--- ೩೯ ---
ಗಳಿಂದ ಗ್ರಹ, ನಕ್ಷತ್ರ ದೇವ, ದಾನವ, ಮನುಷ್ಯ, ಪಶು, ಪಕ್ಷಿ, ಮೊದಲಾದವರನ್ನು ಬಿಗಿದುಬಿಟ್ಟಿದ್ದಾರೆ. ಅವರ ಸಂ ಬಂಧದ ಇದೆಲ್ಲ ಸಂಗತಿಯು ವಾಸ್ತವವಾಗಿದ್ದರೂ ಅವರು ವರ್ತಿಸಿದ ಭವಿಷ್ಯಗಳು ಸಟೆಯಗುವದಿಲ್ಲೆಂಬಂತಿಲ್ಲ; ಮತ್ತು ನಾನಾದರೂ ಈಗ ಇಚ್ಚಿಸುವದೇನಂದರೆ, ನಿನ್ನ ಮರಣ ಸಂ ಬಂಧವಾಗಿ ಯಾವ ಜೋಯಿಸರು ಭವಿಷ್ಯವನ್ನು ಹೇಳಿರು ವರೋ, ಅವರ ಭವಿಷ್ಯವು ಸಂಪೂರ್ಣವಾಗಿ ಸುಳ್ಳಾಗಲಿ!
ಆಗ ಸೂರ್ಯನು ನಡುವೆ ಬಾಯಿ ಹಾಕಿ___ "ಬೇಡ-
ಬೇಡ, ಚಂದ್ರಾ, ಹೀಗೆ ಅಭದ್ರವಾಗಿ ಮಾತಾಡಬೇಡ. ನನ್ನ ಅಂತಕಾಲದ ವಿರುದ್ಧವಾಗಿ ನೀನು ಹೀಗೆ ಕೊಂಚಮಾತ್ರವೂ ಸದಿಚ್ಛೆಯನ್ನು ವಹಿಸಬೇಡ. ಈ ಕಡು ದುಃಖದಿಂದ ನನಗೆ
ಮೈ ಮುಕ್ತವಾಗಗೊಡು, ನೀನು ನನ್ನ ನಿರ್ವಾಣ ಸುಖಕ್ಕೆ ಅಡ್ಡಾಗಬೇಡ. ನಾನು ಈ ಸರಿ ದುಃಖದಿಂದ ಬದುಕಿಯಾ ದರು ಮಾಡುವದೇನದೆ? ಚಂದಾ, ನಿನ್ನ ಮಾತು ಬೇರಿದೆ. ಈಗ ನೀನು ಸಾರಿದಂತೆ ನಿನ್ನ ಆಗಮನಕ್ಕಾಗಿ ಇಡಿ ಜಗತ್ತೇ ಉತ್ಸುಕವಾಗುತ್ತದೆ; ಹಾಗು ನಿನ್ನ ಉದಯವಾದರೆ ಸರ್ವ ಜಗತ್ತೇ ಸಂತೋಷಪಡುತ್ತದೆ. ಆದರೆ ನನ್ನ ಸ್ಥಿತಿಯು ಹಾಗಿ ರುವದಿಲ್ಲ. ನನ್ನ ಉತ್ಕರ್ಷವು ಯಾರಿಗೂ ಸಹನವಾಗುವದಿಲ್ಲ; ಇಷ್ಟೇ ಅಲ್ಲ, ನನ್ನ ಅಧಃಪಾತವು ಯಾವಾಗಾದೀತೆಂದು ಎಲ್ಲ ರೂ ಹಾದೀ ನೋಡುತ್ತಿರುತ್ತಾರೆ. ಈಗ ನನಗೂ ನನ್ನ ಜೀ ವಿತದಲ್ಲಿ ಅರ್ಥವುಳಿದಿರುವದಿಲ್ಲ. ಆದ್ದರಿಂದ ಮರಣವು ಎಷ್ಟು ಬೇಗನೆ ಬಂದೀತೋ, ಅಷ್ಟು ಬೇಗನೆ ಅದು ನನಗೆ ಬೇಕಾಗಿರುತ್ತದೆಂದು ನಾನನ್ನು ತ್ತೇನೆ. ನಾನು ಈ ಅಸಹ್ಯ ದುಃಖದಿಂದ ಒಂದೇ ಸವನೆ ಉರಿಯುತ್ತಿರುತ್ತೇನೆ; ಮತ್ತು ಎಂದಿಲ್ಲೊಂದು ದಿವಸ ನನ್ನ ಕೈ ಕಾಲುಗಳು ತಣ್ಣಗಾಗತ ಕ್ಯವೇ ಎಂದು ಈ ಸೂರ್ಯ ಶರೀರದ ಧನ್ವಂತರಿಗಳಾದ