ರಾಗಿದ್ದಾಗ ಅದು ಉಳಿದು ಬೆಳೆದೀತು ಎಂಬುದಕ್ಕೆ 'ಯಕ್ಷಗಾನ ಕಲೆಗಿರುವ
ಜನಪ್ರಿಯತೆಯೇ ಸಾಕ್ಷಿ. ಕಲೆಯನ್ನು ಕಾಲದೊಂದಿಗೆ ವಿಸ್ತರಿಸುವ
ಕಲಾವಿದನ ಪ್ರಬುದ್ಧತೆ ನಿರಂತರವಾಗಿ ವಿಕಾಸವಾಗುತ್ತಾ ಸಾಗಿದರೆ ಕಲೆ
ಅರಳುತ್ತ ಮಾಗುತ್ತದೆ. ಇಲ್ಲವಾದರೆ ಅದು ಸೊರಗುತ್ತದೆ, ಮಾತ್ರವಲ್ಲ
ಒಂದೆಡೆ ನಿಂತು ಅಳಿದೂ ಹೋದೀತು. ಸಾಹಿತ್ಯ ಸಾಂಸ್ಕೃತಿ ಮತ್ತು
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಪ್ರತಿಭೆಯುಳ್ಳ ಜೋಶಿಯಂತಹವರ ಯಕ್ಷಗಾನ
ಸ್ಪರ್ಶ ಆ ಕಲೆಯನ್ನು ಜನಸಂವೇದಿಯಾಗುವಂತೆ ಮಾಡಿದೆ.”
ಆಳ ಮನದಾಳದ ಒಳಗೇನಿದೆ ಎಂದು ನೋಡಿದರೆ ಅದು ಪ್ರಭಾಕರ
ನಿಂದ (ಸೂರ್ಯನಿಂದ) ಆಕರ್ಷಿತವಾಗಿ ಬೆಳೆಯುವ, ತುಡಿಯುವ,
ಅಬ್ಬರಿಸುವ, ಉಬ್ಬರಿಸುವ ಯಕ್ಷ ಸಾಗರ, ಆಳಕ್ಕೆ ಇಳಿಯುವ ಮುನ್ನ
ಕಣಿಪುರ ಪತ್ರಿಕೆಯ ಚಂಬಲ್ತಿಮಾರ್ ಹೇಳುವ ಮಾತುಗಳು ವೈಭವೀಕರಣ
ವಲ್ಲ, ಸತ್ಯ.
“ಡಾ. ಪ್ರಭಾಕರ ಜೋಶಿ ನಮ್ಮ ನಡುವಿನ ಬೆರಗು. ಬಹು ಆಸಕ್ತಿಗಳ
ಜೀವ ವೃಕ್ಷದಂತೆ ದಾರ್ಶನಿಕ ಚಿಂತನೆಯಿಂದ ತೊಡಗಿ, ಮಿಸಳಬಾಜಿಯ
ತನಕ ನಿರಂತರ ಮಾತನಾಡುವ ಮತ್ತು ಯಾವುದೇ ವಿಷಯದಲ್ಲೂ
ಆಪ್ತರು ಸಿಕ್ಕರೆ ಮಾತನಾಡುತ್ತಲೇ ಹೊಸ ಒಳನೋಟ ಬೀರುವ ಡಾ.
ಜೋಶಿ ಕನ್ನಡದ ಪಂಡಿತ ಪರಂಪರೆಯ ಪ್ರಗಲ್ಯ ಚಿಂತಕ, ವಾಗ್ನಿ,
ಅರ್ಥಧಾರಿ ಮತ್ತು ಸಾಂಸ್ಕೃತಿಕ ರಂಗಭೂಮಿಯ ಸಂಶೋಧಕ.
ಭಾರತೀಯ ರಂಗಭೂಮಿಯನ್ನು ಗಂಭೀರವಾಗಿ ಅರ್ಥೈಸಿ ಸುಮಾರು
ಮೂರು ದಶಕಗಳ ಯಕ್ಷಗಾನ ಚರಿತ್ರೆಯನ್ನು ಅನ್ವೇಷಿಸಿ, ಅವಲೋಕಿಸಿ
ಯಕ್ಷಗಾನ ರಂಗಭೂಮಿಗೆ ಎಂದೂ ಮರೆಯಲಾಗದ ಶ್ರೇಷ್ಠ ಕೊಡುಗೆ
ನೀಡಿದ ದಾರ್ಶನಿಕ ಚಿಂತಕ ಡಾ. ಜೋಶಿ ಕರಾವಳಿಯ ನಿಜಾರ್ಥದ
ಸೊತ್ತು” ಎಂದಿದ್ದಾರೆ.
ಆಳ ಮನದಾಳಕ್ಕೆ ಬೆನ್ನುಡಿಯಾದ ಶತಮಾನ ಕಂಡ ಚಿಂತಕ
ಪ್ರಸಂಗಕರ್ತ ಪ್ರೊ, ಅಮೃತ ಸೋಮೇಶ್ವರರು ಕೃತಿಕಾರ ಕೇನಾಜೆಯವರ
ಬಗ್ಗೆ ಮತ್ತು ಜೋಶಿಯವರ ಬಗ್ಗೆ ಹೇಳಿರುವ ಪ್ರಶಂಸೆಯ ಮಾತುಗಳು
ಕೃತಿಯ ಶ್ರೇಷ್ಠತೆಯನ್ನು ಹೇಳುತ್ತದೆ. ಸಂದರ್ಶನದ ಮೂಲಕ ಜೋಶಿ
ಯವರನ್ನು ಮಾಳದಿಂದ ಮಹತ್ತ್ವದೆಡೆಗೆ ಸಾಗಿದ ಅವರ ಪಯಣದ
ನಡೆಯನ್ನು ಬಿಡೆಯಿಲ್ಲದೆ ದಾಖಲಿಸಿದ್ದಾರೆ. ಭಾಗ 1ರಲ್ಲಿ ಜೋಶಿ ಎಂಬ
ತ್ರಿಕಾಲ ಪಾತ್ರದಿಂದ ತೊಡಗಿ 'ಮಾನವ ಪ್ರೀತಿ', 'ಜೀವನ ಪ್ರೀತಿ', ಹಳ್ಳಿಯ
ಬ್ರಾಹ್ಮಣ ಪೇಟೆಯ ದಲಿತ', 'ಪರಿಶ್ರಮದೊಳಗಿನ ಪ್ರತಿಭೆ', 'ನಾನು
ಆರೋಗ್ಯದಲ್ಲಿ ಲಕ್ಕಿ', 'ಅಶಿಸ್ತಿನೊಳಗೊಂದು ಶಿಸ್ತು', `ನನಗೆ ನನ್ನ ಕೆಲಸ
ಮುಖ್ಯ', 'ಕುಟುಂಬದೊಳಗೂ ಒಂದು. ಈ ಪರಿಕಲ್ಪನೆಗಳ ಮೂಲಕ
ಬಾಲ್ಯ, ಬದುಕು, ಸಾಂಸಾರಿಕ ಜೀವನ, ಕುಟುಂಬ ಜೀವನ, ವ್ಯಕ್ತಿ ವ್ಯಕ್ತಗಳ
ಸಮಗ್ರ ಚಿತ್ರಣವಿದೆ. ಭಾಗ 2ರಲ್ಲಿ ಯಕ್ಷಗಾನದ ಶ್ರೇಷ್ಠತೆ, ಸಮಗ್ರತೆ,
ವಾಸ್ತವ, ಉತ್ಕರ್ಷ – ಅಪಕರ್ಷ, ಜಾನಪದ ಮತ್ತು ಶಾಸ್ತ್ರೀಯ ಮುಖ,