ಈ ಪುಟವನ್ನು ಪ್ರಕಟಿಸಲಾಗಿದೆ

94

ಮುಡಿ

ಭಕ್ತಿಮೂಲ, ಆದರೆ ಆಟ ಬೇರೆ, ಜಾತ್ರೆ ಬೇರೆ. ಇದು ನಮಗೆ ಖಚಿತವಿರಬೇಕು. ಪ್ರದರ್ಶನಗಳಿಗೆ ಜನ ಸೇರುವುದು, ಸಭೆ ದೊಡ್ಡದಾಗಿರುವುದು ಸಂತೋಷದ ವಿಚಾರ. ಆ ಸಭೆಯ ಬರುವಿಕೆ, ಯಕ್ಷಗಾನ ಕಲಾಸ್ವಾದನೆಗಾಗಿ ಬರುವಂತೆ ಆಗಬೇಕು. ಗೌಜಿ ಗದ್ದಲಕ್ಕಾಗಿ ಅಲ್ಲ. ಹಾಗೆ ಮಾಡಿದರೆ, ಕಲಾಮಾಧ್ಯಮವೊಂದನ್ನು ತಿರುಗಿಸಿ ಬಳಸಿದಂತೆ ಆಗುತ್ತದೆಂದು ನನ್ನ ಎಣಿಕೆ, ಯಕ್ಷಗಾನ ಎಂಬ ಕಲೆಗೆ, ಒಂದು ಕಲಾಭಾಷೆ ಇದೆ. ಅದು ಒಂದು ಸರಳ, ಅವಾಸ್ತವ ರಂಗಭೂಮಿ, ವೇಷ, ಸಂಗೀತ, ನೃತ್ಯ, ಬಣ್ಣ, ಚಲನೆ, ಮಾತು -ಇವು ಅದರ ಪರಿಕರಗಳು, ದೃಶ್ಯಾವಳಿ, ಸೀನರಿಗಳು ಯಕ್ಷಗಾನ ಕಲಾಭಾಷೆಗೆ ಹೊರತಾದುವು. ಯಕ್ಷಗಾನ 'ವಾಸ್ತವಿಕ' [ರಿಯಲಿಸ್ಟಿಕ್] ಕಲೆ ಅಲ್ಲ. ಇದನ್ನು ತಿಳಿಯದವರು ಮಾತ್ರ, ವಾಸ್ತವಿಕ ದೃಶ್ಯ ನಿರ್ಮಾಣವನ್ನು ಸಮರ್ಥಿಸುತ್ತಾರೆ.
ಬ್ಯಾಂಡು, ವಾದ್ಯ, ದುರುಸುಗಳು, ಮುಕ್ತವಾದ ಒಂದು ಬೇರೆ ಸಂದರ್ಭದಲ್ಲಿ ಜಾತ್ರೆ, ವಿಜಯೋತ್ಸವ, ರ್‍ಯಾಲಿಗಳಲ್ಲಿ ನಮಗೆ ಸಂತೋಷ [ಮಜಾ] ನೀಡಬಹುದು. ಆದರೆ, ಸಶಕ್ತವಾದ ಒಂದು ರಂಗಭೂಮಿಯಾದ ಯಕ್ಷಗಾನದ ಕಥೆ, ಅಭಿನಯ, ಹಿಮ್ಮೇಳ ಮಾತುಗಳನ್ನು, ಅದರ ಕಲಾ ಸೌಂದರ್ಯವನ್ನು ಅಡೆತಡೆಗಳಿಲ್ಲದೆ, ರಗಳೆಗಳಿಲ್ಲದೆ ಸವಿಯಬೇಕಾದರೆ, ಅಂತಹವುಗಳು ಇರಲೇಬಾರದು. ಅವು ಕಲೆಯೆಂಬ ಸುಂದರ ವೃಕ್ಷಕ್ಕೆ ಬದನಿಕೆಗಳೇ ಹೊರತು, ಪೋಷಕಗಳಲ್ಲ. ಬಯಲಾಟಗಳನ್ನಾಡಿಸುವ ಪ್ರೋತ್ಸಾಹಕರು ಇದನ್ನು ಮನಗಾಣಬೇಕು.
ಅಷ್ಟೇ ಅಲ್ಲ - ಅಂತಹ 'ಅನ್ಯ ವಸ್ತುಗಳ' ಸೇರ್ಪಡೆಯಿಂದ, ಇನ್ನೊಂದು ಅಪಾಯವಿದೆ. ಅವು ಕಥೆ, ಪ್ರದರ್ಶನ, ಕಲಾಸ್ವಾದನ ಕಡಿಮೆ ಮಾಡಿ, ಪ್ರೇಕ್ಷಕನ ಲಕ್ಷ್ಯವನ್ನು 'ರಂಗದ ಹೊರಗೆ' ಕೊಂಡೊಯ್ಯುತ್ತವೆ. ಇದೇ ಮುಂದುವರಿದು ರಂಗಸ್ಥಳದ ಪ್ರದರ್ಶನ ಅಮುಖ್ಯವಾಗಿ, ಕಟ್ಟುಕಟ್ಟಲೆಯಾಗಿ, ಈ ಸೇರ್ಪಡೆಗಳೇ ಮುಖ್ಯವಾಗುತ್ತದೆ. [ಈಗಾಗಲೇ ಇದು ಆರಂಭವಾಗಿದೆ.] ಗೌಜಿ ಗಲಾಟೆ ಇದ್ದರೆ, ಮಾತು, ಶ್ರುತಿ, ಹಾಡು, ನೃತ್ಯ, ಅಭಿನಯಗಳು ಅಡಗಿ ಹೋಗುತ್ತವೆ. ಅರ್ಥಹೀನವಾಗುತ್ತವೆ.
ಇದು ಅಭಿರುಚಿಗೆ ಸಂಬಂಧಪಟ್ಟ, ಪ್ರಶ್ನೆ. ಇಲ್ಲಿ 'ನಿರ್ಧಾರದ ಸ್ವಾತಂತ್ರ್ಯ'ವೆಂಬ ವಾದವನ್ನು ತರಬಾರದು. ಕಲಾಪರಿಸರದಲ್ಲಿ ಸ್ವಾತಂತ್ರ್ಯವೆಂಬುದನ್ನು ಎಚ್ಚರಿಕೆಯಿಂದ

0 ಡಾ. ಎಂ. ಪ್ರಭಾಕರ ಜೋಶಿ