ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು227

ಯಾದಾಗ, ಅರ್ಹರೆಂದು ಕಂಡವರಿಗೆ ತಾನೇ ನಮಸ್ಕರಿಸತೊಡಗಿದಳು. ಆಗ ಪ್ರತಿ
ನಮಸ್ಕಾರ ದೊರೆಯುತ್ತಿತ್ತು. ಕ್ರಮೇಣ ಅವಳು ಗಣನೀಯ ವ್ಯಕ್ತಿಯಾದಾಗ, ಪ್ರತಿ
ದಿನವೂ ನಮಸ್ಕಾರಗಳು ಹೇರಳವಾಗಿ ಸಿಗತೊಡಗಿದುವು.ಒಂದು ದಿವಸ ಕುತೂ
ಹಲದಿಂದ ನಮಸ್ಕಾರಗಳನ್ನು ಎಣಿಸಿದ್ದಳು. ಸೆರಗಿಗೆ ಮನೆ ಸೇರುವ ಹೊತ್ತಿಗೆ ಅಂದು
ಒಟ್ಟು ದೊರೆತುದು ನಾಲ್ವತ್ತಾರು ! ಈಗ ಸಹಸ್ರಾರು. ಸಹಸ್ರ ವಂದನೆಗಳಿಗೆ
ಪ್ರತಿಯಾಗಿ ಒಂದನ್ನು ತಾನು ಕೊಟ್ಟರೆ ಸಾಕು, ಗೋಣು ಆಡಿಸಿದರೂ ಸರಿಯೆ.
“ಪರಶುರಾಮ್....”
“ಬಂದೆ ಮಾತಾಜಿ.”
ಬಂದವನಿಗೆ ಅವಳಂದಳು :
“ಚೌಗುಲೆಗೆ ಫೋನ್ ಮಾಡ್ತೀನೆ. ಹನ್ನೊಂದು ಗಂಟೆಗೆ ಹೋಗಿ ಭೇಟಿ
ಯಾಗು.”
“ಈಗ ಮನೆಯಲ್ಲಿದ್ದಾರೆ.”
“ಕೊಡು.”
ಅಲ್ಲಿಂದ : “ನಮಸ್ತೆ ಮಾತಾಜಿ”
ಇಲ್ಲಿಂದ : “ಪರಶುರಾಮರ ಸರ್ವಿಸ್ ರೆಕಾರ್ಡ್ಸ್ ಸ್ವಲ್ಪ ನೋಡಿ, ವಾರ್ತಾ
ಇಲಾಖೇಲಿ ಅವರಿಗೆ ಯಾವ ಹುದ್ದೆಯ ಸಮೀಕರಣವಾಗದೇಂತ ಪರಿಶೀಲಿಸಿ....
ಸರಿ.... ಅನುಜ್ಞೆ ಹೊರಡಿಸಿ...ದುಡಿಮೆ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ
ಯಾಗಿಯೇ....ಆಜ್ಞಾಪತ್ರ ಇಲ್ಲಿಗೆ ಕಳಿಸಿಕೊಡ್ತೀರಾ ? ಥ್ಯಾಂಕ್ಸ್.”
ಸೌದಾಮಿನಿ ಏನನ್ನಾದರೂ ಹೇಳಬಹುದೆಂದು ಪರಶುರಾಮ ಇದಿರು
ನೋಡಿದ. ಮೌನದಿಂದ ಅಚ್ಚರಿಯಾಯಿತು,
“ಇದೇನು ಮಾತಾಜಿ?____ಅಂತ ಕೇಳು,”
ಅವನ ತುಟಿಗಳು ಬಿಮ್ಮನೆ ಬಿಗಿದುವು. ಆಕೆಯೇ ಹೇಳಿದಳು :
“ಚೌಗುಲೆ ಜೊತೆ ನಾನೇನು ಮಾತನಾಡಿದೆ ಅಂತ ಊಹಿಸು ನೋಡೋಣ.”
“ನನಗೆ ತಿಳೀದು, ಮಾತಾಜಿ.”
“ನಿನ್ನದೊಂದು ತಮಾಷೆ ಸ್ವಿಚ್ಚು. ಒಂದು ಸಲ ಜೋರಾಗಿ ಉರಿದರೆ,
ಇನ್ನೊಂದ್ಸಲ ಮಿಣಿಮಿಣಿ. ಲಾಟರೀಲಿ ನಿನ್ನ ಹಣೆಬರಹ ಹೇಗಿರುತ್ತೆ ನೋಡೋಣ.”
ನಸುನಕ್ಕಂತೆ ಮಾಡಿ ಪರಶುರಾಮ ಸುಮ್ಮನಾದ. ಒಮ್ಮೆಲೆ ಆತಂಕದ ಮಾತು
ಹೊರಟಿತು :
“ನನ್ನ ಕುಟುಂಬದ ವಿಷಯ ಏನು ಮಾಡಲಿ ಮಾತಾಜಿ ?”
“ಇಬ್ಬರೆಂಡಿರ ಕಾಟ...! ಕಾನೂನು ಕ್ರಮ ಇತ್ಯಾದಿಗೆ ಹೋಗೋಡ, ಎರಡು
ಮನೆ ಮಾಡು. ಇಬ್ಬರನ್ನೂ ಪ್ರೀತಿಸು. ಇಬ್ಬರಿಗೂ ಹಣಕಾಸು, ಸೀರೆ, ಆಭರಣ
ಕೊಡು. 'ಎರಡು ಮನೆ' ಇರುವವರು ಎಷ್ಟು ಜನ ಇಲ್ಲ ? ಅರ್ಥವಾಯ್ತಾ ?”