ಈ ಪುಟವನ್ನು ಪ್ರಕಟಿಸಲಾಗಿದೆ










ಅಮೃತ ಸೋಮೇಶ್ವರರ
ಯಕ್ಷಗಾನ ಕೃತಿ ಸಂಪುಟ


ಈ ಶತಮಾನದ ಯಕ್ಷಗಾನ ಪ್ರಸಂಗ ಸಾಹಿತ್ಯದ ಇತಿಹಾಸ ಎಂಬ ಕುತೂಹಲಕವಾದದ್ದು. ಇದರಲ್ಲಿ 1940ರ ವರೆಗಿನ ಮತ್ತು ನಂತರದ ಎಂಬ ಎರಡು ಘಟ್ಟಗಳನ್ನು ಗುರುತಿಸಬಹುದು. ದಿ| ಪಂದಬೆಟ್ಟು ವೆಂಕಟ್ರಾಯರ "ಕೋಟಿ-ಚೆನ್ನಯ" (1939)ದಿಂದ ಪ್ರಸಂಗ ಸಾಹಿತ್ಯದಲ್ಲಿ ಒಂದು ಭಿನ್ನಮಾರ್ಗ (departure) ಕಾಣಿಸಿತೆನ್ನಬಹುದು. ಕಳೆದ ಐವತ್ತು ವರ್ಷಗಳಲ್ಲಿ ಇದು ಪುನಃ ಹಲವು ಕವಲುಗಳಾಗಿ ಮುಂದುವರಿದಿದ್ದು, ವಿಪುಲವಾದ ಕೃತಿರಾಶಿ ನಿರ್ಮಾಣವಾಗಿದೆ. ಈ ಭಿನ್ನಮಾರ್ಗದ ಪರಿಣತ ಫಲವೆಂಬ ಮತ್ತು ಪ್ರಾತಿನಿಧಿಕ ಕೃತಿ ಸಮುಚ್ಚಯವೆಂಬ ಅಂಕಿತಕ್ಕೆ, ಇತ್ತೀಚೆಗೆ ಪ್ರಕಟಗೊಂಡ ಶ್ರೀ ಅಮೃತ ಸೋಮೇಶ್ವರರ ಹದಿಮೂರು ಪ್ರಸಂಗಗಳ ಸಂಕಲವು ಅರ್ಹವಾಗಿದೆ. ವಸ್ತುವಿನ ಆಯ್ಕೆ, ರಚನಾ ವಿಧಾನ, ಆಶಯ, ಭಾಷೆ, ರಂಗ ಅನ್ವಯ ಮತ್ತು ಗಾತ್ರ ಈ ಎಲ್ಲದರಲ್ಲೂ ಈ ಸಂಪುಟವು ಮಹತ್ವದ್ದೂ ಅಭ್ಯಾಸ ಯೋಗ್ಯವೂ ಆಗಿದೆ.
ಸಹಸ್ರಕವಚ ಮೋಕ್ಷ, ಕಾಯಕಲ್ಪ, ಅಮರವಾಹಿನಿ, ಮಗಧೇಂದ್ರ, ತ್ರಿಪುರ ಮಥನ,

'ವಂಶವಾಹಿನಿ, ಭೌಮಾಸುರ, ಚಕ್ರವರ್ತಿ ದಶರಥ, ಆದಿಕವಿ ವಾಲ್ಮೀಕಿ, ಸಹಸ್ರಾನೀಕ, ಚಾಲುಕ್ಯ ಚಕ್ರೇಶ್ವರ, ಅಮರಶಿಲ್ಪಿ ವೀರಕಲ್ಕುಡ, ಅಂಧಕ ಮೋಕ್ಷ - ಇವು ಇಲ್ಲಿರುವ ಹದಿಮೂರು

• ಡಾ. ಎಂ. ಪ್ರಭಾಕರ ಜೋಶಿ