ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನವು ವಾಚಿಕಾಭಿನಯ ಪ್ರಧಾನವೆ?

  • ಪ್ರಶ್ನೆ: ಯಕ್ಷಗಾನವು ವಾಚಿಕಾಭಿನಯ ಪ್ರಧಾನವೆ? ಇದು ಸಾಹಿತ್ಯ ಪ್ರಧಾನವೆಂಬ ಒಂದು ವಾದದ ಕುರಿತು, ಮತ್ತು ರಂಗಕಲೆ ಎಂಬ ಕುರಿತು ಹೇಗೆ ವಿಶ್ಲೇಷಿಸಬಹುದು?

-ಪಿ. ವಿ. ಪರಮೇಶ್, ಮಂಗಳೂರು •

ಉತ್ತರ: ಈ ಪ್ರಶ್ನೆಗೆ ಹಲವು ಆಯಾಮಗಳಿವೆ. ಇದನ್ನು ಸಾವಧಾನದಿಂದ, ಸ್ವಲ್ಪ ವಿಸ್ತಾರವಾಗಿ ಚಿಂತಿಸಬೇಕಾಗುತ್ತದೆ. ಕಲೆ ಎಂದರೇನು, ವಾಚಿಕಾಭಿನಯ ಎಂದರೇನು, 'ಸಾಹಿತ್ಯ' ಎಂದರೇನು, 'ಪ್ರಧಾನ' ಎಂದರೆ ಏನು, ರಂಗಕಲೆ ಮತ್ತು ಸಾಹಿತ್ಯಗಳ ಸಂಬಂಧವೆಂತಹದು, ಯಾವ್ಯಾವ ಸಂದರ್ಭಕ್ಕೆ ಯಾವುದು ಮುಖ್ಯ, ಹೇಳುವವರು ಯಾಕಾಗಿ ಹೇಳುತ್ತಿದ್ದಾರೆ, ವಾದ ಮಂಡನೆಯ ಉದ್ದೇಶವೇನು, ಮೊದಲಾದವುಗಳು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ನಾವು ಯಕ್ಷಗಾನ ಎಂದು ಹೇಳುವುದು ಯಾವುದನ್ನು? ಪ್ರಸಂಗ, ಅದರ ಹಾಡುಗಾರಿಕೆ, ವಾದ್ಯ, ನೃತ್ಯ, ಅರ್ಥ, ರಂಗವಿಧಾನ ಮತ್ತು ರೂಢಿಗಳು, ವೇಷಭೂಷಣ, ಇವೆಲ್ಲ ಸೇರಿ ಯಕ್ಷಗಾನ. ಈಯೆಲ್ಲವೂ ಐತಿಹಾಸಿಕವಾಗಿ ಏಕಕಾಲಕ್ಕೆ ಹುಟ್ಟಿ, ಸೇರಿದ್ದಲ್ಲ, —-* ಉದಯವಾಣಿ ಜಿಜ್ಞಾಸೆ ಅಂಕಣದಲ್ಲಿ ಬಂದ ಒಂದು ಪ್ರಶ್ನೆ.

  • ಡಾ. ಎಂ. ಪ್ರಭಾಕರ ಜೋಶಿ