೧೧
ಅವಳಿಗೆ ಮದುವೆಯಾದ ಗಂಡನು ಅಲ್ಲಿರಲಿಲ್ಲ. ವಿವಾಹದಾ ರಾತ್ರಿ ಅವಳೊ
ಬ್ಬಳೇ ಕಾಲಯಾಪನೆಯನ್ನು ಮಾಡಿದಳು.
ನಾಲ್ಕನೆಯ ಪರಿಚ್ಛೇದ
ವಿವಾಹವಾದ ಬಳಿಕ ಧನದಾಸನು ಹೆಂಡತಿಯನ್ನೂ ಮಗಳನ್ನೂ
ಕರೆದುಕೊಂಡು ಸ್ವದೇಶಕ್ಕೆ ಬಂದನು. ನಾಲ್ಕು ವರ್ಷಗಳು ಕಳೆದುಹೋ
ದುವು. ಪುರಂದರನು ಹಿಂದಿರುಗಿ ಬರಲಿಲ್ಲ. ಹಿರಣ್ಮಯಿಗೆ ಅವನು ಹಿಂದಿ
ರುಗಿ ಬಂದರೇನು, ಬಾರದಿದ್ದರೇನು ? ಎರಡೂ ಸಮ.
ಪುರಂದರನು ಏಳು ವರ್ಷಗಳಾದರೂ ಬರಲಿಲ್ಲವೆಂದು ಹಿರಣ್ಯ
ಯಿಯು ಸ್ವಲ್ಪ ದುಃಖಿತೆಯಾದಳು. ಅವಳು ಮನಸ್ಸಿನಲ್ಲಿ, "ನನ್ನನ್ನು
ಇನ್ನೂ ಜ್ಞಾಪಕ ದಲ್ಲಿಟ್ಟುಕೊಂಡಿರುವುದರಿಂದ ಬರಲಿಲ್ಲವೆಂದು ಹೇಳೆ
ವುದು ಅಸಂಭವವಾಗುವುದು. ಅವನು ಜೀವದಿಂದಿರುವನೋ ಇಲ್ಲವೋ ಅದು
ಸಂಶಯವಾಗಿದೆ, ನಾನವನನ್ನು ನೋಡಬೇಕೆಂದು ಇಷ್ಟಪಡುವುದಿಲ್ಲ. ನಾನೀಗ
ಬೇರೊಬ್ಬನ ಹೆಂಡತಿಯಾಗಿದ್ದೇನೆ, ಆದರೆ ನನ್ನ ಬಾಲ್ಯಕಾಲದ ಸ್ನೇಹಿ
ತನು ಬದುಕಿರಲೆಂದು ನಾನೇಕೆ ಹರಸಕೂಡದು?" ಎಂದು ಯೋಚಿಸಿದಳು.
ಧನದಾಸನು ಕಾರಣಾಂತರಗಳಿಂದ ಚಿಂತಾಕ್ರಾಂತನಾಗುತ ಬಂದನು.
ದಿನಕ್ರಮೇಣ ಚಿಂತೆಯು ಹೆಚ್ಚಾಗುತ್ತ ಬಂದು ಕಡೆಗೆ ದಾರುಣವಾದ ರೋ
ಗದಲ್ಲಿ ಬಿದ್ದನು. ಸ್ವಲ್ಪಕಾಲದಲ್ಲಿಯೇ ಅವನಿಗೆ ಮೃತ್ಯುವೂ ಸಂಭವಿ
ನಿತು; ಧನದಾಸನ ಹೆಂಡತಿಯೂ ಗಂಡನ ಚಿತಿಯಲ್ಲಿ ಅನುಮೃತೆಯಾ
ದಳು. ಹಿರಣ್ಮಯಿಗೆ ಮತ್ತಾರೂ ಇರಲಿಲ್ಲ. ಅವಳು ಬಹುವಿಧವಾಗಿ
ತಾಯಿಯ ಕಾಲುಗಳನ್ನು ಹಿಡಿದುಕೊಂಡು ಅಳುತ್ತ ಈಗಲೇ ಸಾಯ್ಬೇ
ಡೆಂದು ಬೇಡಿಕೊಂಡಳು ; ಆದರೆ ಶ್ರೇಷ್ಠಿಯ ಪತ್ನಿಯು ಕೇಳಲಿಲ್ಲ. ಹಿರ
ಣ‍್ಮಯಿಯು ಪೃಥ್ವಿಯಲ್ಲಿ ಏಕಾಂಗಿಯಾಗಿ ಉಳಿದುಕೊಂಡಳು.
>ಸಹವರಣದ ಕಾಲದಲ್ಲಿ ಹಿರಣ್ಮಯಿಯ ತಾಯಿಯು ಮಗಳನ್ನು
ಕುರಿತು, “ಮಗು ! ನೀನೇಕೆ ಯೋಚಿಸುತ್ತಿ ? ನಿನಗೇನೋ ಒಬ್ಬ ಗಂಡ