ಈ ಪುಟವನ್ನು ಪರಿಶೀಲಿಸಲಾಗಿದೆ

ಮಧ್ಯಪ್ರದೇಶದಲ್ಲಿದ್ದು ಆದಿವಾಸಿಗಳ ಮೇಲೆ ಮಹಾತ್ಮರ ಅಹಿಂಸೆಯ ಮೋಡಿ
ಬೀಸಿ ದಿಲ್ಲಿಗೆ ಬಂದಿರುವ ಕಿಷ್ಕಿಂಧೆಯ ಸೌದಾಮಿನಿಯನ್ನು ಕಾಣಲು, ದೇಶದ ನಾನಾ
ಭಾಗಗಳ ರಾಷ್ಟ್ರಪಕ್ಷದ ಕಾರ್ಯಕರ್ತರೂ ಧುರೀಣರೂ ಧಾವಿಸಿಬಂದರು, ಎಲ್ಲ
ಪತ್ರಿಕೆಗಳೂ ಸಾರಿದುವು: “ರಾಜಕೀಯ ರಂಗದಲ್ಲಿ ಹೊಸ ತಾರೆಯ ಉದಯ.”
ಸಂದರ್ಶನಗಳು ಪ್ರಕಟವಾದುವು. ಒಂದು ಪತ್ರಿಕೆ ನುಡಿಯಿತು: “ಯಾವ ಚಲನ
ಚಿತ್ರ ತಾರೆಗೂ ಈಕೆ ಕಡಮೆ ಇಲ್ಲ.” ದಿಲ್ಲಿಗಂತೂ ಎಲ್ಲ ರಾಜ್ಯಗಳ ರಾಷ್ಟ್ರಪಕ್ಷೀಯ
ಪ್ರಭೃತಿಗಳು ಆಗಾಗ್ಗೆ ಬರುತ್ತಿದ್ದರು. ಅದು ಅವರಿಗೊಂದು ಚಟವಾಗಿತ್ತು,
ಕಿಷ್ಕಿಂಧೆಯಿಂದಲೂ ಬಂದರು: ಮುಖ್ಯಮಂತ್ರಿ ಜಾಣಪ್ಪ, ಗೃಹಸಚಿವ ರಂಗಸ್ವಾಮಿ,
ಆರ್ಥಸಚಿವ ನಾಯಕ.... ಅವರೂ ಏಕಾಂತಪ್ರಿಯೆಯಾಗಿದ್ದ ಸೌದಾಮಿನಿಯ ಬಳಿಗೆ
ಬಂದು “ನಮಸ್ತೆ ಅಕ್ಕಾ ಅವರೆ" ಎಂದರು. ಮೊದಲು ದಿಗ್ಭ್ರಮೆ, ಬಳಿಕ ಶಂಕೆ,
ಅವರಿಂದ ಪ್ರೇರಿತರಾಗಿ ಕೆಲ ಪತ್ರಿಕಾಕರ್ತರು “ನಿಮ್ಮ ಬಾಲ್ಯ?” “ನಿಮ್ಮ ಯೌವನ?'
ಎಂದು ಕೆದಕುವ ಸಂದರ್ಶನಗಳಿಗೆ ಬಂದರು.
ಎಲ್ಲರಿಗೂ ಸೌದಾಮಿನಿ ಸಮರ್ಪಕ ಉತ್ತರ ಕೊಟ್ಟಳು :
“ಜನಸೇವೆಯಲ್ಲೇ ದಿನ ಕಳೆದಿದ್ದೇನೆ. ಆ ಸೇವೆಯಲ್ಲೇ ಶೇಷಾಯುಷ್ಯವನ್ನು
ಕಳೆಯುತ್ತೇನೆ.”
ಒಬ್ಬ ಲೆಕ್ಕ ಹಾಕಿದ:
“ಶೇಷಾಯುಷ್ಯ ಎಪ್ಪತ್ತು ವರ್ಷಗಳಾದರೂ ಇರಬಹುದು.”
ರಂಗಸ್ವಾಮಿಯೂ ನಾಯಕರೂ ಇಳಿದನಿಯಲ್ಲಿ ಪರಸ್ಪರ ಸಮಾಲೋಚನೆ
ನಡೆಸಿದರು.
ಇಬ್ಬರಲ್ಲೂ ಮೂಡಿದ್ದೊಂದೇ ಪ್ರಶ್ನೆ.
" ಆ ಲೌಡಿನೇನಾ ಇವಳು ? "
ಮಹಾ ಕಾರ್ಯದರ್ಶಿಗೆ ದೂರು ಹೋಯಿತು. ಆತ ಅವರನ್ನು ತರಾಟೆಗೆ
ತೆಗೆದುಕೊoಡ :
“ನಿಮಗೆ ಬುದ್ಧಿ ಇಲ್ಲವೇನ್ರಿ? ಜಗದಲಪುರದ ಧರ್ಮೇಂದರ್ ಬಾಬಾ ಈ
ಕನ್ನಡಿತಿಯನ್ನು ಕಳಿಸಿದ್ದಾರೆ. ಮಾತಿನ ಓಘವೇನು ! ವಿಚಾರಗಳ ಝರಿ ಏನು !
ರಾಜನೀತಿಯನ್ನು ನೀವು ಅವರಿಂದ ಕಲೀಬೇಕು. ಪಕ್ಷದ ಅಧ್ಯಕ್ಷರು, ಪ್ರಧಾನಿ
ಎಲ್ಲರೂ ಒಪ್ಪಿದ್ದಾರೆ. ಬರಲಿರುವ ಸಾರ್ವತ್ರಿಕ ಚುನಾವಣೆ ನಿಮ್ಮ ರಾಜ್ಯದಲ್ಲಿ