ಬಗೆ ಹೇಗೆ? ಒಂದು ಚಿಕ್ಕಮನೆಯಲ್ಲೊಬ್ಬ ಪುರೋಹಿತನು ಸಂಪ್ರದಾ
ನದ ಸಾಮಗ್ರಿಗಳನ್ನಿಟ್ಟುಕೊಂಡು ಏಕಾಂಗಿಯಾಗಿ ಕುಳಿತಿದ್ದನು. ಧನ
ದಾಸನೊಬ್ಬನೇ ಬಾಗಿಲಹೊರಗೆ ವರಾಗಮನವನ್ನೆದುರು ನೋಡುತ್ತ ನಿಂತಿ
ದ್ದನು. ಒಳಗೆ ಅಂತಃಪುರದಲ್ಲಿ ಕನ್ಯೆಯು ಸಾಲಂಕೃತೆಯಾಗಿ ಕುಳಿತಿದ್ದಳು.
ಮತ್ತಾರೂ ಇರಲಿಲ್ಲ, ಹಿರಣ್ಮಯಿಯು ಮನಸ್ಸಿನಲ್ಲಿ, ಇದೇನು ರಹಸ್ಯ ;
ಹೇಗಾದರೂ, ಪುರಂದರನಿಗೇನೋ ಕೊಟ್ಟು ಮದುವೆಯಾಗುವುದಿಲ್ಲ; ಆವನಿ
ಗಾದರೂ ಮದುವೆಯಾಗಲಿ ; ಅನ್ಯನಾವನೇ ಆಗಲಿ, ಅವನೆನಗೆ ಎನೆಯ
ನಾಗುವುದಿಲ್ಲ ; ನಾನವನಿಗೆ ಎನೆಯಳಾಗೆನು ; ಅದು ಖಂಡಿತವೆಂದಂದು
ಕೊಂಡಳು.
ಆ ಸಮಯದಲ್ಲಿ ಧನದಾಸನು ಮದುವೆಯ ಹೆಣ್ಣನ್ನು ಕರೆಯಲು
ಬಂದನು. ಅವಳನ್ನು ವಿವಾಹಮಂಟಪಕ್ಕೆ ಕರೆದುಕೊಂಡು ಹೋಗುವು
ದಕ್ಕೆ ಮುಂಚಿತವಾಗಿ ತಂದೆಯು ಅವಳೆರಡು ಕಣ್ಣುಗಳನ್ನು ಬಟ್ಟೆಯಿಂದ
ಭದ್ರವಾಗಿ ಕಟ್ಟಿದನು. ಹಿರಣ್ಮಯಿಯು, “ ಅಪ್ಪಾ ! ಇದೇನು ? " ಎಂದು
ಕೇಳಿದಳು, ಧನದಾಸನು, "ಗುರುಗಳ ಅಪ್ಪಣೆ ” ಎಂದು ಹೇಳಿದನಲ್ಲದೆ,
“ ನೀನು ನನ್ನಪ್ಪಣೆಯಪ್ರಕಾರ ನಡೆಯಬೇಕು, ಮಂತ್ರಗಳನ್ನೆಲ್ಲ ಮನಸ್ಸಿ
ನಲ್ಲಿ ಹೇಳಿಕೊಳ್ಳಬೇಕು ” ಎಂತಲೂ ಹೇಳಿದನು. ಹಿರಣ್ಮಯಿಯು ಕೇಳಿ
ಅದಕ್ಕೆ ಉತ್ತರವನ್ನು ಕೊಡಲಿಲ್ಲ. ಧನದಾಸನು ದೃಷ್ಟಿಹೀನೆಯಾದಾ ಕನ್ಯೆ
ಯನ್ನು ಕೈಹಿಡಿದುಕೊಂಡು ಸಂಪ್ರದಾನಮಂಟಪಕ್ಕೆ ಕರೆದುಕೊಂಡು
ಹೋದನು.
ಹಿರಣ್ಮಯಿಯು ಸಂಪ್ರದಾನಮಂಟಪಕ್ಕೆ ಕರೆತರಲ್ಪಟ್ಟವಳು ಕಣ್ಣು
ಬಿಟ್ಟು ನೋಡಬಹುದಾಗಿದ್ದರೆ ಪಾತ್ರನೂ ಅವಳಂತೆ ಆವೃತನಯನನಾಗಿದ್ದ
ನೆಂದು ತಿಳಿಯುತ್ತಿದ್ದಳು, ಈ ಪ್ರಕಾರ ವಿವಾಹವಾಯಿತು. ಆ ಸ್ಥಳದಲ್ಲಿ
ಗುರು, ಪುರೋಹಿತ, ಹೆಣ್ಣಿನ ತಂದೆ ಇವರ ಹೊರ್ತು ಮತ್ತಾರೂ ಇರ
ಲಿಲ್ಲ. ವಧೂವರರಿಬ್ಬರೂ ಆರನ್ನೂ ನೋಡಲಿಲ್ಲ. ಪರಸ್ಪರ ಶಾಸ್ತ್ರೋ
ಕ್ತವಾಗಿ ಶುಭದೃಷ್ಟಿಯಾಗಲಿಲ್ಲ.
ಸಂಪ್ರದಾನಾನಂತರದಲ್ಲಿ ಆನಂದಸ್ವಾಮಿಯು ವಧೂವರರನ್ನು ಕು
ರಿತು, “ ನಿಮ್ಮಿಬ್ಬರಿಗೂ ವಿವಾಹವಾಯಿತು, ನೀವಿಬ್ಬರೂ ಪರಸ್ಪರ ನೋಡ