---೭---
ಹುದು; ಆದರೆ ಆ ಎಲ್ಲರಿಂದ ನನಗೇನೂ ಪ್ರಯೋಜನವಿಲ್ಲ. ಚಂದ್ರಾ, ಇಲ್ಲಿ ಇಷ್ಟು ಜನ ಮನುಷ್ಯರಿದ್ದಾರೆ, ಆದರೆ ಅವರಲ್ಲಿ ನನ್ನವನೆಂಬುವವನು ಒಬ್ಬನೂ ಇರದಿರುವದು ಎಷ್ಟು ಖೇದದ ಸಂಗತಿಯಾಗಿದೆ? ಈ ವಿಸ್ತಾರವಾದ ವಿಶ್ವವಲಯ ದಲ್ಲಿ ಒಬ್ಬ ಯಃಕಶ್ಚಿತ ಪ್ರಾಣಿಗೆ ಕೂಡ ಸ್ನೇಹಿತರು, ಬಂಧುಬಾಂಧವರು ಮತ್ತು ನೆರೆ ಹೊರೆಯವರು ಹೀಗೆ ಅಷ್ಟೇಷ್ಟರು ಇರುತ್ತಾರೆ; ಹಾಗು ಅವರು ಪರಸ್ಪರರ ಬಳಿಗೆ ಹೋಗು ತಾರೆ-ಬರುತ್ತಾರೆ, ಒಬ್ಬರು ಮತ್ತೊಬ್ಬರಿಗೆ ಪ್ರೇಮದಿಂದ ಭೆಟ್ಟಿಯಾಗುತ್ತಾರೆ, ಮತ್ತು ಪರಸ್ಪರರು ಆನಂದದಿಂದ ಮಾತುಕಥೆಯಾಡುತ್ತ ಕೂಡುತ್ತಾರೆ. ಆದರೆ ಚಂದ್ರಾ, ಈ ಮಿತ್ರಸ್ನೇಹದ ಸೌಖ್ಯವು ಈ ನಿನ್ನ ಸೂರ್ಯನ ಹಣೆಯಲ್ಲಿ ಬರೆ ದಿಲ್ಲ. ಯಾರಾದರೂ ನನ್ನ ಬಳಿಗೆ ಬಂದು, ನನಗೆ ಪ್ರೇಮಾ ಲಿಂಗನ ಕೊಟ್ಟು, ನನ್ನೊಡನೆ ಒಂದೆರಡು ಗಳಿಗೆಯ ವರೆಗೆ ನಾಲ್ಕು ಸುಖದುಃಖದ ಮಾತುಗಳನ್ನಾಡಬಹುದೆಂಬ ಸುಖವು ನನ್ನ ದೈವದಲ್ಲಿಯೇ ಇಲ್ಲ. ಇದಕ್ಕೆ ನೀನಾದರೂ ಏನು ಮಾ ಡುವೆ ಚಂದ್ರಾ, ಬೇರೆಯವರ ಗೊಡವೆಯೇಕೆ, ಇದರ ಅನುಭ ನವು ಈಗ ನಿನ್ನಿಂದಲೇ ನನಗಾಗಲಿಲ್ಲವೇನು? ಸುಧಾಕರಾ ನನ್ನ ಸುಖದುಃಖಗಳ ಬಗ್ಗೆ ಇಷ್ಟು ಕಳಕಳಿಯಿಂದ ಪ್ರಶ್ನೆ ಮಾ ಡುತ್ತಿರುವ ನೀನು, ನಿನ್ನ ಹೆಗಲ ಮೇಲೆ ಕೈಯಿಕ್ಕಿ ಅಡ್ಡಾಡು ಕೆಲವು ಹಿತದ ಮಾತುಗಳನ್ನಾಡಬೇಕೆಂದು ನನ್ನ ಮನಸ್ಸಿನ ಬರಲು, ನಾನು ಅದರಂತೆ ನನ್ನ ರಥವನ್ನು ನಿನ್ನ ಕಡೆಗೆ ಒಲಿ ಸುವ ಬಗ್ಗೆ ಸ್ವಲ್ಪ ಸೂಚನೆಯನ್ನು ಆರುಣನಿಗೆ ಮಾಡಿದ್ದನ್ನು ಆದರೆ ಅಷ್ಟಕ್ಕೆ ನೀನು ಅಂಜಿ ಹಿಂದಕ್ಕೆ ಸರಿದು ನಿಂತೆ; ಹಾಗು ನಿನ್ನ ಉಪಾಧಿಕ ಭಾಷಣದಿಂದ ನನಗೆ ದೂರನಿಂತು ಮಾತಾ ಡುವ ವಿಷಯಕ್ಕೆ ಪರ್ಯಾಯದಿಂದ ಸೂಚಿಸಿದೆ. ಆದರೆ