ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

21

ನೀನು ಭಾಗವಹಿಸೋದು ಬೇಡ. ಫೋಟೋ ತೆಗೆದಾಗ ಅದರಲ್ಲಿ ನೀನೂ ಕಾಣಿಸಿ ಕೊಂಡರ_”

"ನಿಜ ಬಹೆನ್‌ಜಿ. ನಿಮ್ಮದು ಅಪಾರ ಜ್ಞಾನ. ನಾನು ಇಲ್ಲೇ ಇದ್ದು ನಿಮ್ಮಿಂದ ಇನ್ನೂ ಎಷ್ಟೋ ಕಲಿಯಬೇಕಾಗಿತ್ತು. ನನಗೆ ಆತುರ ಜಾಸ್ತಿ."

"ಯೌವನದಲ್ಲಿ ಹತ್ತು ವರ್ಷ ನಾನು ತಿಂದದ್ದನ್ನೇ ನೀನೂ ತಿಂದು ಬೆಳೆದಿದ್ದೀಯ. ನಮ್ಮಿಬ್ಬರಲ್ಲೂ ಇರೋದು ಒಂದೇ ಶಕ್ತಿ-ಆದಿಶಕ್ತಿ. ನಿಧಿಯ ಗುರಿ ಐವತ್ತು ಲಕ್ಷ ಸಾಕು. ಮುಂಬಯಿಯ ಸಂಗ್ರಹ ಆದೊಡನೆ ಎರಡು ಲಕ್ಷ ಕೊಡ್ತೀನೆ. ಇಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸ್ತೀಯ?"

"ಕಲ್ಯಾಣನಗರದಲ್ಲೊಬ್ಬ ಯುವಕ ಸ್ವಾಮಿ ಇದ್ದಾರೆ. ಅವರನ್ನು ಕಂಡಿದ್ದೆ. ತಮ್ಮ ಗುರುಗಳಲ್ಲಿಗೆ ನಾನು ಹೋಗಬೇಕೂಂತ ಅವರ ಅಪೇಕ್ಷೆ. ಜಗದಲಪುರದಲ್ಲಿದ್ದಾರೆ. ಧರ್ಮೇಂದ್ರರ ಬಾಬಾ ಅಂತ."

"ಓ! ಧರ್ಮೇಂದ್ರ ಬಾಬಾ! ಕೇಳಿದ್ದೇನೆ. ಕೇಳಿದ್ದೇನೆ, ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ಮಠ ಸ್ಥಾಪನೆ ಅವರ ಅಪೇಕ್ಷೆ, ಮಠಾಧೀಶರಿಗೆ ತರಬೇತಿ ನೀಡಿ ದೀಕ್ಷೆ ಕೊಡ್ತಿದಾರಂತೆ."

"ಹೌದು, ಬಲ್ಲೆ.” "ಪುಣ್ಯವಂತೆ ನೀನು, ಎರಡು ಲಕ್ಷ ರೂಪಾಯಿ ಜತೆ ಬಾಬಾರಲ್ಲಿಗೆ ಹೋಗು. ಅವರು ನಿನಗೆ ಮಾರ್ಗದರ್ಶನ ಮಾಡ್ತಾರೆ. ಏಳು, ನಡೆ, ವಿನೋದ್‌ಗೆ ನನ್ನ ಹಿತೈಷಿ ಮನೆಯಿಂದ ಫೋನ್ ಮಾಡೋಣ, ಯೋಜನೆಗೆ ವೈಜ್ಞಾನಿಕ ರೂಪ ಕೊಟ್ಟ ದ್ದನ್ನು ಆತನಿಗೆ ಈಗಲೆ ತಿಳಿಸಬೇಕು. ಮೃದುಲಾಬೆನ್ ಹೊರತರುವ ವಿನಂತಿ ಪತ್ರ ಈಗ ಸ್ವಲ್ಪ ಚುಟುಕಾಗಿದೆ."

"ನನ್ನ ವಿಷಯ...” ಆತನಿಗ್ಯಾಕೆ ಅದೆಲ್ಲ? ಕಿಷ್ಕಿಂಧೆಯ ಹೊರಗಿನ ಜವಾಬ್ದಾರಿ ನಿನ್ನಿಂದಾ ಗೋದಿಲ್ಲ ಎಂದರಾಯ್ತು, ರವಿವಾರ ಅವನಿಗೆ ರಜಾ. ರಾತ್ರಿ ಊಟಕ್ಕೆ ಕರೀತೀನಿ. ವಿನಂತಿ ಪತ್ರದ ಡ್ರಾಫ್ಟ್ ತಗೊಂಡ್ಬಾ ಅಂತಲೂ ಹೇಳ್ತೀನಿ. ಆಗ ಚೆನ್ನಾಗಿ ಪರಿಚಯ ಮಾಡ್ಕೊಳ್ಳಿ.

ರವಿವಾರಕ್ಕೆ ಇನ್ನೆಷ್ಟು ದಿನ ಉಳಿಯಿತು ಎಂದು ಪುಟ್ಟವ್ವ ಲೆಕ್ಕ ಹಾಕಿದಳು.

ಮೃದುಲಾ ಮತ್ತು ಪುಟ್ಟವ್ವ ಹಿತೈಷಿ ಮಹಾನುಭಾವರ ಮನೆಗೆ ಹೋಗು ತಿದ್ದಂತೆ, ಕಾರು ಹಿತ್ತಿಲಿನಿಂದ ರಸ್ತೆಗಿಳಿಯಿತು, ಮಹಿಳಾ ಮಣಿಗಳನ್ನು ಕಂಡೊಡನೆ ನಿಂತಿತು. ಅವಸರದಲ್ಲಿ ಯಜಮಾನರು ಅಂದರು:

ಬಹೆನ್‌ಜಿ, ಅರ್ಧ ಘಂಟೇಲಿ ಬಂದ್ವಿಡ್ತೀನಿ. ಅಷ್ಟರೊಳಗೆ ನಿಮ್ಮ ಕಾಲ್‌ಗಳ ನ್ನೆಲ್ಲ ಮುಗಿಸಿ."

"ಆಗಲಿ, ಆಗಲಿ" ಎಂದಳು ಮೃದುಲಾಬೆನ್.