ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

105

ರಂಗರೂಪಗಳಲ್ಲಿ ಕಾಣಿಸುತ್ತದೆ. ಅಸ್ಸಾಂನಿಂದ ಕೇರಳದ ತನಕವೂ ಇದು ಹೀಗೆಯೇ ನಡೆಯಿತೆನ್ನಬಹುದು. ತೆಲುಗು, ತಮಿಳುಗಳಲ್ಲಂತೂ ನಮ್ಮಲ್ಲಿರುವಂತಹದೇ ಬಗೆಯ ಯಕ್ಷಗಾನವೆಂಬ ಹೆಸರಿನಲ್ಲೇ ಪ್ರಸಂಗ (ಕಾವ್ಯ)ಗಳಿದ್ದು ಅಲ್ಲಿಯ ಪಾರಂಪರಿಕ ರಂಗಪ್ರಕಾರಗಳಿಗೆ ಆಧಾರವಾಗಿವೆ.
ಹೀಗೆ ನಮ್ಮ ನಾಡಿನಲ್ಲಿ ಕಾವ್ಯಪ್ರಕಾರವೊಂದು, ಯಕ್ಷಗಾನವೆಂದು ನಾವು ಈಗ ಹೇಳುವ ರಂಗಕಲೆಯ ಪೂರ್ವರೂಪದ ಒಂದು ವಿಶಿಷ್ಟ ರಂಗಕಲೆಯಾಗಿ ವಿಕೃತಗೊಂಡ ಬಳಿಕದ ಪ್ರಯೋಗವೆಂದರೆ ಪ್ರಾದೇಶಿಕವಾದ ಪ್ರಭೇದ ಅಥವಾ ತಿಟ್ಟುಗಳ ಉಗಮ. ಪ್ರಾಯಃ ಮೂಲತಃ ಒಂದೇ ಪ್ರಕಾರವಾಗಿದ್ದ ರಂಗವು ಕವಲಾಗಿ, ತೆಂಕು ಬಡಗುತಿಟ್ಟುಗಳೂ ಆ ಬಳಿಕ ಬಡಗುತಿಟ್ಟಿನ ಒಂದು ಪ್ರಭೇದವಾದ ಉತ್ತರ ಕನ್ನಡ ತಿಟ್ಟೂ ರೂಪಿತವಾದವು. ಅಂತೆಯೇ ಗೊಂಬೆಯಾಟದ ಪ್ರಕಾರದಲ್ಲೂ ಯಕ್ಷಗಾನ ಕಲೆ ಕಾಣಿಸಿಕೊಂಡಿತು.
ಪ್ರಸಂಗ ರಚನೆ
ಪ್ರದರ್ಶನಕ್ಕೆ ಆಧಾರವಾದ ಪ್ರಸಂಗದ ರಚನೆ ಮತ್ತು ವಿನ್ಯಾಸ ಸುಮಾರು 1500 ರಿಂದ ಈ ಶತಮಾನದ ಆರಂಭದ ತನಕ ಸ್ಥೂಲವಾಗಿ ಒಂದೇ ಆದರೂ ಆದ್ಯ ಪ್ರಸಂಗಕರ್ತರಾದ ಪುರಂದರದಾಸ, ಪಾರ್ತಿಸುಬ್ಬರಿಂದ ಮುಂದಿನ ಕಾಲಘಟ್ಟಗಳಲ್ಲಿ ಪ್ರಸಂಗರಚನೆಯು ಹೆಚ್ಚು ಹೆಚ್ಚು ರಂಗದ ಅವಶ್ಯಕತೆಗಳಿಗೆ ಅಭಿಮುಖವಾಗಿದೆ. ಇಂದು ತೀರಾ ಸಾಮಾನ್ಯ ಮಟ್ಟದ ಪ್ರಸಂಗವೂ ಸಹ ರಂಗಸ್ಥಳದ ದೃಶ್ಯ, ತಂತ್ರ ಮೊದಲಾದ ಸಂಗತಿಗಳನ್ನು ಗಮನಿಸಿಕೊಂಡಿರುತ್ತದೆ.
ವಸ್ತುವಿನ ದೃಷ್ಟಿಯಿಂದ ಕಳೆದ ಶತಮಾನದಲ್ಲಿದ್ದ ಮೂಲ್ಕಿ ವೆಂಕಣ್ಣ ಕವಿ ರಚಿಸಿದ 'ಮಾನಸ ಚರಿತ್ರೆ' ಗಮನಾರ್ಹ ಪ್ರಾಯೋಗಿಕ ಕೃತಿ. ಅದರಲ್ಲಿ ಮನಸ್ಸು, ಕ್ರೋಧ, ಮೋಹ, ಶಾಂತಿ ಮೊದಲಾದ ಭಾವಗಳೇ ಪಾತ್ರಗಳು, ಪೌರಣಿಕೇತರವಾದ ಕಥೆಯ ಮೊತ್ತಮೊದಲ ಪ್ರಸಂಗ, ಬಹುಶಃ ಕವಿ ಮುದ್ದಣನ 'ರತ್ನಾವತಿ ಕಲ್ಯಾಣ” ಪ್ರಾಯಃ ಇದೇ ಕಾಲಕ್ಕೆ ಪಲಾಂಡು (ನೀರುಳ್ಳಿ) ಚರಿತ್ರೆ, ಮೋಹಿನಿ (ಹೊಗೆ ಸೊಪ್ಪು) ಚರಿತ್ರೆ ಮೊದಲಾದ ಕೌತುಕಕಾರಿ ಪ್ರಸಂಗಗಳೂ ರಚಿತವಾದುವು. ಶೇಕ್ಸ್‌ಪಿಯರ್‌ನ ನಾಟಕದ ಯಕ್ಷಗಾನ ರೂಪ 19ನೆಯ ಶತಮಾನದಲ್ಲಿ ಆರಂಭದಲ್ಲಿ ಯಕ್ಷಗಾನವಾಗಿತ್ತು ಎಂದು ಡಾ. ಶ್ರೀನಿವಾಸ ಹಾವನೂರರು ಗುರುತಿಸಿದ್ದಾರೆ. ದಿ| ಜಿ. ಆರ್. ಪಾಂಡೇಶ್ವರರ 'ಮಾರಾವತಾರ' ವಿಶಿಷ್ಟ ಏಕಪಾತ್ರ ಪ್ರಸಂಗ. ಇದು ಇಪ್ಪತ್ತನೆಯ ಶತಮಾನದ ಆದ್ಯ ಪ್ರಯೋಗಗಳಲ್ಲೊಂದು. ಆಯುರ್ವೇದ ವಿವರಗಳ ಯಕ್ಷಗಾನ

ಡಾ. ಎಂ. ಪ್ರಭಾಕರ ಜೋಶಿ