ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಪತ್ರಿಕೋದ್ಯಮಕ್ಕೊಂದು
ಕಾರ್ಯಸೂಚಿ
ಯಕ್ಷಗಾನ ರಂಗವು ಇಂದು ಗಾತ್ರದಲ್ಲಿ ಬೆಳೆದಿದೆ. ಅದೇ ಪ್ರಮಾಣದಲ್ಲಿ ಅದು ತನ್ನ ಗುಣದಲ್ಲಿ ಬೆಳೆದಿದೆ ಎಂದು ಹೇಳುವಂತಿಲ್ಲ. ಕೆಲವು ಗಮನಾರ್ಹ ಪ್ರಯೋಗಗಳೂ, ನಾವೀನ್ಯದ ಸೃಷ್ಟಿಶೀಲತೆಯ ತುಡಿತಗಳೂ, ಕಂಡು ಬಂದಿರುವುದಾದರೂ, ಒಟ್ಟಿನಲ್ಲಿ ಯಕ್ಷಗಾನ ಒಂದು ವಿಶಿಷ್ಟ ಕಲಾಮಾಧ್ಯಮವಾಗಿ, ತನ್ನತನವನ್ನು ಉಳಿಸಿಕೊಂಡು ಪರಿಪುಷ್ಟವಾಗಿ ಬೆಳೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಲಾವಿದರಲ್ಲಿ ವೈಯಕ್ತಿಕ ಪರಿಶ್ರಮ, ಪ್ರತಿಭೆಗಳು ಸಾಕಷ್ಟು ಇದ್ದರೂ, ಒಟ್ಟಿನಲ್ಲಿ ಯಕ್ಷಗಾನ ರಂಗ ವಿಚಲನೆಯ ಹಾದಿಯಲ್ಲಿದೆ ಎಂದು ಹೇಳಬಹುದು.
ವಿಮರ್ಶೆಯ ಅಭಾವ
ಇಂದಿನ ಯಕ್ಷಗಾನದ ಒಟ್ಟು ಪರಿಸ್ಥಿತಿಗೆ, ಯಕ್ಷಗಾನಕ್ಕೆ ಸಂಬಂಧಿಸಿದ ವಿಮರ್ಶೆ ಸಾಕಷ್ಟು ಬೆಳೆಯದಿರುವುದು ಒಂದು ಮುಖ್ಯ ಕಾರಣ. ಒಂದು ಕಲೆಯ, ಅಥವಾ ಯಾವುದೇ ಕ್ಷೇತ್ರದ ಬೆಳವಣಿಗೆಗೆ ಮುಖ್ಯವಾದ ಒಂದು ಪ್ರೇರಕ ಶಕ್ತಿಯೆಂದರೆ ವಿಮರ್ಶೆ. ವಿಮರ್ಶೆಯು

° ಡಾ. ಎಂ. ಪ್ರಭಾಕರ ಜೋಶಿ