ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ರಂಗಣ್ಣನ ಕನಸಿನ ದಿನಗಳು

ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರುಗಳು ; ಅವುಗಳಲ್ಲಿ ಊರ ಹೊರಗಿನ ಬಂಗಲೆ ; ಮಧ್ಯೆ ಮಧ್ಯೆ ಔತಣಗಳು, ಹೂವಿನಹಾರಗಳು, ಸ್ತೋತ್ರಪಾಠಗಳು.

ರಂಗಣ್ಣ ಅಲ್ಲಿಂದ ಮುಂದಕ್ಕೆ ಎರಡು ಮೈಲಿ ದೂರ ಹೋದಮೇಲೆ ಮತ್ತೊಂದು ಹಳ್ಳಿ ಸಿಕ್ಕಿತು. ಹಳ್ಳಿಗೆ ಎರಡು ಫರ್ಲಾಂಗು ದೂರದಲ್ಲಿ ಪಾಠಶಾಲೆಯ ಕಟ್ಟಡ ಏತ್ತು ಕಲ್ಲಲ್ಲಿ ಕೆಲವು ಗುಡಿಸಿಲುಗಳು ಇದ್ದುವು. ಪಾಠ ಶಾಲೆ ತೆರೆದಿತ್ತು. ಒಳಗೆ ಮೇಷ್ಟು ಮತ್ತು ನಾಲ್ಕು ಹುಡುಗರು ಇದ್ದರು. ಹೆಚ್ಚು ಹುಡುಗರು ಏಕೆ ಬರುತ್ತಿಲ್ಲ !' ಎಂದು ರಂಗಣ್ಣ ವಿಚಾರಿಸಿದನು.

'ಭಯ, ಸ್ವಾಮಿ ! ಹಳ್ಳಿಯವರು ಕಳಿಸುವುದಿಲ್ಲ. ನಾನು ಬಹಳ ಧೈರ್ಯ ಹೇಳಿ ಈ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಬಂದಿದ್ದೇನೆ.'

'ನಿಮ್ಮ ಕೈ ತೋಟ ಇತ್ತಲ್ಲ. ಅದೆಲ್ಲಿ ? ಏನೂ ಕಾಣುವುದಿಲ್ಲವಲ್ಲ,

ಅದರಗಳ ಬೊಂಬು- ಎಲ್ಲವನ್ನೂ ಹಳ್ಳಿಯವರು ಗುಡಿಸಿಲು ಹಾಕಿಕೊಳ್ಳುವುದಕ್ಕೆ ಕಿತ್ತುಕೊಂಡು ಹೋಗಿಬಿಟ್ಟರು ಸ್ವಾಮಿ ! ಹಿಂದೆ ಅವರೇ ತೋಟಕ್ಕೆ ಬೇಲಿ ಕಟ್ಟಿಸಿ ಕೊಟ್ಟಿದ್ದರು. ಮತ್ತೆ ಕಟ್ಟಿಸಿ ಕೊಡ್ತವೆ, ಎಲ್ಲಿ ಹೋಗ್ತೈತೆ - ಅ೦ತ ಹೇಳಿ ಎತ್ತಿ ಕೊಂಡು ಹೋಗಿ ಬಿಟ್ಟರು. ಬೇಲಿ ಹೋದಮೇಲೆ ದನಕರುಗಳು ಬಂದು ಇದ್ದ ಗಿಡಗಳನ್ನೆಲ್ಲ ತಿಂದುಹಾಕಿ ಬಿಟ್ಟುವು. ತೋಟ ಹೋಗಿ ಬಿಡ್ತು ಸ್ವಾಮಿ.'

'ನೀವೆಲ್ಲಿ ವಾಸಮಾಡುತ್ತಾ ಇದ್ದೀರಿ ಮೇಷ್ಟೇ ?”

'ಇಲ್ಲೇ ಸ್ವಾಮಿ ? ನನಗೂ ಒಂದು ಗುಡಿಸಿಲನ್ನು ಅವರೇ ಹಾಕಿ ಕೊಟ್ಟಿದ್ದಾರೆ.'

'ಇನಾಕ್ಯುಲೇಷನ್ ಮಾಡಿಸಿಕೊಂಡಿದ್ದೀರಾ ಮೇಷ್ಟೆ?”

'ಇಲ್ಲಾ ಸ್ವಾಮಿ ! ಇನಾಕ್ಯುಲೇಷನ್ ಮಾಡಿಸಿಕೊಂಡರೆ ಹಳ್ಳಿಯಲ್ಲಿ ಸೇರಿಸೋದಿಲ್ಲ.'

“ನೀವು ಓದಿದವರಾಗಿ ತಿಳಿವಳಿಕಸ್ಥರಾಗಿ ಹಳ್ಳಿಯವರಂತೆ ನಡೆಯುತ್ತಿದ್ದೀರಲ್ಲ ಮೇಷ್ಟೆ ! ?