ಈ ಪುಟವನ್ನು ಪರಿಶೀಲಿಸಲಾಗಿದೆ




240                                                                         ಮಿಂಚು
     ಎಡಗಡೆಯವರೊಡನೆ ನಕುಲದೇವರ ಗುಸು ಗುಸು, ಬಲಗಡೆಯವಳೊಡನೆ
ಗುಸು ಗುಸು.
    ಈಗಿನ ವಾತಾಣರಣವನ್ನು ಗಮನಿಸಿದಾಗ,  ಬಹಿರಂಗ  ಮತಗಣನೆ ಮೇಲು
ಎಂದು  ವೀಕ್ಷಕ  ಮಹಾಶಯನಿಗೆ  ಅನಿಸಿತು.  ರಹಸ್ಯಮತದಾನದಲ್ಲಿ  ಅಪಾಯ 
ಸಂಭವನೀಯ. ವಿಶ್ವಂಭರನ ಕಡೆಯ  ಕೆಲವರನ್ನು  ಈಕೆ   ಈಗಾಗಲೇ  ಒಲಿಸಿ 
ಕೊಂಡಿದ್ದರೆ ಅವರೆಲ್ಲ  ನಿರ್ಭಯವಾಗಿ  ಪೆಟ್ಟಿಗೆಯಲ್ಲಿ  ಬಚ್ಚಿಟ್ಟುಕೊಂಡು  ಮೋಸ 
ಮಾಡುತ್ತಾರೆ.
    “ಸೌದಾಮಿನಿಜಿಯವರ  ಪಕ್ಷಪಾತಿಗಳು  ಬಲಕ್ಕೆ  ಬನ್ನಿ. ವಿಶ್ವಂಭರಜಿಯವರ 
ಕಡೆಗಿರುವವರು ಎಡಕ್ಕೆ."
     ನಕುಲದೇವ ಇಂಗ್ಲಿಷಿನಲ್ಲೊ  ಹಿಂದೂಸ್ಥಾನಿಯಲ್ಲೊ  ಹೇಳಿದುದನ್ನು  ಕಿಷ್ಕಿಂ 
ಧೆಯ ಭಾಷೆಗೆ ಅನುವಾದಿಸಬೇಕು:  ಅದಾದಮೇಲೆ  ನಿರ್ದೇಶದ  ಪುನರುಚ್ಚಾರ. 
ಜನ ಅತ್ತ ಇತ್ತ ನಡೆದಾಡಿದರು:ಪರಿಚಿತರನ್ನು ಗುರುತಿಸಿ ಜತೆಗೆ ಕುಳಿತರು,ಎಲ್ಲ 
ಸರಿಯಾಯಿತೆ ? ಯಾರೋ ಅನಧಿಕೃತವಾಗಿ ಎಣಿಸುತ್ತಿದ್ದರು.
     ವಿದ್ಯಾಧರ  ಗಣಿತ  ವಿಶಾರದ.  ಅಲ್ಲಿ  ಮಂತ್ರಿಪಟ್ಟ ಸಿಗುತ್ತದೆ  ಅಂತ ಅತ್ತ 
ಹೋದನಲ್ಲ? ವಿಶ್ವಂಭರ ಇವರಿಗೆ  ಕೊಕ್ ಕೊಟ್ಟು  ಹೊಸದೇ  ಮಂತ್ರಿಮಂಡಲ 
ರಚಿಸುತ್ತಾನೆ-ಈಗ ಅಂಕಗಳ ಕಿತ್ತಾಟದಲ್ಲಿ ಗೆದ್ದರೆ.ರಂಗಧಾಮ...ಪಾಪ,ಹುಡುಗ,
ವಿಶ್ವಂಭರ ಇವತ್ತು ಜಯಶಾಲಿಯಾದರೆ ಸಂಜೆ ಈ ಧ್ರುವ ಅಳುತ್ತಾನೆ.
     “ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿರುವವರು ಕೈಯೆತ್ತಿ."
     ಎಪ್ಪತ್ತೈದು. 
     ಎರಡನೇ ಎಣಿಕೆಯಲ್ಲೂ ಅಷ್ಟೆ.
     "ದೇವಿಜಿಯವರ_ಸೌದಾಮಿನಿದೇವಿಜಿಯವರ_ನಾಯಕತ್ವದಲ್ಲಿ ವಿಶ್ವಾಸವಿಲ್ಲ
ದವರು ಕೈಯೆತ್ತಿ." 
     ಎಂಬತ್ತು.
     ಅಷ್ಟೆ, ಎರಡನೇ ಎಣಿಕೆಯಲ್ಲೂ.
     "ಸೌದಾಮಿನಿಜಿ,ಬೇಸರದ್ದಾದರೂ ನಾನು ಮಾಡಲೇಬೇಕಾದ ಕೆಲಸ.ಸಂಪು 
ಟಕ್ಕೆ  ರಾಜಿನಾಮೆ ಕೊಟ್ಟು,  ಹೊಸ  ನಾಯಕತ್ವದ ಆಯ್ಕೆಗೆ ಎಡೆ ಮಾಡಿಕೊಡಿ. 
ತಗೊಳ್ಳಿ ಪೇಪರ್."
     “ಪೆನ್ನೂ ನೀವೇ ಕೊಡಿ. ನಿಮ್ಮ ಪೆನ್ ನನಗೆ ಪರಿಚಿತ.” 
     "ಹೆಹ್ಹೆಹ್ಹೆ ! ಇದು ಬೇರೆ  ಪೆನ್!” ಎಂದ  ನಕುಲದೇವ್,  ತಾನು  ಸೋತಿಲ್ಲ 
ಎಂಬಂತೆ.
     ಶಾಸಕರನ್ನು ಉದ್ದೇಶಿಸಿ ಆತನೆಂದ:
     “ಮುಖಂಡರು ಯಾರು  ಅನ್ನೋದು  ನಿಮಗೆ  ಗೊತ್ತಿದ್ದರೂ  ಪಕ್ಷದ  ಐಕ್ಯಕ್ಕೆ