ಈ ಪುಟವನ್ನು ಪ್ರಕಟಿಸಲಾಗಿದೆ








ಒಡೋಲಗ ವೈಭವ
ಕಲಾ ಸಂಸ್ಕಾರ ಪ್ರಶಿಕ್ಷಣ

ಯಕ್ಷಗಾನದ ಕುರಿತು ಅಭಿಮಾನ ಮತ್ತು ತಿಳಿವಳಿಕೆಗಳೆರಡೂ ಇರುವ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜೀಯವರು, ಚಾತುರ್ಮಾಸ್ಯ ಅವಧಿಯ ಸಾಂಸ್ಕೃತಿಕ ಸರಣಿಯ ಅಂಗವಾಗಿ ಏರ್ಪಡಿಸುತ್ತಿರುವ ಎರಡನೆಯ ಯಕ್ಷಗಾನ ಸಮ್ಮೇಳನ ಇದು. ಇದನ್ನು ಒಡ್ಡೋಲಗ ವೈಭವ ಎಂದು ಹೆಸರಿಸಿ, ಅದೇ ರೀತಿ ಯಕ್ಷಗಾನದ ಉಭಯ ತಿಟ್ಟುಗಳ ಒಡ್ಡೋಲಗ ದೃಶ್ಯಗಳ ಪ್ರಾತ್ಯಕ್ಷಿಕೆಗಳನ್ನೇ ಎರಡು ದಿನಗಳ ವಿಷಯವನ್ನಾಗಿ ಸಂಯೋಜಿಸಿದ್ದಾರೆ. ಇದು ಯಕ್ಷಗಾನ ಸಮ್ಮೇಳನಗಳಲ್ಲಿ ವಿನೂತನವಾದ ಒಂದು ಕಲ್ಪನೆ. ಸ್ವಾಮೀಜಿಯವರ ಹಲವು ಯೋಚನೆ, ಯೋಜನೆಗಳ ಹಾಗೆ ಇದು ಕೂಡ ಸೃಷ್ಟಿ ಶೀಲ ಮತ್ತು ಮಾರ್ಗದರ್ಶಿಯಾಗಿರುವ ಒಂದು ಮಾದರಿ.

ಈ ಮಾದರಿಯಿಂದಾಗಿ ಬರಿಯ ಭಾಷಣಗಳೆ ಇರುವ ಸಮ್ಮೇಳನದಲ್ಲಿ ಬರುವ ಏಕತಾನತೆ, ಬೇಸರ, ತಪ್ಪಿ, ಲವಲವಿಕೆ ಇರುತ್ತದೆ. ಜೊತೆಗೆಯೆ, ಕಲೆಯ ಕುರಿತು ವಿವೇಚನೆ, ಅದು ಪ್ರತ್ಯಕ್ಷ ರೂಪದಲ್ಲಿ ಹೆಚ್ಚು ಜೀವಂತವಾಗುತ್ತದೆ ಎಂಬ ತತ್ವಕ್ಕೂ ಇದು ಪೂರಕವಾಗಿದೆ.


ಈ ಲೇಖನವು ಸಮ್ಮೇಳನದ ಆಶಯ ಭಾಷಣ.

ಒಡ್ಡೋಲಗವೆಂದರೆ ಪಾತ್ರಗಳ ಪ್ರವೇಶ, ನೃತ್ಯಗಳ ಮತ್ತು ದೃಶ್ಯಗಳು. ಇದರಲ್ಲಿ ವಿವಿಧ ರೂಪ ಮತ್ತು
ವಿಧಾನಗಳಿವೆ. ಪಾತ್ರ ಮತ್ತು ಸಂದರ್ಭಾನುಸಾರ ವ್ಯತ್ಯಾಸ, ವೈವಿಧ್ಯಗಳಿರುತ್ತವೆ.

• ಡಾ. ಎಂ. ಪ್ರಭಾಕರ ಜೋಶಿ