕನಿಗೆ. ಇಲ್ಲಿದೆ ನೋಡಿ, 
 ఒబ్చ ಸಾಹಿತಿ ಸುದ್ದಿ. ಮುಖ್ಯಮಂತ್ರಿಯ ಸಂತಾಪ ವ್ಯಕ್ತ ಪಡಿಸಿ ಒಂದು 
 ಪ್ರತಿಕಾ ಪ್ರಕಟಣೆ ಹೊರಡಿಸಲಿ.” 
    ಪರಶುರಾಮ ಮುಖ್ಯಮಂತ್ರಿಯ ಇನ್ನೊಂದು ಸೂಟ್ಖೆಸಿನಿ೦ದ ಲೆಟರ್ 
 ಪ್ಯಾಡ್ ತೆಗೆದು, ಸಿತಾರಾಗೆ ಕೊಟ್ಟ. ಅಕೆ ಟೈಪ್ರೈಟರ್ ಬಳಿಗೊ ಫೆರ್ನಾಡೀಸ್ 
 ಟೆಲಿಫೋನಿನ ಹತ್ತಿರಕ್ಕೂ ಸರಿದರು. 
    ಪ್ರಧಾನಿಯ ಕಾರ್ಯಲಯಕ್ಕೆ ಹೋಗಬೇಕಾದ ಲಕೋಟೆ ಸಿದ್ಧವಾದ ಮೇಲೆ 
 ಮುಖ್ಯಮ೦ತ್ರಿ ಊಟಕ್ಕೆ ಕುಳಿತಳು. ಶ್ರೀಪಾದನೇ ಬಂದು ಹೇಳಿದ್ದ :
    "ಮಾತಾಜಿ ಭೋಜನಕ್ಕೆ ದಯಮಾಡಿಸಬೇಕು." 
    'ರುಚಿಕರ ಅಡುಗೆ. ಒಂದು ತುತ್ತು ಹೆಚ್ಚು ಉಂಡರೇನು ? ಇನ್ನು ನಾನು 
 ಟೆನ್ನಿಸ್ ಆಡುವುದು ಅಷ್ಟ್ರರಲ್ಲೇ ಇದೆ. ಇನ್ನು ಇರೋದು ಹೋರಾಟ ಕೈ ಕಾಲು 
 ಗಳಲ್ಲಿ ಒಂದಿಷ್ಟು ಶಕ್ತಿ ಇದ್ದರಲ್ಲವೆ ಮೇಲು?' ಎಂದು ಸೌದಾಮಿನಿ ಯೋಚಿಸಿದಳು. 
 "ಇಷ್ಟು ಬೇಗ ಸೋಲು ಒಪ್ಕೊಲಳ್ತೀಯಾ ?'ಎಂದು ಒಳದನಿ ಕುಟುಕಿತು, 'ಇವತ್ತು 
 ರಾತ್ರೆ ಬಾಬಾಜಿಗೆ ಫೋನ್ ಮಾಡಬೇಕು' ಎಂದುಕೊಂಡಳು. 
    ಸಿಬ್ಬಂದಿಯ ಊಟವೂ ಆದ ಮೇಲೆ ಫೆರ್ನಾಂಡೀಸ್ನನ್ನು ಸೌದಾಮಿನಿ 
 ಕರೆದಳು. 
    “ಕಿಷ್ಟಿಂಧೆಗೆ ನಿಮ್ಮಿಂದೊಂದು ಸೇವೆ ಸಲ್ಲಬೇಕಲ್ಲ?” 
    “ನಾನು ಇರೋದೇ ಅದಕ್ಕಲ್ಲವ? ಹೇಳಿ, ಮಾತಾಜಿ.” 
    “ಹೋದ ಸಲ್ಮಬಂದಾಗ ಅಶೋಕದಲ್ಲಿ ಸಂಪಾದಕರೊಡನೆ ಸಂವಾದ ಮಾಡಿದ್ದೆ 
 ವಲ್ಲ ?”
    “ಈ ಸಲವೂ ಒ೦ದು ?" 
    “ಬೇಡ. ಅವರೊಡನೆ ಮಾತುಕತೆಗೆ ಇದು ಸರಿಯಾದ ಸಮಯವಲ್ಲ....” 
    "....."
    “ಆ ದಿನ ನಿಮ್ಮ ಗೆಳೆಯ ಪತ್ರಕರ್ತ ಒಬ್ಬ ಬಂದಿದ್ದ ...." 
    "ಹೌದು."
    "ಸಾಯ೦ಕಾಲ ಈ ಲಕೋಟೆ ಮೇಲೆ ಅವನನ್ನು ಕರಕೊಂಡು 
 ಬರೀರಾ ? ನಾಳೆ ಬೆಳಗ್ಗಿ ನ ಯಾವುದಾದರೂ ಪತ್ರಿಕೇಲಿ ಕಿಷ್ಕಿ೦ಧೆ ವಿಷಯ 
 ಲೇಖನ ಪ್ರಕಟವಾಗಬೇಕು. 'ಸೌದಾಮಿನಿಯ ಪಟ್ಟ! ಭಿನ್ನಮತೀಯರಿಗೆ ಆಘಾತ!'