ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೫೯

ಭಯದಿಂದ ದೂರದಲ್ಲೇ ನಿಂತಿದ್ದಳು. ರಂಗಣ್ಣನು ಎದ್ದು ಆ ಪುಸ್ತಕವನ್ನು ತೆಗೆದು ಕೊಂಡು ಆಕೆಯ ಕೈಯಲ್ಲಿ ಕೊಟ್ಟನು. ಆಕೆ ಪುಸ್ತಕದಿಂದ ಒ೦ದು ವಾಕ್ಯ ವೃಂದವನ್ನು ತಾನು ಓದಿ, ಆಮೇಲೆ ಮಕ್ಕಳಿಂದ ಓದಿಸಿದಳು. ಮಕ್ಕಳು ಸುಮಾರಾಗಿ ಓದಿದರು. ಆಗ ಮಧ್ಯದಲ್ಲಿ ಕೆಲವು ಕಠಿನ ಪದಗಳು ಇದ್ದುವು. ಆಕೆ ಅವುಗಳ ಅರ್ಥವನ್ನು ಕೇಳಿದಳು. 'ಶತ್ರು ಎಂದರೇನು ?' ಎಂದು ಕೇಳಿದಾಗ ಉತ್ತರ ಸರಿಯಾಗಿ ಬರಲಿಲ್ಲ. ಆಗ ಆಕೆ ಸೀಮೆಸುಣ್ಣದಿಂದ ಬೋರ್ಡಿನ ಮೇಲೆ, ಶತೃ= ವೈರಿ ; ಎಂದು ಬರೆದು ಅರ್ಧ ವಿವರಣೆ ಮಾಡಿದಳು. ಸಾಹೇಬರು ಆ ಪಾಠ ಕ್ರಮವನ್ನು ಗಮನವಿಟ್ಟು ನೋಡುತ್ತಿದ್ದವರು ಕೋಪದಿಂದ ಕೆಂಡ ಕ೦ಡವಾಗಿ ರಂಗಣ್ಣನ ಮುಖವನ್ನು ನೋಡಿದರು ! ರಂಗಣ್ಣನು ಆಕೆಗೆ, ಭಯಪಟ್ಟು ಕೊಳ್ಳಬೇಡಿ ಸೀತಮ್ಮ ! ಪುಸ್ತಕ ನೋಡಿಕೊಂಡು ಸರಿಯಾಗಿ ಬರೆಯಿರಿ' ಎಂದು ಸಲಹೆ ಕೊಟ್ಟ ನು ಆ ಇಬ್ಬರು ಸಾಹೇಬರುಗಳ ಎದುರಿನಲ್ಲಿ ಆ ಹೆಣ್ಣು ಹೆಂಗಸಿನ ಇದ್ದ ಬದ್ದ ಧೈರ್ಯವೆಲ್ಲ ಕುಸಿದು ಬಿತ್ತು ! ಆಕೆ ಪುಸ್ತಕವನ್ನೂ ನೋಡಲಿಲ್ಲ ; ಮುಂದೆ ಪಾಠವನ್ನೂ ಮಾಡಲಿಲ್ಲ. ತನ್ನದು ಏನು ತಪ್ಪು ? ಎನ್ನುವುದು, ಆಕೆಗೆ ತಿಳಿಯಲಿಲ್ಲ. ಸಾಹೇಬರು ಕುರ್ಚಿಯಿಂದೆದ್ದು ಹೊರಕ್ಕೆ ಒ೦ದು ಬಿಟ್ಟರು ' ರಂಗಣ್ಣನು ಬೋರ್ಡಿನ ಹತ್ತಿರ ಹೋಗಿ “ ಶತ್ರು' ಎಂದು ಸರಿಯಾಗಿ ಬರೆದು, ಮಕ್ಕಳನ್ನು ಮನೆಗೆ ಬಿಟ್ಟು ಬಿಡಿ, ಹೊತ್ತಾಗಿ ಹೋಯಿತು ' ಎಂದು ಹೇಳಿ ಹೊರಟು ಬಂದನು.

ಮೋಟಾರನ್ನು ಹತ್ತಿ ಕುಳಿತಮೇಲೂ ಸಾಹೇಬರ ಉಗ್ರಕೋಪ ಇಳಿದಿರಲಿಲ್ಲ. ರಂಗಣ್ಣನೇ ಮಾತಿಗಾರ೦ಭಿಸಿ, ' ಏನೋ ಒಂದು ಸಣ್ಣ ತಪ್ಪು ಸಾರ್ ! ತಾವು ಆಷ್ಟೆಲ್ಲ ಕೋಪ ಮಾಡಿಕೊಂಡಿದ್ದೀರಿ ! ದೊಡ್ಡ ದೊಡ್ಡ ಪಂಡಿತರುಗಳೇ ಋಕಾರ ಎಲ್ಲಿ ಬರೆಯಬೇಕೋ' ರ್ ಎಲ್ಲಿ ಬರೆಯಬೇಕೋ ತಿಳಿಯದೆ ತಪ್ಪು ಮಾಡುತ್ತಾರೆ! ಆಕೆ ಹೆಂಗಸು, ವಿಧವೆ ; ಯಾವ ಕಾಲದಲ್ಲಿ ಓದಿದವಳೋ ಏನೋ ' ಎಂದು ಸಮಾಧಾನ ಹೇಳಿದನು.

'ಅವಳು ಪುಸ್ತಕವನ್ನೆ ನೋಡಲಿಲ್ಲ ! ಆ ಪುಸ್ತಕದಲ್ಲಿಯೇ ಆ ಮಾತು ಇದೆ, ಸರಿಯಾಗಿರುವ ಮಾತನ್ನು ತಪ್ಪು ತಪ್ಪಾಗಿ ಹೇಳಿಕೊಡು