ಈ ಪುಟವನ್ನು ಪ್ರಕಟಿಸಲಾಗಿದೆ

112

ಮುಡಿ

ಯಕ್ಷಗಾನದ ಶಿಸ್ತುಬದ್ಧ ರೂಪ, ಬೇರೆ ಹಾಡುಗಳನ್ನಾಧರಿಸಿದ ಯಕ್ಷಗಾನ, ತಂತ್ರ ಪ್ರಧಾನವಾದ ರಂಗಕೃತಿ, ಯಕ್ಷಗಾನ -ಭರತನಾಟ್ಯಗಳ ಸಮನ್ವಯ, ಪಾತ್ರಪ್ರಧಾನ ರಂಗನಿರ್ಮಿತಿ, ಏಕವ್ಯಕ್ತಿ ಪ್ರಯೋಗ, ಸಮೂಹ ಮಾಧ್ಯಮ, ಕಾವ್ಯ ತಾಳಮದ್ದಲೆ (ಯಕ್ಷಗಾನೇತರ ಕೃತಿ ಪ್ರಯೋಗ ಆಧಾರಿತ), ಒಂದು ವೇದಿಕೆಯಲ್ಲಿ ಒಂದೇ ಪ್ರಸಂಗದ ನಾಟಕ, ಆಟ, ತಾಳಮದ್ದಳೆಗಳನ್ನು ಏರ್ಪಡಿಸಿದ್ದು (ಹರಿಶ್ಚಂದ್ರ ಪ್ರಸಂಗ) ಹೀಗೆ ನಾಲ್ಕಾರು ಬಗೆಯಲ್ಲಿ ಅವರ ಯಕ್ಷಗಾನ ಪ್ರಯೋಗ ಸಾಹಸಗಳು ರೂಪುಗೊಂಡು ಯಶಸ್ವಿಯಾಗಿವೆ. ಹೆಗ್ಗೋಡಿನ ನೀನಾಸಂ 'ಮೇಘದೂತ' ಯಕ್ಷಗಾನ ನೃತ್ಯರೂಪಕವು ನಿರ್ದೇಶಿತ ಪ್ರಯೋಗದ ಒಂದು ವಿಶಿಷ್ಟ ಮಜಲು,
ಶಂಭು ಹೆಗಡೆ
ನಿರ್ದೆಶನದ ಮೂಲಕ ಯಕ್ಷಗಾನವನ್ನು ಶಿಸ್ತು ಮತ್ತು ಅರ್ಥಕಲ್ಪನೆಗೆ ಒಳಪಡಿಸುವತ್ತ ವ್ಯವಸಾಯ ಮೇಳದ ಮಿತಿಯಲ್ಲೇ ದಿಟ್ಟ ಯತ್ನ ಮಾಡಿದವರು ರಂಗತಜ್ಞ ನಟ, ನಿರ್ದೇಶಕ ಕೆರೆಮನೆ ಶಂಭು ಹೆಗಡೆಯವರು. ಅವರ ಸಂಘಟನೆಗೆ ಖಚಿತವಾದ ರಂಗ ಸಿದ್ಧಾಂತ ಶಿಕ್ಷಣದಿಂದ ಪ್ರೇರಿತವಾದ ಧೋರಣೆಗಳೂ ಪ್ರದರ್ಶನ ಕಲ್ಪನೆಗಳೂ ಇದ್ದು ಅವರ ಇಡಗುಂಜಿ ಮೇಳವು (1974-1985) ವ್ಯವಸಾಯ ರಂಗವನ್ನು ನೇರ್ಪುಗೊಳಿಸಿ ಅಭಿರುಚಿ ನಿರ್ಮಿಸುವ ಒಂದು ಚಳವಳಿಯಾಗಿ ಗಮನಾರ್ಹವಾದುದು. ಕಾಲಮಿತಿ ಪ್ರಯೋಗವನ್ನು ಅವರು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. ಏಕವ್ಯಕ್ತಿ ಪ್ರಯೋಗಗಳು
ಒಂದು ಪ್ರಸಂಗದ ವಿವಿಧ ಪಾತ್ರಗಳನ್ನು ಒಬ್ಬನೇ ಪ್ರದರ್ಶಿಸುವ ಪ್ರಯೋಗವನ್ನು (ಪಂಚವಟಿ) ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರು ಗೈದಿದ್ದಾರೆ. ಪ್ರೊ. ಉದ್ಯಾವರ ಮಾಧವಾಚಾರ್ಯರ ಸಂಯೋಜನೆಯಲ್ಲಿ ಈ ಪ್ರಬಂಧದ ಲೇಖಕನು 'ಏಕವ್ಯಕ್ತಿ ತಾಳಮದ್ದಳೆ'ಯನ್ನು ಪ್ರಯೋಗಿಸಿದ್ದಾನೆ.
ನಾಟ್ಯಶಾಸ್ರೋಕ್ತವಾದ ವಿವಿಧ ನಾಯಕ ಪ್ರಭೇದಗಳನ್ನಾಧರಿಸಿದ ಮಂಟಪ ಪ್ರಭಾಕರ ಉಪಾಧ್ಯ, ಶತವಧಾನಿ ಆರ್. ಗಣೇಶ್ ಅವರು ರೂಪಿಸಿದ ಯಕ್ಷ ನೃತ್ಯ ಪ್ರಯೋಗ 'ಭಾಮಿನಿ' ಒಂದು ಗಮನಾರ್ಹ ಪ್ರಯೋಗ. ಈ ಪ್ರಯೋಗದ ಮುಂದುವರಿಕೆಯಾಗಿ 'ಕೃಷ್ಣಾರ್ಪಣ', 'ಯಕ್ಷ ದರ್ಪಣ'ಗಳು ಬಂದುವಲ್ಲದೆ ಅವರೇ ಯುಗಲ ಯಕ್ಷಗಾನ (ಇಬ್ಬರು ಕಲಾವಿದರು -ಪುರುಷವೇಷ ಸ್ತ್ರೀ ವೇಷಗಳ ಮೂಲಕ ಪ್ರದರ್ಶನ ನೀಡುವ ವಿಧಾನ) ಎಂಬ ಪ್ರಯೋಗವನ್ನು

0 ಡಾ. ಎಂ. ಪ್ರಭಾಕರ ಜೋಶಿ