ಈ ಪುಟವನ್ನು ಪರಿಶೀಲಿಸಲಾಗಿದೆ

88

ಮಿಂಚು



ಊಟದ ಬಳಿಕ ಮಹಾ ಕಾರ್ಯದರ್ಶಿಯೂ ಸೌದಾಮಿನಿಯೂ ಉದ್ಯಾನ
ದಲ್ಲಿ ನೂರು ಹೆಜ್ಜೆ ನಡೆದಾಡಿದರು. ನಡೆಯುತ್ತ ಕಿಷ್ಕಿಂಧೆಯ ಮುಖ್ಯಮಂತ್ರಿ ಹಿತವಚನ ಕೇಳಬೇಕಾಯಿತು.
"ಹೊಟ್ಟೆ ತುಂಬಿದ ಮೇಲೆ ಸ್ವಲ್ಪ ಹೊತ್ತು ನಡೀಲೇಬೇಕು. ಒಂದರ್ಧ
ಘಂಟೆಯಾದರೂ ಮೇಜಿನಿಂದಲೂ ಹಾಸಿಗೆಯಿಂದಲೂ ದೂರವಿರಬೇಕು."
"ಹಿತೋಕ್ತಿ ನುಡಿಯಲು ಚೆನ್ನ. ಅದರಂತೆ ಆಚರಣೆ ಕಷ್ಟ."
"ಹತ್ತು ಹದಿನೈದು ಮಿನಿಟು ಆದುವೇನೊ ಹೊರಗೆ ಬಂದು ? ಇವತ್ತಿಗೆ
ಸಾಕು. ನಡೆ ಒಳಕ್ಕೆ."
ಶಯನಕ್ಕೆ ಮುನ್ನ ಆಟ,ಚುಟುಕು.
ಕರೆಯಬೇಕಾದ ಬಜೆಟ್ ಅಧಿವೇಶನದ ಬಗೆಗೆ ಸೌದಾಮಿನಿ ಮಾತನಾಡ ತೊಡ
ಗಿದಳು. ಮಗ್ಗು ಲಲ್ಲಿದ್ದಾತ ಒಂದೆರಡು ಸಲ ಹೂಂಗುಟ್ಟಿದ. ಅನಂತರ ಕೇಳಿಸಿದ್ದು
ಗೊರಕೆ. ಸೌದಾಮಿನಿ ಪಕ್ಕಕ್ಕೆ ಹೊರಳಿದಳು. ತನಗೆ ಆತುಕೊಂಡು ರಂಗಧಾಮ
ಇದ್ದಂತೆ ಕಲ್ಪಿಸಿಕೊಂಡಳು. ಮೈಯನ್ನು ಬಾಗಿಸಿ ಬಳುಕಿಸಿ ಇಲ್ಲದ ವ್ಯಕ್ತಿಯೊಡನೆ
ಮುಟ್ಟಾಟವಾಡಿದಳು.
...ನಸುಬೆಳಕು ಕಿಟಕಿಯೊಳಗಿಂದ ತೂರಿಬರುವುದಕ್ಕೆ ಮೊದಲೆ ಮಹಾ
ಕಾರ್ಯದರ್ಶಿ ಎದ್ದಿದ್ದ. ಭೋಜನ ಶಾಲೆಗೆ ತೆರಳಿ, ಅಲ್ಲಿದ್ದವರಿಗೆ, "ಬೆಡ್ ಟೀ
ಸಾಕು, ಬ್ರೇಕ್ ಫಾಸ್ಟ್ ಬೇಡ" ಎಂದ. ಮರಳಿ ಶಯ್ಯಾಗೃಹಕ್ಕೆ ಬಂದು ಸೌದಾ
ಮಿನಿಯನ್ನು ಎಬ್ಬಿಸಿದ.
"ಸೌದಾ, ನಿನ್ನನ್ನು ಕುಟೀರದಲ್ಲಿ ಬಿಟ್ಟು, ಪಕ್ಷದ ಕಾರ್ಯಾಲಯಕ್ಕೆ ಹೋಗ್ತೇನೆ."
ಸೌದಾಮಿನಿ ಮಹಾ ಕಾರ್ಯದರ್ಶಿಯ ಮುಖ ನೋಡಿದಳು. ಉಲ್ಲಸಿತ
ನಾಗಿಯೆ ಕಂಡ.
"ಮತ್ತೆ ಭೇಟಿ ?"
"ನಾಳೆ ನೀನು ಪಕ್ಷದ ಕಾರ್ಯಾಲಯಕ್ಕೆ ಬರಬೇಕು, ನಾಡದು ಹೋಟೆಲ್
ಅಶೋಕಾದಲ್ಲಿ ದಿಲ್ಲಿಯ ಪ್ರಮುಖ ಸಂಪಾದಕರನ್ನು ಲಂಚ್‍ಗೆ ಕರಿ.ಏರ್ಪಾಟು
ಮಾಡೋದಕ್ಕೆ ನನ್ನ ಪಿ. ಎ. ಗೆ ಹೇಳ್ತೇನೆ."
"ಆಚೆ ನಾಡದು ಪ್ರಧಾನಿಯವರನ್ನು ಕಂಡು ನಾನು ಹೊರಡಬಹುದು...."
"ಬಜೆಟ್ ಅಧಿವೇಶನದ ಸಿದ್ದತೆ ಇದೆಯಲ್ಲ ?"
"ಹೊಸ ಚೀಫ್ ಸೆಕ್ರೆಟರಿಯನ್ನು ನನ್ನ ಜತೆ ಕರೆದುಕೊಂಡು ಹೋಗಲೆ ?"
"ಬೇಡ. ಆತ ಒಂದು ದಿನ ಮುಂಚಿತವಾಗಿಯೆ ಹೋಗಿ ನಿನಗೋಸ್ಕರ
ಕಾದಿರಲಿ. ಇವತ್ತೆ ಏರ್ಪಾಟು ಮಾಡ್ತೀನಿ. ಶಿವಭಾವು ಚೌಗುಲೆ ಅಂತ."
"ಮುದುಕನೆ?"
"ನಡುವಯಸ್ಸು: ನಮಗೆ ನಿಷ್ಟೆಯಿಂದಿದ್ದಾನೆ. ಭಾರತೀಯ ಪ್ರಜಾಪ್ರಭುತ್ವದ