ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

63

ಮಾರನೆಯ ಬೆಳಗೆ ಪಕ್ಷದ ಕಾರು ಉಪಾಹಾರ ಮುಗಿಸಿಕೊಂಡು ಬಾವುಟ
ಹಾರಿಸುತ್ತ ಸಡಗರದಿಂದ 'ನೃಪತುಂಗ'ಕ್ಕೆ ಬಂತು. ಸೌದಾಮಿನಿಯೂ ದಿಲ್ಲಿ ರಾಯ
ಭಾರಿಯೂ ವಾಹನವನ್ನೇರಿದರು. ಹೋಟೆಲಿನ ಯಜಮಾನ ಮುಖ ಮಂಟಪದಲ್ಲಿ
ಪ್ರತ್ಯಕ್ಷನಾಗಿ “ನಮ್ಮ ಮೇಲೆ ಕೃಪೆ ಇರಲಿ” ಎಂದ. ಸೌದಾಮಿನಿ ನಸು ನಕ್ಕಳು,
ಸೇವಾದಳದ ಕಪ್ತಾನ ರಾಜದೂತ ಮೋಟರ್ ಸೈಕಲನ್ನೇರಿ ಮುಖ್ಯಮಂತ್ರಿ
ಯನ್ನು ಕರೆಯಲು ಹೋದ, ಅವನ ಬಳಿ ಇತ್ತು. ಮಹಾ ಕಾರ್ಯದರ್ಶಿಯ
ಲಿಖಿತ ಪತ್ರ,
ಜಾಣಪ್ಪ ಉಲ್ಲಸಿತರಾಗಿಯ ಆಗಮಿಸಿದರು.
“ದಿಲ್ಲಿಯ ಗಡಿಬಿಡಿ ಮುಗಿಸಿದಿರಾ ?”
.....ನಮಸ್ತೆಗಳ ವಿನಿಮಯದ ಬಳಿಕ ಕೇಳಿದ ಪ್ರಶ್ನೆ,
“ತಲೆನೋವು ಬೇಕಾದರೆ ದಿಲ್ಲಿ, ನೆಮ್ಮದಿ ಬೇಕಾದರೆ ಕಲ್ಯಾಣನಗರ,
“ಅದಕ್ಕೇ ನಿನ್ನೆ ತಮಗೆ ತೊಂದರೆ ಕೊಡಲಿಲ್ಲ. ಪಾಪ, ವಿಶ್ರಾಂತಿ ತಗೊಳ
ಲೀಂತ ಬಿಟ್ಟೆ.”
“ಈ ಮಾನವೀಯ ಗುಣಗಳಿಗಾಗಿಯೇ ರಾಷ್ಟ್ರದಾದ್ಯಂತ ತಾವು ಮಾನ್ಯತೆ
ಗಳಿಸಿದೀರಿ,” ಎಂದ ನಕುಲದೇವ್.
"ಈಗ ಅನೌಪಚಾರಿಕವಾಗಿ ಮಾತನಾಡೋಣ. ಸಾಯಂಕಾಲ ಶಾಸಕರ ಸಭೆ
ಆಯ್ಕೆಯ ನಿರ್ಧಾರವನ್ನು ರಾಜ್ಯಪಾಲರಿಗೆ ನಾನೇ ತಿಳಿಸ್ತೇನೆ,” ಎಂದೂ ಹೇಳಿದ.
ಈಗ ಜಾಣಪ್ಪನವರಿಗೆ ಯಾವ ಸಂದೇಹವೂ ಉಳಿದಿರಲಿಲ್ಲ. ಬಿಗಿದಿದ್ದ
ತುಟಿಗಳನ್ನು ತುಸು ಆಗಲಿಸಿ ಅವರೆಂದರು :
“ಹಾಗಾದರೆ ಇವತ್ತು ರಾತ್ರಿಯೇ ಮಂತ್ರಿಮಂಡಲದ ರಚನೆ,”
“ಶನಿವಾರ ಇಲ್ಲಿನವರು ಶುಭಕಾರ್ಯ ಮಾಡೋದಿಲ್ಲ. ಪ್ರತಿಜ್ಞಾ ಸ್ವೀಕಾರ
ಭಾನುವಾರ, ಜನರಿಗೂ ಬಿಡುವಿರದೆ, ಪ್ರತಿಜ್ಞಾ ಸ್ವೀಕಾರ ನೋಡೋದಕ್ಕೆ
ಬಾರೆ, ಮುಖ್ಯಮಂತ್ರಿಯೊಬ್ಬರು ಮಾತ್ರ ಇವತ್ತೇ ಪ್ರಮಾಣವಚನ ಬೋಧನೆಗೆ
ಒಳಗಾಗಲಿ.”
ರಂಗಸ್ವಾಮಿ ಬಂದರು. ಮುಖ ಅರಳಿ ಬಿರಿದ ಗುಲಾಬಿಯಂತಿದ್ದ ಸೌದಾಮಿನಿ
ಯನ್ನು ಕಂಡು ಅವರಿಗೆ ಕಣ್ಣು ಕತ್ತಲು ಬಂತು. ಇವಳನ್ನು ನ್ಯಾಯಸ್ಥಾನ
ಕೈಳೆದು ಬೆತ್ತಲೆ ಮಾಡದಿದ್ದರೆ ನನ್ನ ಹೆಸರು ರಂಗಸ್ವಾಮಿಯಲ್ಲ-ಮಂಗಸ್ವಾಮಿ,”
ಎಂದುಕೊಂಡರು. “ಈಗಲೆ ಅಲ್ಲ, ನಿಧಾನವಾಗಿ....ನಿಧಾನವಾಗಿ.” ಮತ್ತೂ
ತಮ್ಮಷ್ಟಕ್ಕೆ ಗೊಣಗಿದರು : “ಸೀರೆ ಬಿಚ್ಚಿ, ಹೊಟ್ಟೆಯಲ್ಲಿ ಮಡಚುಗಳೆಷ್ಟಿವೆ ಅಂತ
ಎಣಿಸಿದರೆ ಸಾಕು, ಪುರಾವೆ ಸಿದ್ಧ !” ಮಡಚು ಆರು, ಅವರ ಪ್ರಕಾರ, ಆದರೆ
ಅಲ್ಲಿ ಒಂದು ಮಡಚೂ ಇರಲಿಲ್ಲ ಈಗ ; ಧರ್ಮೇಂದರ್ ಬಾಬಾಜಿಯ ಲೇಹ್ಯದ