ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 217

ಬಿರಿಯುತ್ತಿದ್ದ ಸೊಪ್ಪಿಗೆ ಅವನೊಂದು ಏಟುಕೊಟ್ಟ, ಅತ್ತ ಕಡೆ ಎಲೆ ಆರಿಸುತ್ತ ಲಿದ್ದ ಒಂದು ಆಡು 'ಮೆಹೆ ಮೆಹೆ' ಎನ್ನುತ್ತ ಓಡಿಹೋಯಿತು. ಮೆರವಣಿಗೆಯ ಕಾರಣದಿಂದ ಡೊಂಕು ದಾರಿ ಹಿಡಿದಿದ್ದ ಸಿಟಿ ಬಸ್ಸುಗಳು ಮತ್ತೆ ಆ ಮಾರ್ಗದಲ್ಲೇ ಓಡಾಡತೊಡಗಿದುವು,

   ....ಅವತ್ತಿನ ಅಂಚೆಯಲ್ಲಿ 'ಖಾಸಗಿ' ಎಂದು ಮೇಲೆ  ಬರೆದಿದ್ದ  ಒಂದು

ಲಕೋಟೆ ಬಂತು.ಪರಶುರಾಮನಿಂದ ಅದನ್ನು ಪಡೆದು ಸ್ವತಃ ಸೌದಾಮಿನಿಯೇ ಒಡೆದಳು. 'ಭಾರತ್ ಸತ್ತಾ' ದೈನಿಕದ ಮತ್ತು 'ಪ್ರೆಸೆಂಟ್' ಸಾಪ್ತಾಹಿಕದ ಪುಟ ಗಳು. ಮೃದುಲಾಬೆನ್ ಮತ್ತು ಅವಳ ತಂಡ ಕಿಷ್ಟಿಂಧೆಗೆ ನೀಡಿದ ಭೇಟಿಯನ್ನು ಕುರಿತು ಹಿಂದಿಯಲ್ಲಾ ಇಂಗ್ಲಿಷಿನಲ್ಲೂ ಲೇಖನಗಳಿದ್ದುವು.ಸಚಿತ್ರ,ಸೌದಾಮಿನಿಯ ದೊಡ್ಡದಾದ ಒಂಟಿ ಚಿತ್ರವೂ ಇತ್ತು ಎರಡೂ ಲೇಖನಗಳಲ್ಲಿ, ಕಾಗದದಲ್ಲಿ ಮೃದುಲಾಬೆನ್ ಬರೆದಿದ್ದಳು :

         ಪ್ರೀತಿಯ ಸೌದಾ,
         ಮುಂಬಯಿ ತಲಪಿದೊಡನೆ  ಕಿಷ್ಕಿಂಧೆಯ ಮುಖ್ಯಮಂತ್ರಿಗೆ  ನಾನು 
   ಬರೆದ ಔಪಚಾರಿಕ ಪತ್ರ ಆಗಲೇ ಕೈಸೇರಿರಬಹುದು. (ಸೇರಿತು)    ಇದನ್ನು 
   బರೆಯುತ್ತಿರುವುದು ನನ್ನ  ಆದರಣೀಯ  ಗೆಳತಿ  ಸೌದಾಗೆ,    ಇನ್ನೊಂದು
   ಹೆಸರಿನಿಂದಲೇ ಸಂಬೋಧಿಸಬಹುದಾಗಿತ್ತು, ಆದರೆ ಈಗಿನ   ಪರಿಸ್ಥಿತಿಯಲ್ಲಿ
   ಅದು ಸರಿಯಲ್ಲ  (ಸೌದಾ : ಸ್ವಗತ—'ಈಗಿನ ಪರಿಸ್ಥಿತಿಯಲ್ಲಿ ಅದೇ ಸರಿ!')
   ಎಷ್ಟೆ೦ದರೂ ನೀವು ಮುಖ್ಯಮಂತ್ರಿ,   ನಾನು ಸಮಾಜ ಸೇವಿಕೆ.  ನಿಮ್ಮದು
   ಐಂದ್ರಜಾಲಿಕ ಸಾಧನೆ.ನನ್ನಿಂದ ಅಂಥದು ಕನಸಿನಲ್ಲಲೊ ಸಾಧ್ಯವಿಲ್ಲ.
        ಈಗ ಇಲ್ಲಿ ಜಡಿಮಳೆ,   ಮುಂಬಯಿ  ಮಳೆ  ನಿಮಗೆ  ನೆನಪಿದ್ದೀತು. 
   ಬಾಲ್ಕನಿಗೆ ಹೋಗೋಣ ಎಂದರೆ ಇರಿಚಲು ಕಾಟ.   ಆದರೂ ಹುಟ್ಟೂರಿನ 
   ಮಳೆ ಇಷ್ಟವಾದ್ದೇ ಅಲ್ಲವೆ ? 
        ವಿನೋದನಿಗೆ ಕಿಷ್ಟಿಂಧಾ ಯಾತ್ರೆಗೆ ಆಮಂತ್ರಣ ಬೇಕಂತೆ,  ಸರಕಾರದ  
   ಅತಿಥಿಯಾಗಿ  ಇಡೀ  ರಾಜ್ಯ  ಸುತ್ತಿ ಕಿಷ್ಕಿಂಧೆಯ  ಮೇಲೆ  ಒಂದು  ಪುಸ್ತಕ
   ಬರೀತಾನಂತೆ.    ಅವನ ಗೆಳೆಯನೊಬ್ಬ   ವಿಶ್ವವಿಖ್ಯಾತ    ಪೇಂಟರ್__
   ಪೋರ್ಟ್ರೇಯ್ಟ್   ಪೇಂಟರ್__, ನೀವು ಪರಸೊತ್ತು ಮಾಡಿಕೊಂಡು ಅವನಿಗೆ
   ಸಿಟಿಂಗ್ಸ್  ಕೊಡಬೇಕಂತೆ__ಇನ್ನೊಬ್ಬ    ಶಿಲ್ಪಿ ಅವನೂ ಮಿತ್ರನೇ,   ಎದೆ 
   ಮಟ್ಟದ ಶಿಲ್ಪಕೃತಿ ರಚಿಸಿದರೆ ಹೇಗೆ-ಅಂತ ವಿನೋದ ಕೇಳ್ತೀದ್ದಾನೆ.     ಈ
   ಎಲ್ಲ ಕಾರ್ಯಕ್ರಮದಿಂದ ನಿಮ್ಮ ಬೊಕ್ಕಸ ಖಂಡಿತ ದಿವಾಳಿಯಾಗುವುದಿಲ್ಲ 
   ವಂತೆ,
        ಈ ಲೇಖನಗಳನ್ನು ಬಹಳ ಹಿಂದೆಯೇ ಕಳಿಸಬೇಕಾಗಿತ್ತು,    ಕ್ಷಮಿಸಿ,