--- ೩೧ ---
ಜನವನ್ನು ೦ಟು ಮಾಡುವ ಸಂಗಡಿಗರೂ ನನಗೆ ಬೇಕಾಗಿರು ತ್ತಾರೆ. ಆದರೆ ಆ ಹೆಣಗಳಿಂದ ನನಗೇನಾಗಬೇಕಾಗಿದೆ. ಇತ್ತಿತ್ತಲಾಗಿ ಅಂಧ ಜನರೂ ನನ್ನೆಡೆಗೆ ಒರದಂತಾಗಿದ್ದಾರೆ. ಯಾಕಂದರೆ ಪ್ರಚಲಿತ ಯುದ್ಧ -ಮಹಾಯುದ್ಧಗಳಲ್ಲಿ ಎದುರಾ ಎದುರ ನಿಂತು ಕಾದುವ ಪದ್ಧತಿಯೇ ನಾಮಶೇಷವಾಗಿ ಬಿಟ್ಟಿದೆ! ಮತ್ತು ಯೋಗಿಗಳ ಬಗ್ಗೆ ಮಾತಾಡುವವೆಂದರೆ, ಈಗ ವೇಷಧಾರಿಗಳೆ ಎಲ್ಲೆಲ್ಲಿಯೂ ಕಾಣತ್ತಾರೆಯೇ ಹೊರ ತು ನಿಜವಾದ ಯೋಗಿಯೆಂಬುವವನೊಬ್ಬನೂ ದೃಗ್ಗೋಚರವಾ ಗುವದಿಲ್ಲ. ಇಂಥ ಸ್ಥಿತಿಯಲ್ಲಿಯ ಯಾವನೊಬ್ಬ ಮಹಾ ಶೂರನಾಗಲಿ, ಶ್ರೇಷ್ಟ ಯೋಗಿಯಾಗಲಿ ತನ್ನ ಸಾಮರ್ಥ್ಯದಿಂದ ನನ್ನೆಡೆಗೆ ಬಂದರೂ ಅವರಿಂದ ನನಗಾವ ಸುಖವಾಗುವಂತಿದೆ? ಅವರಲ್ಲಿ ಯಾವನು ಬಂದರೂ ಮೇಲಿನ ಶ್ಲೋಕದಲ್ಲಿ ವಿವರಿಸಿ ದಂತೆ ಅವನು ನನ್ನ ಹೃದಯವನ್ನು ವಿದಾರಣ ಮಾಡಿಯೇ ರೋಗತಕ್ಕವನು! ಸುಧಾಕರಾ, ಇಂಧನ ಕೃತಿಯಿಂದ ನನಗೆ ಎಂಥ ಸುಖವಾದೀತು? ಮೊದಮೊದಲು ಇಂಧ ಅನೇಕ ಜನರು ನನ್ನ ಕಡೆಗೆ ಬರುತ್ತಿದ್ದರು; ಹಾಗು ಅವರು ತಮ್ಮ ಬಿರುದನ್ನು ಕಾಯ್ದುಕೊಳ್ಳು ವದಕ್ಕಾಗಿ ನನ್ನ ಹೃದ ಯದಲ್ಲಿ ಹಲವು ಛಿದ್ರಗಳನ್ನುಂಟು ಮಾಡಿರುತ್ತಾರೆ. ನನ್ನ ಮೈಮೇಲೆ ಎಂಥವೋ ಕಪ್ಪು ಕಲೆಗಳಿರುತ್ತವೆಂದು ಎಷ್ಟೋ
ಜನರು ಭಾವಿಸುತ್ತಾರೆ. ಆದರೆ ಅವು ನಿಜವಾಗಿ ಕಲೆಗಳಿ ರದೆ, ಆ ಮಹಾತ್ಮರು ಕೆಡವಿದ ತೂತುಗಳೇ ಆಗಿರುತ್ತ ವೆಂಬದು ಪಾಪ, ಆ ದೋಷೋಕ ದೃಷ್ಟಿಯವರಿಗೇನು ಗೊತ್ತು? ಮಿತ್ರಾ, ಈ ದುಃಖದಿಂದ ನಾನು ದಿನೇ ದಿನೇ ಕ್ಷೀಣವಾ ಗುತ್ತ ನಡೆದಿದ್ದೇನೆ. ಮತ್ತು ಈ ಶಕ್ತಿಪಾತದಿಂದ ನನ್ನ ಅಂತವು ಯಾವಾಗಾದೀತೆಂಬದು ಕೂಡ ಊಹಿಸಲಶಕ್ಯವಾ
ಟಿ!