ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೭೯

ಮೀನಾಗಿ ಸಾಯುತಿರ್ದಪೆ-
ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ
ರ್ಕಾ ನಾಕದೊಳೆಂದೂಳ್ದಪ-
ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ೫೨


ಎನುತು೦ ಜಾತಿಸ್ಮರನ-
ಪ್ಪನಿಮೇಷಂ ಜೀವಿಂತಾಂತ್ಯದೊಳ್‌ ಮುನ್ನೊಗೆದಾ-
ಖನ ಬಸಿರೊಳ್‌ ಬಂದುದು ಪೋಂ-
ಘನ ರೂಪಿಂ ಬೆಳೆದು ಬಳಿಕ ಮದನೋನ್ಮತ್ತಂ೫೩


ಬೆದೆಯಾದ ತಾಯನೇರಿ-
ತ್ತದು ಸೊರ್ಕಿದ ಗೂಳಿ ತಾಯನೇರಿತ್ತೆಂಬಂ-
ದದೆ ಮತ್ತದೊಮದು ಬಸ್ತಕ-
ಮದನಿರಿಯಲ್ಲ ಸತ್ತು ಪೊಕ್ಕುದಜೆಯೊಳ್‌ ಜೀವಂ೫೪



೫೨. ನಾನಿಲ್ಲಿ ಮತ್ಸ್ಯ ಜನ್ಮವನ್ನು ಪಡೆದು ಸಾಯುತ್ತಾ ಇದ್ದೇನೆ ; ಈ ಬ್ರಾಹ್ಮಣರು
ಯಶೋಧರನು ಸ್ವರ್ಗದಲ್ಲಿ ಸುಖವಾಗಿರಲಿ!” ಎಂದು ಒದರುತ್ತಾ ಇದ್ದಾರೆ!
ಅವರ ಮಾತನ್ನು ಈ ಭೂಪತಿಯೂ ನಂಬಿಕೊಂಡಿದ್ದಾನೆ. ಅಯ್ಯೋ ವಿಧಿಯೇ!”
೫೩. ಪೂರ್ವಜನ್ಮದ ಸ್ಮರಣೆಯಿಂದ ಮೀನು ಈ ರೀತಿ ತನ್ನಲ್ಲೇ ಹೇಳಿಕೊಳ್ಳುತ್ತಾ
ಜೀವವನ್ನು ಕಳೆದು ಕೊಂಡಿತು. ಚಂದ್ರಮತಿ ಈ ಮೊದಲೇ ಆಡಾಗಿ ಜನಿಸಿದ್ದಳಷ್ಟೆ
ಈ ಮೀನು ಆ ಆಡಿನ ಗರ್ಭದಲ್ಲಿ ಹೋತವಾಗಿ ಹುಟ್ಟಿತು, ಬೆಳೆಯಿತು.
ಸಾಕಷ್ಟು ಪ್ರಾಯವಾದಾಗ ಈ ಹೋತವಾಗಿ ಹುಟ್ಟಿತು, ಬೆಳೆಯಿತು. ಸಾಕಷ್ಟು
ಪ್ರಾಯವಾದಾಗ ಈ ಹೋತವು ಕಾಮದಿಂದ ಸೊಕ್ಕಿತು. ೫೪. ತಾಯಿಗೂ
ಬೆದೆಯ ಕಾಲವಾಗಿತ್ತು. ಸೊಕ್ಕಿದ ಹೋತವು ಅದಕ್ಕೇ ಹತ್ತಿತು. “ಸೊಕ್ಕಿದ ಗೂಳಿ
ತಾಯನ್ನು ಹತ್ತಿತು” ಎಂಬಂತಾಯಿತು ನಡೆದ ಘಟನೆ! ಆಗ ಇನ್ನೊಂದು
ಹೋತವು ಬಂದು ಈ ಹೋತಕ್ಕೆ ಹಾದು ಇದರ ಜೀವವನ್ನೇ ತೆಗೆಯಿತು. ಸತ್ತ