ಈ ಪುಟವನ್ನು ಪರಿಶೀಲಿಸಲಾಗಿದೆ

ಹಗ್ಗ ಹರಿದ ಎತ್ತು ಹಸುಗಳಂತೆ ಜನ ಅತ್ತಿತ್ತ ಕತ್ತಲಲ್ಲಿ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಮಲಗಿದ್ದಾರೆ, ಸದ್ದು ಮಾಡಬಾರದು ಎನ್ನುವ ಯೋಚನೆ ಈ ರಾತ್ರಿ ಯಾರಿಗೂ ಇಲ್ಲ, ಯಾರೋ ಒಬ್ಬಿಬ್ಬರು ಆಗೊಮ್ಮೆ ಈಗೊಮ್ಮೆ ಶಯ್ಯಾ ಗೃಹಕ್ಕೆ ಹತ್ತಿರವಿದ್ದಾಗ ಮಾತಿನ ಧ್ವನಿ ಕುಗ್ಗಿಸುತ್ತಾರೆ, ಮುಂದೆ, ದಾಟಿದೊಡನೆ ಸ್ವರ ಏರಿಸುತ್ತಾರೆ.

   ಇದು ಜಾಗರಣದ ರಾತ್ರೆ.
   ಯಾರನ್ನು ಭಜಿಸಲಿ? ಯಾರನ್ನುಧ್ಯಾನಿಸಲಿ? ಹೇಗೆ ಕಳೆಯಲಿ ಹೊತ್ತು ?
   ಮೀರಾ ಭಜನೆಯ ರೆಕಾರ್ಡ್ ಹಾಕಿದಳು. ಸಣ್ಣಗೆ, ಇನ್ನು ಒಂದೂವರೆ ತಾಸು 
ತನ್ನ ಮೌನದೊಂದಿಗೆ ಇದರ ರಾಗಬಂಧ.ನುಡಿಯೆ ಮೀರಾ ಪಿಸು ನುಡಿಯೆ...
   ಟೆಲಿಫೋನಿನೊಂದಿಗೆ ಸಂಪರ್ಕ ಕಡಿದಾಗಲೇ ತನಗೆ ನಿಜವಾದ ಮುಕ್ತಿ. ಪ್ಲಗ್
ತೆಗೆದಳು.
    ತನ್ನ ಪಾಡು ತನಗೆ, ಅವಳ ಹಾಡು ಅವಳಿಗೆ...
    ಹಣ್ಣು ತಿನ್ನಲೆ? ಹಸಿವಿಲ್ಲ.
    ಇವತ್ತು ಉಪವಾಸದ ರಾತ್ರಿ,
    ಮಲಗುವ ಮನೆ ಪೂಜಾ ಕೊಠಡಿ ನಡು ದಾಟ್ರಿ ಇಶ್ಟಾನ್ನುಳಿದು ಇತರ ದೀಪ
ಗಳನ್ನು ಸೌದಾಮಿನಿ ಆರಿಸಿದಳು..
    ಮೇಜಿನ  ಮೇಲೆ ಕೆಲ  ಪುಸ್ತಕಗಳಿದ್ದುವು.  ಅವುಗಳನ್ನು ಜೋಡಿಸಲೆಂದು
ಅತ್ತ ಸಾಗಿದಾಗ ಕತ್ತಲು ಬಹುಮಟ್ಟಿಗೆ ಆವರಿಸಿದ್ದ ಪ್ರಸಾಧನ ಕೋಣೆಯಲ್ಲಿ 

ಯಾರೋ ಚಲಿಸಿದಂತೆ ಭಾಸವಾಯಿತು..

  "ಯಾರದು ?"
 ಉತ್ತರವಿల్ల. ಗುಂಡಿಗೆ ಸ್ತಬ್ದವಾಯಿತೊಮ್ಮೆ..  ಎಚ್ಚೆರಿಕೆಯಿಂದ ಕೋಣೆ
 ಯತ್ತ ಸರಿದಳು. నిలుವುಗನ್ನಡಿಯలి ತನ್ನ ಪ್ರತಿಬಿಂಬವನ್ನೆ ಕಂಡೆನೆ? ಹೌದು.
ಕನ್ನಡಿಗೆ ಅಡ್ಡವಾಗಿ ನಿಂತಿರುವುದು, ತಾನೇ! ಸ್ವಿಚ್ ಹಾಕಿದಳು. ಕನ್ನಡಿಯಲ್ಲಿ ತನ್ನನ್ನು 

ನೋಡಿ ಬೆಚ್ಚಿಬಿದ್ದಳು, నిలుವುಗನ್ನಡಿಯ ಎದುರಿಗಿದ್ದ ಪೀಠದಲ್ಲಿ ಕುಳಿತಳು. ಏನಾಯಿತು ತನಗೆ ? ಲೇಹ್ಯದ ಪ್ರತಾಪ-ಪ್ರಭಾವ-ಆವಿಯಾಯಿತೆ? ತಲೆಗೂದಲೆಲ್ಲ ಅರ್ಧಕ್ಕೆ ಬಿಳಿಚಿಕೊಂಡಿದೆಯಲ್ಲ? ಕಣ್ಣುಗಳ ಕೆಳಗೆ ಏನಿವು ಈ ಕಪ್ಪು ಸಂಚಿಗಳು?