ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

133

ಸುಮಾರು ನಾಲೈದು ಗಂಟೆಗಳ ಪ್ರದರ್ಶನ ಅವಧಿಯ ಒಂದು ಪ್ರಸಂಗದಲ್ಲಿ, ಹೀಗೆ ಎರಡು ಹಿನ್ನೆಲೆಗಳ ಇಷ್ಟು ಸಂಖ್ಯೆಯ ಪುನರಾವರ್ತನೆ ಆಗುತ್ತದೆ. ಸಹಜವಾಗಿ ಕತೆಯ ನಡೆಯೇ ಹಾಗಿದೆ.
ಇದು ಸ್ವಾಭಾವಿಕವಾಗಿ ಕೇಳುಗನಿಗೆ ಬೇಸರ ತರಿಸುತ್ತದೆ. ಕಾಲ ಪರಿವರ್ತನೆಯಿಂದ ಶ್ರೋತೃಗಳ ಸ್ಪಂದನ, ಸಂವೇದನೆಗಳಲ್ಲಿ ಉಂಟಾಗಿರುವ ವ್ಯತ್ಯಾಸದಿಂದಾಗಿ,ಪುನರಾವರ್ತನೆಗಳ ಕುರಿತು ಇನ್ನಷ್ಟು ಪ್ರತಿಕೂಲಾಭಿಪ್ರಾಯ ಕಂಡು ಬರುತ್ತಿದೆ.
ಹೀಗೆಂದು ಈ ಬಗೆಯ ಪುನರಾವರ್ತನೆಗಳನ್ನು ಪೂರ್ಣವಾಗಿ ಬಿಟ್ಟು ಬಿಡುವಂತೆಯೂ ಇಲ್ಲ. ಪುನರಾವರ್ತನೆಯೇ ಕಥಾ ರೂಪವಾಗಿರುವಾಗ ಅದು ಅನಿವಾರ್ಯ ಮಾತ್ರವಲ್ಲ ಪುನರಾರ್ವತನೆಯಲ್ಲಿ ಸ್ವಾರಸ್ಯವೂ ಉಂಟು.
ಇಂತಹ ಸಂದರ್ಭಗಳಲ್ಲಿ ಕಲಾವಿದರು ಎಚ್ಚರವಹಿಸಿ ವಸ್ತು ನಿರ್ವಹಣೆ ಮಾಡಬೇಕು.ಅನಿವಾರ್ಯವಲ್ಲದಿರುವಲ್ಲಿ ಪೂರ್ವ ಕಥೆಯನ್ನು ಲಂಬಿಸಬಾರದು. ಸಂಕ್ಷೇಪಗೊಳಿಸಬೇಕು.ಅಲ್ಲದೆ ಅದನ್ನು ಹೇಳುವಲ್ಲಿ ಹೇಳುವ ವಿಧಾನ ವಿವೇಚನೆಯ ಕೋನ ಮತ್ತು ದಾರಿ (Angleand Approach)ಗಳಲ್ಲಿ ವೈವಿಧ್ಯವನ್ನು ತರಬೇಕು. ಪ್ರದರ್ಶನದಲ್ಲಿ ಈಗಾಗಲೇ ಆಗಿರುವ ಪುನರಾವರ್ತನೆಗಿಂತ ಭಿನ್ನವಾಗಿ ರೂಪಿಸಬೇಕು. ಕೊಡುವ ಪ್ರಾಶಸ್ತ್ರಗಳನ್ನು ಬದಲಿಸಿಕೊಳ್ಳಬೇಕು. ಆಗ ಪುನರಾವರ್ತನೆ ಕೂಡ, ಶ್ರೋತೃವಿಗೆ ಸ್ವಾರಸ್ಯಕರ ಅನುಭವವಾಗಿ ದೊರಕಬಲ್ಲುದು.

0 ಡಾ. ಎಂ. ಪ್ರಭಾಕರ ಜೋಶಿ