ಈ ಪುಟವನ್ನು ಪ್ರಕಟಿಸಲಾಗಿದೆ



ಅರ್ಥದಲ್ಲಿ ಪುನರಾವರ್ತನೆ
ಒಂದು ಟಿಪ್ಪಣಿ

ಕಥಾ ಕಥನದಲ್ಲಿ ಅಂದರೆ ಕಥೆ ಹೇಳುವಿಕೆ, ಪ್ರವಚನ, ಪ್ರದರ್ಶನ, ಜಾನಪದ ಮಹಾಕಾವ್ಯ, ಯಕ್ಷಗಾನದಂತಹ ಪ್ರಕಾರಗಳು - ಯಾವುದೇ ಇರಲಿ ಕಥನ ಪುನರಾವರ್ತನೆ, ಎನ್ನುವುದು ಸಹಜ ಮತ್ತು ಅನಿವಾರ್ಯ , ವಿಶ್ವಾದ್ಯಂತ ಕಥನ ಪರಂಪರೆಯಲ್ಲಿ ಇದು ಇದೆ. ಭಾರತೀಯ ಕಥಾಪುರಾಣ, ಜಾನಪದ ಪರಂಪರೆಯಲ್ಲಿ ಇದು ವಿಶೇಷವಾಗಿ ಇದೆ. ಹಿಂದೆ ನಡೆದ ಘಟನೆಯನ್ನು ಮುಂದೆ ಜರಗುವ ಪಾತ್ರ ಸಂವಾದಗಳಲ್ಲಿ ಪುನರಾವರ್ತಿಸುವುದು ಸಾಮಾನ್ಯ. ಕಥೆಯ ನಡೆ ಸರಾಗವಾಗಲು, ಕೇಳುಗನಿಗೆ, ಕಥೆಯ ಕೊಂಡಿ ಸಿಗಲೂ ಇದು ಅಗತ್ಯವೂ ಹೌದು. ಅದು ಎಷ್ಟು ? ಹೇಗೆ ಇರಬೇಕು? ಎಂಬ ಪ್ರಶ್ನೆ ಬೇರೆ.
ನಮ್ಮ ಯಕ್ಷಗಾನವನ್ನು ಲಕ್ಷಿಸಿ ಹೇಳುವುದಾದರೆ ಪುನರಾವರ್ತನೆಯು ಎರಡು ರೀತಿಗಳಲ್ಲಿ ಬರುತ್ತದೆ. ಒಂದು, ಪೀಠಿಕೆಗಳಲ್ಲಿ. ಪಾತ್ರಗಳ ಪೀಠಿಕೆ ಅಥವಾ ಪ್ರವೇಶ ಎಂಬ ಸ್ವಗತಗಳಲ್ಲಿ ಹಿಂದಿನ ಕತೆ ಬರುತ್ತದೆ. ಹಿಂದಿನ ಕಥೆಯನ್ನು ಯಥಾವತ್ತಾಗಿ (ತನ್ನ ದೃಷ್ಟಿಯಲ್ಲಿ) ಹೇಳುವುದೆ ಪೀಠಿಕೆಯಾಗಿತ್ತು. ಆದುದರಿಂದಲೇ ಪೀಠಿಕೆಗಳಿಗೆ 'ಪೂರ್ವಕಥೆ' ಎಂಬ ಹೆಸರೂ ಉಂಟು. ಉದಾ : ಕೃಷ್ಣ ಸಂಧಾನದ ಧರ್ಮರಾಜನ ಪಾತ್ರವಾದರೆ, ಆವರೆಗಿನ ಕತೆ, ತನ್ನ ಸಂಧಿಪ್ರಿಯತೆಯ ದೃಷ್ಟಿಯಲ್ಲಿ, ಕೌರವನಾದರೆ - ಅದೇ ಕತೆ - ತನ್ನ 'ನ್ಯಾಯ'ವನ್ನು ಮುಂದಿಟ್ಟು ಹೇಳುವುದು ಪದ್ಧತಿ,

ಡಾ. ಎಂ. ಪ್ರಭಾಕರ ಜೋಶಿ