ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 199 ಟಿಪ್ಪಣಿ ಕೆಲಸ ಮುಗಿದ ಬಳಿಕ ವಿಕಾಸ್ ಕೇಳಿದ:

“ನಾನು ತಮ್ಮನ್ನು ಕಂಡೆ ಅಂತ ಮುದ್ರಿಸೋದು ಬೇಡ ಅಲ್ಲವಾ?” 

"ಬೇಡ, ತಿಳಿದು బంದಿದೆ అంತ బರೀರಿ."

ಪರಶುರಾಮ ಬ೦ದು. “ಕಾಫಿ ತರಿಸಲೆ ?" ಎ೦ದ. 

“ಬೇಡ, ನಾನು ತಕ್ಷಣ ಕಾರ್ಯಾಲಕ್ಕ. ಹೋಗಬೇಕು. ಈ ವಿಷಯ ಬರೆದು ಮುಗಿಸಬೇಕು. ಸ್ವಲ್ಪ ಜೀಪ್-” “ಫೆರ್ನಾಂಡೀಸ್ ಬಿಟ್ಟ ಬರ್ಯನೆ . ನಿಮ್ಮ ಪತ್ರಿಕಾಲಯ ನಾನು ನೋಡ ಬೇಕು. ಇವತ್ತಲ್ಲ, ಮುಂದಿನ ಸಲ." “ಒಂದು ಪ್ರಶ್ನೆ : ಈ ಐಕ್ಯ ಭಂಜಕರಿಗೆ ಪರಾಭವ ಶತಸ್ಸಿದ್ಧ ಅಂತ ನೀವು ಖಡಾಖಂಡಿತವಾಗಿ ಹೇಳ್ತೀರಾ ?" “ಭಾರತ ಮಾತೆಯ ಹೆಸರಲ್ಲಿ ಆಣೆ ಮಾಡಿ ಹೇಳ್ತೀನೆ. ಐಕ್ಯ ಭಂಜಕರ ಪರಾಭವ ಶತಸ್ಸಿದ್ಧ-ಶತಸ್ಸಿದ್ಧ!"

"...."
 “ನಾಳೆ ಬೆಳಗ್ಗೆ ಉಪಾಹಾರಕ್ಕೆ ಇಲ್ಲಿಗೇ ಬನ್ನಿ. ಫೆರ್ನಾಂಡೀಸ್ ಕರ ಕೊಂಡ್ಬರ್ತಾನೆ.

“ನಾಳೆ ಆರೂವರೆಗೆ ಬಂದು ಪತ್ರಿಕೆಯ ಪ್ರತಿ ಕೊಟ್ಟು ಹೊರಟ್ಟಿಡ್ಡೇನೆ. Story ನೋಡಿದ ತಕ್ಷಣ ಬೇರೆ ಪತ್ರಿಕೆಯವರು ಇಲ್ಲಿಗೆ ಫೋನ್ ಮಾಡಬಹುದು, ಬರಬಹುದು. ಕಾಫಿ ಉಪಾಹಾರವೆಲ್ಲ ಇನ್ನೊಮ್ಮೆ, ಬರಲಾ?” “ಹೋಗಿ ಬನ್ನಿ. ಈ ಉಪಕಾರವನ್ನ ಮರೆಯೋದಿಲ್ಲ.”

     *                *                 *
   ರಾತ್ರೆ ಬಾಬಾಜಿಗೆ, ಜಗದಲಪುರಕ್ಕೆ, ಫೋನ್ ಮಾಡುವ ಯತ್ನ ವಿಫಲ ವಾಗಲಿಲ್ಲ.

ಸೌದಾಮಿನಿಯ ಧ್ವನಿ ಕೇಳಿ ಬಾಬಾಜಿ ಅಂದರು : “ಕಲ್ಯಾಣನಗರದಿ೦ದ ಮಾತಾಡ್ತಿದೀಯ? ಕರೆದಿಲ್ಲಿಯಿಂದ ಅಂತ ಅಂದ್ರಲ್ಲ....” “ದಿಲ್ಲಿಯಲ್ಲೇ ಇದ್ದೇನೆ ನಿನ್ನೆ ರಾತ್ರೆಯಿಂದ. ಕಿಷ್ಕಿ೦ಧೆಯಲ್ಲಿ ಶಾಸಕ ಪಕ್ಷ ದೊಳಗೆ ಸ್ವಲ್ಪ ತೊಂದರೆಯಾಗಿದೆ. ಚೆನ್ನೈಯಿಂದ ಸ್ವಾಮಿಜಿ ಬಂದಿದ್ದಾರೆ, ನಮ್ಮ ರಾಜಧಾನಿಯ ಧರ್ಮಮಠದ ಪ್ರಗತಿಯ ಬಗ್ಗೆ ಅವರು ಬರೆದಿರಬೇಕು. ಹಲೋ, ಕೇಳಿಸ್ತಿದೆಯೊ ಬಾಬಾಜಿ? ನೀವು ನನಗೆ ಮರು ಹುಟ್ಟು ನೀಡಿದಿರಿ. ಈಗ ಬೆಳೆಯೋದಕ್ಕೆ-ಹಲ್ಲೋ-ಸ್ವಲ್ಪ ಸಹಾಯ ಮಾಡಿ." “ಆಲ್ಲಿ ನಕುಲದೇವ್ ಇದ್ದಾರಾ?” “ಇಲ್ಲ, ಕಾಶ್ಮೀರಕ್ಕೆ ಹೋಗಿದ್ದಾರೆ. ವಾರಾಂತ್ಯದಲ್ಲಿ ವಾಪಸಾಗ್ತಾರೆ. ದಯವಿತಟ್ಟು ಅವರಿಗೆ ಫೋನ್ ಮಾಡಿ, ಬಾಬಾಜಿ."