ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ರಂಗಣ್ಣನ ಕನಸಿನ ದಿನಗಳು

ಅಪಾಯಕರ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಎಚ್ಚರಿಕೆಯಿಂದ ನಡೆದುಕೊ.

ರಂಗಣ್ಣನಿಗೆ ತಿಮ್ಮರಾಯಪ್ಪನ ಕಾಗದದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಆಷ್ಟೇನೂ ಸಂತೋಷವಾಗಲಿಲ್ಲ. ತಾನಾಗಿ ಯಾರೊಡನೆಯೂ ವಿರೋಧ ಕಟ್ಟಿ ಕೊಳ್ಳ ಬೇಕೆಂದಾಗಲಿ ಜಗಳ ಕಾಯಬೇಕೆಂದಾಗಲಿ ಹಾತೊರೆಯುತ್ತಿಲ್ಲ. ಆದರೆ ಅವು ಅಪ್ರಾರ್ಥಿತವಾಗಿ ಬಂದು ಗಂಟು ಬೀಳುತ್ತವೆ. ಏನು ಮಾಡಬೇಕು ? ಎಂದು ಆಲೋಚಿಸುತಿದ್ದನು. ಆಗ ಜನಾರ್ದನ ಪುರದ ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪನವರು ಬಂದಿದಾರೆಂದು ಆಳು ಬ೦ದು ತಿಳಿಸಿದನು, ಅವರನ್ನು ಬರಮಾಡಿ ಕೊಂಡದ್ದಾಯಿತು ಚನ್ನಪ್ಪ ತನ್ನ ಜೇಬಿನಿಂದ ಒಂದು ಕಾಗದವನ್ನು ತೆಗೆದು ರಂಗಣ್ಣನ ಕೈಗೆ ಕೊಡು ತ್ತಾ, 'ಕರಿಯಪ್ಪನವರು ಕಾಗದವನ್ನು ಕೊಟ್ಟಿದ್ದಾರೆ, ಅವರೇ ತಮ್ಮನ್ನು ಕಂಡು ಮಾತನಾಡ ಬೇಕೆಂದಿದ್ದರು. ಎಂದು ಹೇಳಿದನು ಸ್ಕಾಲರ್ ಷಿಪ್ ವಿಚಾರ ಒಕ್ಕಣೆಯಿರಬಹುದೆಂದು ರಂಗಣ್ಣ ಆಲೋಚಿಸುತ್ತ ಕಾಗದವನ್ನು ಒಡೆದು ನೋಡಿದನು. ಆದರೆ ಆ ಪ್ರಸ್ತಾಪ ಆದರಲ್ಲಿರಲಿಲ್ಲ. ' ಚೆನ್ನಪ್ಪನವರು ಒಂದು ಕೋರಿಕೆಯನ್ನು ಸಲ್ಲಿಸಲು ಬರುತ್ತಾರೆ. ಅದನ್ನು ದಯವಿಟ್ಟು ನೆರವೇರಿಸಿಕೊಡಿ. ನನಗೂ ಸಂತೋಷವಾಗುತ್ತದೆ' – ಎಂದು ಬರೆದಿತ್ತು.

'ಏನು ಸಮಾಚಾರ ? ಕರಿಯಪ್ಪನವರ ಶಿಫಾರಸು ನಿಮಗೆ ಬೇಕಾಗಿತ್ತೆ ? ನಾನು ನಿಮ್ಮ ಊರಿನವನೇ ಆಗಿದ್ದೇನಲ್ಲ ? ' ಎಂದು ರಂಗಣ್ಣ ಉಪಚಾರೋಕ್ತಿಯ ಮಾತನ್ನಾಡಿದನು.

'ಶಿಫಾರಸು ತರಬೇಕೆಂದು ನಾನು ಪ್ರಯತ್ನ ಪಡಲಿಲ್ಲ ಸಾರ್. ಮೊನ್ನೆ ಕರಿಯಪ್ಪನವರನ್ನು ಕಂಡಿದ್ದೆ. ಹೀಗೆಯೇ ಸ್ಕೂಲುಗಳ ವಿಚಾರ ಮಾತುಕತೆ ಆಡುತ್ತಿದ್ದೆವು ನಿಮ್ಮ ಮಾತು ಸಹ ಬಂತು. ಹಿಂದಿನವರು ಕೆಲವು ಅನ್ಯಾಯಗಳನ್ನು ಮಾಡಿ ಮೇಷ್ಟರುಗಳಿಗೆಲ್ಲ ತೊಂದರೆ ಕೊಟ್ಟರು. ಕೆಲವರನ್ನು ಎಲ್ಲೆಲ್ಲಿಗೋ ವರ್ಗ ಮಾಡಿಸಿಬಿಟ್ಟರು. ಈಗ ಆ ಅನ್ಯಾಯ ಗಳಲ್ಲಿ ಒಂದೆರಡನ್ನಾದರೂ ಸರಿ ಪಡಿಸಬೇಕೆಂದು ನಾನು ಕರಿಯಪ್ಪನವರಲ್ಲಿ