ಈ ಪುಟವನ್ನು ಪರಿಶೀಲಿಸಲಾಗಿದೆ

48

ಮಿಂಚು

“ನನ್ನ ಪುನರ್ಜನ್ಮಕ್ಕೆ ತಾವು ಕಾರಣರಾದಿರಿ: ತಮ್ಮನ್ನೂ ಬಾಬಾಜಿಯನ್ನೂ
ನಾನೆಂದೂ ಮರೆಯಲಾರೆ.”
ಪ್ರಸಾದ ಪಡೆದು ಪಕ್ಷದ ಕಾದ್ಯಾಲಯಕ್ಕೆ ಮಾತಾಜಿ ಹಿಂತಿರುಗಿದಳು,
...ಮಾತಾಜಿ.
ಆಕೆಯ ಸನ್ನಿಧಿಗೆ ಹೋದೊಡನೆ ಪ್ರಭೆಯ ಮುಂದೆ ನಿಂತಂತಾಗುತ್ತಿತ್ತು,
ಏನು ಇದರರ್ಥ ? ಈಕೆಗೆ ಅತಿಮಾನವ ಶಕ್ತಿ ಇದೆ ಎಂದೆ? ಪ್ರಸಾಧನ ಕಾರ್ಯದಲ್ಲಿ
ನೆರವಾಗುವವರು ಯಾರು ಎಂದು ಗುಟ್ಟಾಗಿ ವಿಚಾರಿಸಿದರು. ಯಾರೂ ಇರ
ಲಿಲ್ಲ. ಎಲಾ ! ನಿರಾಭರಣ ಸುಂದರಿ ! ಈ ಮೈ ಹೊಳಪು ಸಾಕಲ್ಲ ? ಸಹಸ್ರ
ಗಟ್ಟಲೆ ಬುಟ್ಟಿಗಳಲ್ಲಿ ಲಕ್ಷಗಟ್ಟಲೆ ವೋಟುಗಳನ್ನು ಬಾಚಬಹುದು. ಸ್ಪರ್ಧಿಗಳು
ವಿರೋಧಿಗಳು ಸ್ವಲ್ಪ ಸಮಯ ಬಾಲ ಮಡಚಿ ಇದ್ದರು. ಮಾತಾಜಿಯ ಮೃದು
ಮಾತಿನ ಬಿಗಿಹಿಡಿತ ಅತಿಯಾಯಿತು ಎನಿಸಿದಾಗ, 'ಗುರ್' ಎಂದರು, ಇಬ್ಬರು
ಅಂಗರಕ್ಷಕಭಟರು ಕಾಣಿಸಿಕೊಂಡರು. ಈ ವ್ಯವಸ್ಥೆ ಮಾಡಿಕೊ” ಎಂಬುದು
ದಿಲ್ಲಿಯಿಂದ ಬಂದಿದ್ದ ಸೂಚನೆ. ಅವರೂ ಅಲ್ಲಿಂದ ಬಂದಿದ್ದರು. ಈ ಹಿಂದೂಸ್ಥಾನಿ
ಅಂಗರಕ್ಷಕರಿಗೆ ತಕ್ಕ ಮಟ್ಟಿನ ಕನ್ನಡವೂ ಬರುತ್ತಿತ್ತು,
ಹಲ್ಲೆ ಇತ್ಯಾದಿ ಸೇವಾಕಾರ್ಯಗಳಿಗೆ, ಸದಾ ಸಿದ್ಧರಾಗಿರುತ್ತಿದ್ದ ಸ್ಥಳೀಯ
ದಾದಾಗಳು ನಾಯಕರನ್ನು ಕೇಳಿದರು.
“ನಮಗಿನ್ನು ಕೆಲಸ ಇಲ್ಲವಾ ?”
“ಸ್ವಲ್ಪ ದಿನ ಸುಮ್ಮನಿರಿ.”
ಎರಡು ವಾರ ಕಳೆಯುವುದಕ್ಕಿಲ್ಲ. ಸಮರ ಘೋಷಣೆಯಾಯಿತು,
“ದಿಲ್ಲಿ ನಮ್ಮ ಮೇಲೆ ಧುರೀಣರನ್ನು ಹೇರುವುದು ನಮಗೆ ಸಮ್ಮತವಿಲ್ಲ !”
“ಸೌದಾಮಿನಿ ದಿಲ್ಲಿಗೆ ಫೋನ್ ಮಾಡಿದಳು :
“ಶಿಸ್ತಿನ ಕ್ರಮ ಅಗತ್ಯವಾದೀತು.”
ರಾಷ್ಟ್ರೀಯ ನಾಯಕತ್ವ ಹಸುರು ನಿಶಾನೆ ಬೀಸಿತು.
ಮೊದಲ ಕೊಡಲಿ ಏಟು ನಾಯಕರ ಬುಡಕ್ಕೆ. ಮರ ಉರುಳಿತು, “ಪಕ್ಷದಿಂದ
ಹೊರ ಹಾಕಿದರು.” ಸುದ್ದಿ ಕಾಳ್ ಚ್ಚಾಗುತ್ತದೆ ಎಂದಿದ್ದರು ನಾಯಕರು, ಅವರ
ನಿಷ್ಠಾವಂತ ಬೆಂಬಲಿಗರು, ಕಾಡು ತಣ್ಣಗೇ ಇತ್ತು.
ಪಕ್ಷದ ಎಲ್ಲ ಕಾರ್ಯಕರ್ತರ ಸಭೆ ಕರೆದಳು ಮಾತಾಜಿ.
ರಾಜಕೀಯದ ಒರೆಗಲ್ಲು ವಾಡ್ಮಿತೆ. “ಮೊದಲು ಮಾತು ಕೇಳೋಣ.
ಆಮೇಲೆ ಮುಖಂಡತ್ವದ ಮೌಲ್ಯಮಾಪನ” ಎಂದರು ಕೆಲವರು. ಉಳಿದವರೆಂದರು :
“ದಿಲ್ಲೀಶ್ವರರಿಗೆ ಅಷ್ಟೂ ತಿಳೀದು ಅಂದ್ಕೊಂಡಿರಾ ?”
ಕಿಕ್ಕಿರಿದ ಸಭೆ, ಉಗಮದಿಂದ ಮಲ್ಲಮೆಲ್ಲನೆ ಹರಿದಳು ಇಂದ್ರಾವತಿ (ಕಾವೇರಿ).