ಈ ಪುಟವನ್ನು ಪ್ರಕಟಿಸಲಾಗಿದೆ
44
ಮುಡಿ

ವಾದ - 3. ಯಕ್ಷಗಾನದ ಕುಣಿತದಲ್ಲಿ, ಪದ್ಯಗಳ ಅರ್ಥವನ್ನು ವಿವರಿಸುವ ರೀತಿ ಇಲ್ಲ.ಕೇವಲ ಸ್ಥೂಲವಾದ ವಿನ್ಯಾಸ, ಮಾತ್ರ ಇದೆ. ಉತ್ತರಕನ್ನಡದ ಪದ್ಧತಿ ಬಿಟ್ಟು, ಉಳಿದೆಡೆ,ಶಬ್ದಗಳ, ಪದ್ಯಗಳ, ನೃತ್ಯ-ಅಭಿನಯವು ಪರಂಪರೆಯಲ್ಲಿ ಇರಲಿಲ್ಲ. ಪದ್ಯಗಳ ಭಾವವನ್ನು ವಿವರಿಸುವ ಕೆಲಸಕ್ಕೆ ಮಾತುಗಾರಿಕೆಯೆ ಬೇಕು.

ಅಲ್ಲದೆ, ಸೂಕ್ಷ್ಮವಾದ ಮೌಲ್ಯವಿಚಾರಗಳು, ಸಂಘರ್ಷಗಳು, ಅನಿಸಿಕೆಗಳು, ದಾರ್ಶನಿಕ ಆಧ್ಯಾತ್ಮಿಕ ವಿಚಾರಗಳು ಮಾತಿನಲ್ಲಿಯೆ ರೂಪಗೊಳ್ಳಬೇಕು. ಹಾಡು ಕುಣಿತಗಳಿಂದ ಅದು ಅಸಾಧ್ಯ
. - (2 ಮತ್ತು 3ನೇ ವಾದಗಳ ಮುಖ್ಯ ಪ್ರತಿಪಾದಕರು - ಶ್ರೀ ಶೇಣಿಯವರು.)

- ನೃತ್ಯ ಮತ್ತು ನಾಟ್ಯಗಳಲ್ಲಿ, ಅಂಗಿಕಾಭಿನಯದಲ್ಲಿ ಮುಖ್ಯವಾಗಿ ಎರಡು ರೀತಿ ವಿವರಣಾತ್ಮಕ, ಮತ್ತು ಸೂಚಕ ಎಂದು. ಚಿತ್ರಾಭಿನಯವೆನ್ನುವ ಪದಾಭಿನಯ,ಪದ್ಯಾಭಿನಯ, ಮುದ್ರೆಗಳಿಂದ ಕೂಡಿದ್ದು ವಿವರಣಾತ್ಮಕ (discriptive), ಚಲನೆ,ಗತ್ತು, ಸ್ಥೂಲವಾದ ಭಾವವನ್ನು ಅಭಿವ್ಯಕ್ತಿಸುವ ಮುಖ, ಕೈ ಬೀಸಾಟ, ಕಾಲಿನ ಹೆಜ್ಜೆಗಳ ಭಾರದ ವ್ಯತ್ಯಾಸಗಳಿಂದ ಕೂಡಿದ್ದು ಸೂಚಕ (suggestive) ಅಭಿನಯ. ಇದನ್ನೂ ದುರ್ಬಲವೆನ್ನ ಲಾಗುವುದಿಲ್ಲ.ಅನೇಕಾನೇಕ ನೃತ್ಯ ಪ್ರಕಾರಗಳು, ಜಾನಪದ ಕುಣಿತಗಳು, ಬುಡಕಟ್ಟು ಕುಣಿತಗಳು, ಪಾಶ್ಚಾತ್ಯ ನೃತ್ಯ, ಆಧುನಿಕ ಸಿನಿಮಾ ನೃತ್ಯ ಇವೆಲ್ಲ ಪದ-ಶಬ್ದಗಳು ಅಭಿನಯಿಸುವುದಿಲ್ಲ. ಯಕ್ಷಗಾನ - ತೆಂಕು, ಬಡಗುಗಳ ಕುಣಿತಗಳೂ ಬಹ್ವಂಶ ಹಾಗೆಯೆ.
- ಅಷ್ಟೇ ಅಲ್ಲ. ಶಬ್ದಗಳ ಮೂಲಕ ವಿವರಿಸುವ ಭಾಷೆಯದಾದರೂ ಎಷ್ಟು ಪರಿಣಾಮಕಾರಿ? ನಾವು ರಂಗದಲ್ಲೂ, ದಿನಬಳಕೆಯ ಸಾಮಾನ್ಯ ಮಾತುಗಳಲ್ಲೂ ವಾಕ್ಯ, ವಾಕ್ಯಕ್ಕೆ, ಕೈಸನ್ನೆ,ಅಂಗಿಕ ಅಭಿನಯ ಮಾಡುತ್ತೇವೆ. ಯಾಕೆ? ಭಾಷೆಯು ಭಾವಗಳನ್ನು ಹೇಳುವಲ್ಲಿ ದುರ್ಬಲವೆಂದು ನಾವು ಆ ಮೂಲಕ ಒಪ್ಪಿಕೊಂಡಂತೆಯೇ ಅಲ್ಲವೆ?
- ಎಷ್ಟೋ ಬಾರಿ ಸಮರ್ಥನಾದ ಕಲಾವಿದನ ಒಂದು ಹುಂಕಾರ, ನಿಲುವು, ನೋಟ, ನಡೆ,ತಿರಸ್ಕಾರ, ಸಂತೋಷ, ಸಂಕಟ, ಆಶ್ಚರ್ಯಗಳು ಒಂದೊಂದು ಚಲನೆ, ತಿರುಗುವಿಕೆ,ಏಳು, ಬೀಳು, ಶರೀರದ ನಿಶ್ಚಲತೆ ಮೊದಲಾದ ಹಲವಾರು ಭಂಗಿ ಮತ್ತು ಮೈ ಭಾಷೆ (pose and gesture) ಗಳಿಂದ ಅತ್ಯಂತ ಪರಿಣಾಮಕಾರಿಯಾಗಿ, ಹತ್ತುವಾಕ್ಯಗಳು ಹೇಳಲಾರದ್ದನ್ನು ಹೇಳುವುದಿಲ್ಲವೆ? ಆಧ್ಯಾತ್ಮಿಕ ವಿಚಾರಗಳ ವಿವರಣೆ ಮಾತ್ರ,ಯಕ್ಷಗಾನದ ವಸ್ತು ಅಲ್ಲವಷ್ಟೆ?
* ಡಾ. ಎಂ. ಪ್ರಭಾಕರ ಜೋಶಿ