ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

79

“ಫಿಫ್ಟೀನ್-ಲವ್.”
ಕರತಾಡನ ಮುಗಿಯುತ್ತಿದ್ದಂತೆ ಪ್ರೇಕ್ಷಕರು ಪ್ರೋತ್ಸಾಹಿಸಿದರು.
“ಅಪ್ ಸಿ.ಎಂ.!ಅಪ್ ಸಿ.ಎಂ.!"
ಶಿಳ್ಳು.ಮೊದಲ ಬಾರಿಗಿಂತ ಹೆಚ್ಚು ಆತ್ಮವಿಶ್ವಾಸದಿಂದ ಸೌದಾಮಿನಿ ಸರ್ವ್
ಮಾಡಲು ಸಿದ್ಧಳಾದಳು.ರಂಗಧಾಮ ಕಂಡುದು ತನ್ನತ್ತ ನೇರವಾಗಿ ಬರುತ್ತಿದ್ದ
ಚೆಂಡನ್ನು‌.ರಕ್ಷಣೆಯ ಚಚ್ಚರ.ಧಾಳಿಯ ಉತ್ಸುಕತೆ.ಧ್ರುವ ಸಂಯಮ ಕಳೆದು
ಕೊಳ್ಳಲಿಲ್ಲ. ನಿಧಾನವಾಗಿ ಎದುರಾಳಿಯತ್ತ ಚೆಂಡನ್ನು ಕಳಿಸಿದ.ಅದು ಮತ್ತೆ
ಬಂತು.ಮತ್ತೆ ಮರಳಿಸಿದ. ನಿಮಿಷಗಳ ಸದ್ದು, ನಿಮಿಷಗಳು ಮಿನಿಟುಗಳಾಗು
ತ್ತಿವೆ. ಟಕ್-ಟಕ್ ಟಕ್-ಟಕ್... ಜಯಕಾರ.ರಂಗಧಾಮ ನೋಡಿದ. ಚೆಂಡು
ಅವನ ಪಾದವನ್ನು ಅಣಕಿಸಿ ಮೆಲ್ಲನೆ ಉರಳಲು ನೋಡುತ್ತಿತ್ತು.
"ಥರ್ಟಿ ಲವ್".
ರಂಗಧಾಮನ ಮುಖ ಲಜ್ಜೆಯಿಂದ ಕೆಂಪಾಯಿತು.ಯಾಕೆ ಆಡಬೇಕು
ತಾನು?ತನ್ನ ಟೆನ್ನಿಸಿನ ಅವಸಾನ ಇವತ್ತು,ನಾಳೆ ಮಂತ್ರಿಪದವಿಗೆ ರಾಜಿನಾಮೆ
ನೀಡಬೇಕು.ಆಗದೆ ಇದ್ದರೆ, ಆಜೀವ ಪರ್ಯಂತ ಆಟವಲ್ಲದ ಆಟವನ್ನು ಆಡಲು
ತರಬೇತಿ ಪಡೆಯಬೇಕು.ಇಂಥ ಡಮ್ಮಿ ಆಟಕ್ಕೆ ತಾನೇ ಯಾಕೆ? ಪಕ್ಷದ ಕಾರ್ಯಕರ್ತ
ರಲ್ಲಿ ದಿನಕ್ಕೊಬ್ಬನನ್ನು ಆರಿಸಬಹುದಲ್ಲ? ಅಥವಾ ಯಾವನಾದರೂ ಸರಕಾರೀ
ಉದ್ಯೋಗಿಯನ್ನು 'ಬಾ'ಎನ್ನಬಹುದಲ್ಲ?
ಸೌದಾಮಿನಿ ಅಂದುಕೊಂಡಳು:
'ಇನ್ನೊಂದು ಸರ್ವಿಸ್..ಅದರಲ್ಲೊಂದು ಸ್ಮಾಶ್ ಮಾಡಿದೆನೆಂದರೆ ಗೆಲುವು
ತನ್ನದು.'
'ಕಿಷ್ಕಿಂಧೆಯಲ್ಲಿ ತನಗೊಂದು ವಿಶಿಷ್ಟ ಸ್ಥಾನ ಲಭ್ಯ.'
ಶಿಳ್ಳು.ಅರ್ಧ ನಿಮಿಷ ಗುಂಡಿಗೆ ಬಡಿತ ನಿಂತಿತು.ಈ ಉತ್ಕಟ ಅವಸ್ಥೆಯಲ್ಲಿ
ಕುಸಿದು ಬೀಳುವ ಸಂಭವ?ಬಿದ್ದರೆ ಪ್ರಥಮ ಚಿಕಿತ್ಸೆಗೆಂದು ಓಡಿ ಬರುವವರ
ಯಾರು? ಶಿಳ್ಳಿನ ನಿರ್ದೆಶ ನಿರರ್ಥಕವಾಯಿತೆಂದು ಅಂಪಯರ್ ಗಟ್ಟಿಯಾಗಿ
ಅಂದರು:
“ಪ್ಲೀಸ್ ಸರ್ವ್.”
ಸರ್ವಿಸ್-ಸೇವೆ. ಸಹಸ್ರಾರು ಕಣ್ಣುಗಳು ತನ್ನನ್ನೆ ದಿಟ್ಟಿಸುತ್ತಿವೆ.ಜೀವನ
ದುದ್ದಕ್ಕೂ ಸೇವೆಯೇ ಅಲ್ಲವೆ ತನ್ನ ಬೀಜಮಂತ್ರ?
ಬಲಗೈಯ ರಾಕೆಟಿಗೆ ಮುದ್ದಿಡುತ್ತಿರುವ ಎಡಗೈಯ ಚೆಂಡು..ಅದು ಗಗನ
ಮುಖಿ ಕ್ಷಿಪಣಿಯಾಯಿತು. ದೃಷ್ಟಿಯಿಂದ ಮರೆಯಾಯಿತಲ್ಲ?ರಂಗಧಾಮನ
ಮೇಲ್ಗಡೆ ಇಳಿಯುತ್ತದೆ.ಆತ ಚಚ್ಚಿದರೆ? ಆ ಧೈರ್ಯ?ಊಹೂಂ, ಹಾಗೆ
ಮಾಡಲಾರ.