ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ:
ಶ್ರೀಯೈನಮ:
ಯುಗಳಾಂಗುರೀಯ.
______________
ಮೊದಲನೆಯ ಪರಿಚ್ಛೇದ
________
ಒಂದಾನೊಂದು ಉಪವನಕ್ಕೆ ಸೇರಿದ ಉದ್ಯಾನದೊಂದು ವೃಕ್ಷವಾ
ಟಿಕೆಯಲ್ಲಿಬ್ಬರು ನಿಂತಿದ್ದರು. ನಾವು ಹೇಳುವ ಕಾಲದಲ್ಲಿ, ಪುರಾತನ
ತಾಮ್ರಲಿಪ್ತವೆ೦ಬ ನಗರವು ದೊಡ್ಡದೊಂದು ರೇವಾಗಿ ಅನೇಕ ಹಡಗು
ಗಳಿಗೆ ನಿಲ್ದಾಣವಾಗಿ ಆಶ್ರಯಸ್ಥಾನವಾಗಿದ್ದಿತು. ಆ ನಗರದ ತಳವನ್ನು
ತೊಳಿಯುತ ಅನಂತ ನೀಲಾಕಾಶದಂತಿದ್ದ ಸಮುದ್ರವು ಮೃದುಮೃದುವಾಗಿ
ಶಬ್ದವಂ ಮಾಡುತಿದ್ದಿತು.
ತಾಮ್ರಲಿಪ್ತ ನಗರದ ಮುಂಭಾಗ ಸಮುದ್ರದ ತೀರದಲ್ಲೊಂದು ವಿಚಿ
ತ್ರವಾದ ಮಹಡಿಯ ಮನೆ ; ಅದರ ಬಳಿ ಅತ್ಯಂತ ರಮಣೀಯವಾಗಿ ನಿರ್ಮಿತ
ವಾಗಿದ್ದೊಂದು ಲತಾಗೃಹ ; ಆ ಲತಾಗೃಹಕ್ಕೆ ಧನದಾಸನೆಂಬೊಬ್ಬ ಶೆಟ್ಟಿ
ಯು ಅಧಿಕಾರಿಯಾಗಿದ್ದನು-ಶೆಟ್ಟಿಯ ಮಗಳಾದ ಹಿರಣ್ಮಯಿಯು ಆ ಲತಾ
ಮಂಟಪದಲ್ಲಿ ನಿಂತು ಒಬ್ಬ ಯೌವನ ಪುರುಷನ ಸಂಗಡ ಮಾತಾಡು
ತಿದ್ದಳು,