ಈ ಪುಟವನ್ನು ಪ್ರಕಟಿಸಲಾಗಿದೆ

'ಪ್ರಸಂಗ ಪಠ್ಯ ಮತ್ತು ಪ್ರದರ್ಶನ' ಎಂಬ ವಿಷಯವಾಗಿ ನಡೆಸಿದ ಸಂಶೋಧನೆಯಿಂದ ಈ ರಂಗದ ತಿಳಿವಳಿಕೆಯಲ್ಲಿ ತನ್ನ ಎತ್ತರವನ್ನು ವಿಶ್ವವಿದ್ಯಾಲಯಗಳ ವಿದ್ವಾಂಸರಿಗೆ ಶ್ರುತಪಡಿಸಿದ್ದಾರೆ. ಅವರನ್ನು 'ಡಾಕ್ಟರ್' ಎಂದು ಸಂಬೋಧಿಸುವದು ಇದಕ್ಕೇ.
'ಪದದ ಅರ್ಥ ಹೇಳುವದೆಂದರೆ ಪದವನ್ನು ಅರ್ಥ ಮಾಡಿಕೊಳ್ಳು ವುದು' ಎಂಬ ಅಡ್ಡೆ ವಾಸು ಶೆಟ್ಟರ ಮಾತಿಗೆ ಜೋಶಿ ಅವರ ನಿರ್ವಹಣೆ ಒಂದು ನಿದರ್ಶನವಾಗಬಲ್ಲುದು. ಪ್ರಸಂಗದ ಆಮೂಲಾಗ್ರ ಪರಿಶೀಲನ, ಮನನ, ಸಂದರ್ಭ ಬೇಡುವ ಉಚಿತ, ಪೋಷಕ ಅನ್ಯ ವಸ್ತುಗಳ ಪ್ರಯೋಗ, ಅರ್ಥಗಾರಿಕೆ ಎಂಬುದು ಪ್ರತಿಕಾವ್ಯದ ಸೃಷ್ಟಿಯೇ ಎಂಬುದಕ್ಕೆಲ್ಲ ಪ್ರಾತ್ಯಕ್ಷಿಕೆಯಾಗಬಲ್ಲುದು ಅವರ ಅರ್ಥ.
ಈ ಬಾರಿ (ಜೂನ್ 2, 2019) ಯಕ್ಷಧ್ರುವ ಪಟ್ಲ ಫೌಂಡೇಶನ್ ತನ್ನ ವಾರ್ಷಿಕ ಪರಮೋನ್ನತ ಪ್ರಶಸ್ತಿಯನ್ನು ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ನೀಡುತ್ತಿದೆ ಎಂದರೆ ಗುಣವನ್ನು ಕಾಣುವ ಕಣ್ಣುಗಳು ಪರಿಸರದಲ್ಲಿ ಇವೆ ಎಂದು ಅರ್ಥ. ಸಂಮಾನಿತರಾಗುತ್ತಿರುವ ಡಾ. ಜೋಶಿ ಮತ್ತು ಸಂಮಾನಿಸುತ್ತಿರುವ ಭಾಗವತ ಪಟ್ಲ ಸತೀಶ ಶೆಟ್ಟಿ ಇಬ್ಬರಿಗೂ ಅಭಿನಂದನೆಗಳು.

24 / ಯಕ್ಷ ಪ್ರಭಾಕರ