ಈ ಪುಟವನ್ನು ಪ್ರಕಟಿಸಲಾಗಿದೆ

24

ಮಿಂಚು

ಇದು ಪುಟ್ಟವ್ವನ ರಾತ್ರೆ, ತನ್ನದಲ್ಲ. ವಿನೋದನನ್ನು ಚುಚ್ಚಿ ತಾನು ಸಂತೋಷ ಪಡಬೇಕೆಂದೇ ಮೃದುಲಾ ಕರುಣಾಳ ವಿಷಯ ಪ್ರಸ್ತಾಪಿಸಿದ್ದಳು, ಹೊಸ ಯೋಜನೆ ಯನ್ನು ಕಾರ್ಯಗತಗೊಳಿಸಲು ಅವಳ ನೆರವು ಬೇಕೆಂಬುದಂತೂ ನಿಜಸಂಗತಿ.

ಮಾತು ಮಾತು ಮಥನಿಸಿ ಮುಗಿದಿತ್ತು ಮೀರಾಭಜನೆ,

ಜುಮ್ಕಿ ಕೇಳಿದಳು: "ಶಹನಾಯ್ ಮಾಜಿ?"

"ಹ್ಞ. ಅದರ ಹಿಂದೆ ರವಿಶಂಕರ್ ಇಟ್ಟಿಡು."

ಶಹನಾಯ್ ನಿನದಿಸಿದಂತೆ ತಾಟುಗಳು ಮೇಜಿನತ್ತ ಬಂದವು. ಈಗ ಜುಮ್ಕಿಯೇ ಸೇವಿಕೆ.

"ಮಾಜಿ.."

"ಬಡಿಸು... ವಿನೋದ್, ಜುಮ್ಕಿ ಸಪ್ಪಳ ಮಾಡ್ತಿದಾಳೆ, ಇನ್ನು ನಾವು ಅವಳ ಆಜ್ಞಾನುವರ್ತಿಗಳು."

ವಿನೋದ ನಿರ್ಲಿಪ್ತ ನೋಟದಿಂದ ಜುಮ್ಮಿಯನ್ನು ದಿಟ್ಟಿಸಿದ. ಒಂದೆರಡು ಅಂಗುಲ ಎತ್ತರ? ಸ್ವಲ್ಪ ತುಂಬಿಲ್ಲವ ವಕ್ಷಸ್ಥಲ?

"ರುಚಿವರ್ಧಕ?"

ಮಾಜಿಯ ಸನ್ನೆಯನ್ನು ಅರ್ಥಮಾಡಿಕೊಂಡು ಜುಮ್ಮಿ ಸೇವಕಿಯಾದಳು. ವಿನೋದನಿಗೆ ಮೈ. ಲಲನೆಯರಿಗೆ ಶಾಂಪೇನ್.

ವಂತಿಗೆಗಾಗಿ ಮೃದುಲಾ ಮತ್ತು ಕರುಣಾ ಕೈಜೋಡಿಸಬೇಕಾದ ಕುಳಗಳು.

ಒಂದೊಂದು ಲಕ್ಷದ ಮಾತು ಕೇಳಿಸಿದಾಗ ಪುಟ್ಟವ್ವ ವಿಸ್ಮಿತಳಾಗಿದ್ದಳು. ಈಗ ಸ್ಪಷ್ಟವಾಯಿತು.

"ಲಿಪ್ಟಿನ ಮೇಲ್ ಡೆ ಒಬ್ಬಿಬ್ಬರು ಘನ ನಾಮಧೆಯರು."

"ಅರ್ಥವಾಯ್ತಿ ಪುಟ್ಟಾ? ಅವರು ಲಕ್ಷವೂ ಕೊಡಬಹುದು; ಭಿಕ್ಷವೂ ನೀಡ ಬಹುದು,"

(ತಾನು ಕಿಷ್ಕಿಂಧೆಯಲ್ಲಿ ಶಾಂಪೇನ್ ಪಾರ್ಟಿ ಎಂದು ಕೊಟ್ಟೇನು? ಕಾಸು ಬಿಚ್ಚದೆಯೆ ಲಕ್ಷಾಧಿಪತಿ ಎನಿಸಿಕೊಳ್ಳುವುದಲ್ಲವೆ ನಿಜವಾದ ಸಿರಿವಂತಿಕೆ?)

ಕುಡಿತದಲ್ಲಿ ಎಲ್ಲರೂ ಇತಿಮಿತಿಯವರು. ಬೇರೆ ದಿನವಾಗಿದ್ದರೆ, ಬಿಲ್‌ ಎಷ್ಟೇ ಆದರೂ ಕೊಡಬಲ್ಲ ಧನಿಕನೂ ಬಳಗದಲ್ಲಿದ್ದರೆ, ವಿನೋದ ಹಿಂದು ಮುಂದೆ ನೋಡು ತಿರಲಿಲ್ಲ. ಆದರೆ ಇವತ್ತಲ್ಲ.

"ನಿಮ್ಮಲ್ಲಿ ಕಪಿಗಳು ಜಾಸ್ತಿನ ಬಹೆನ್?"

"ಹೌದು, ವಿನೋದ್ ಭಯ್ಯ, ಆದಿಕವಿ ವಾಲ್ಮೀಕಿ ಸುಳ್ಳು ಹೇಳ್ತಾನ?"

('ಕಿಷ್ಕಿಂಯಲ್ಲಿ ವಿನೋದನಿಗೆ ಸೋಲಾದರೆ ಕಪಿಗಳು ಕೇಕೆಹಾಕಿ ನಗಬಹುದು' ಮೃದುಲಾ.)