ಡಳಾ' ಎ ಹೇಳಿ, ' ೦ತರ ಹಿರಣ್ಮಯಿಯನ್ನು ಕುರಿತು, “ಹಿರ
ಣ್ಮಯಿ ! ನಿನ್ನಾ ಕಾಲದ ಮನೋಭಾವಗಳನ್ನೆಲ್ಲ ಚೆನ್ನಾಗಿ ತಿಳಿದುಕೊಂ
ಡೆನು ; ನೀನು ಅನ್ಯಪತಿಯ ಸಂಸರ್ಗಮಾಡತಕ್ಕುದಲ್ಲವೆಂದೂ ನಾನು
ಅಸತಿಯೆಂದೂ ಹೇಳಿಕೊಂಡೆ. ನೀವಿಬ್ಬರೂ ಸುಖವಾಗಿರಬೇಕೆಂದು
ನಾನು ಆಶೀರ್ವಾದ ಮಾಡುತ್ತೇನೆ” ಎಂದನು.
ಹಿರಣ್ಮಯಿ-ಮಹಾರಾಜನೆ! ನನಗೆ ಮತ್ತೊಂದು ಸಂಗತಿಯನ್ನು
ತಿಳಿಯಹೇಳಬೇಕು. ಇವರು ಸಿಂಹಳ ದ್ವೀಪದಲ್ಲಿದ್ದರು. ಕಾಶಿಯಲ್ಲಿ
ನನಗೂ ಅವರಿಗೂ ಪರಿಣಯವಾದುದು ಹೇಗೆ ? ಅವರು ಸಿಂಹಳದಿಂದ
ಕಾಶೀಗೆ ಬಂದಿರ್ದರೆ ನಮಗೇಕೆ ಗೊತ್ತಾಗಲಿಲ್ಲ?
ರಾಜ-ಆನಂದಸ್ವಾಮಿಯೂ ಪುರಂದರನ ತಂದೆಯೂ ಆಲೋಚಿಸಿ
ಕೊಂಡು ಜನರು ಹೋಗಿ ಅವನನ್ನು ಸಿಂಹಳ ದಿಂದ ಕಾಶೀಗೆ ಕರೆದು
ಕೊಂಡು ಹೋಗಿದ್ದರು. ಪುನಃ ಸಿಂಹಳಕ್ಕೆ ಹೊರಟುಹೋದನು. ತಾಮ್ರ
ಲಿಪ್ತಕ್ಕೆ ಬರಲಿಲ್ಲವಾದುದರಿಂದ ನಿಮಗಾರಿಗೂ ತಿಳಿಯಲಿಲ್ಲ.
ಪುರಂದರ-ಮಹಾರಾಜನೆ! ತಾವು ಹೇಗೆ ನಮ್ಮ ಚಿರಕಾಲದ
ಮನೋರಥವನ್ನು ಪೂರ್ಣಮಾಡೋಣವಾಯಿತೋ, ಹಾಗೆ ಜಗದೀಶ್ವರನು
ತಮ್ಮ ಸಕಲ ಮನೋರಥಗಳನ್ನೂ ಪೂರ್ಣಮಾಡಲಿ. ಇಂದು ನಾವು ಹೇಗೆ
ಸುಖಿಗಳಾದೆವೋ ಅಂತಹ ಸುಖಶಾಲಿಗಳು ತಮ್ಮ ರಾಜ್ಯದಲ್ಲಿ ಹಿಂದಾವಾ
ಗಲೂ ವಾಸವಾಗಿರಲಿಲ್ಲ.
_______________________________________________________________________