ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೮

ಅಪಪ್ರಚಾರ

ಆ ದಿನವೇ ರಂಗಣ್ಣ ತಿಪ್ಪೇನಹಳ್ಳಿಯ ಮೇಷ್ಟರ ಮತ್ತು ಸೀತಮ್ಮನ ಅರ್ಜಿಗಳನ್ನು ತಕ್ಕ ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ ಹಾಕಿರುವ ಜುಲ್ಮಾನೆಗಳಿಂದ ತನ್ನ ಮನಸ್ಸು ಬಹಳವಾಗಿ ನೊಂದಿರುವುದೆಂದೂ, ದಯವಿಟ್ಟು ಅವುಗಳನ್ನು ವಜಾ ಮಾಡಬೇಕೆಂದೂ ಕೇಳಿಕೊಂಡಿದ್ದನು. ಯಾವ ದಿನ ಆ ಕಾಗದಗಳು ಸಾಹೇಬರ ಕಚೇರಿಗೆ ಹೋದುವೋ ಆ ದಿನವೇ ಸಾಹೇಬರು ಹೊಸಬರಿಗೆ ಅಧಿಕಾರ ವಹಿಸಿಕೊಡುವ ದಿನವಾಗಿತ್ತು. ಆ ದಿನ ಕಚೇರಿಯಲ್ಲಿ ಎಂದೂ ಇಲ್ಲದಿದ್ದ ತರಾತುರಿಗಳು ; ಹೊಸಬರಿಗೆ ಬಿಡದೆ ತಾವೇ ಆರ್ಡರುಗಳನ್ನು ಮಾಡುವ ಮತ್ತು ಆರ್ಡರ್ ಆದ ಕಾಗದಗಳನ್ನು ಬೇಗ ಬೇಗ ರುಜು ಮಾಡುವ ಸಂಭ್ರಮ ; ಅಹವಾಲುಗಳನ್ನು ಹೇಳಿಕೊಳ್ಳುವ ಮೇಷ್ಟರುಗಳ ಮತ್ತು ಗುಮಾಸ್ತೆಯರ ಪರದಾಟ ; ಹಳಬರನ್ನು ಬೀಳ್ಕೊಡುವುದು, ಹೊಸಬರನ್ನು ಸ್ವಾಗತಿಸುವುದು - ಇವಕ್ಕೆ ಬೇಕಾದ ಒಂದು ಸಮಾರಂಭದ ಏರ್ಪಾಟು. ಈ ಗಲಭೆಗಳಲ್ಲಿ ಸಾಮಾನ್ಯ ಕಾಗದಗಳು ಅಸಿಸ್ಟೆಂಟರ ಮೇಜಿನ ಮೇಲೆಯೇ ಕೊಳೆಯುತ್ತಿರುವುದು ವಾಡಿಕೆ. ರಂಗಣ್ಣ ಕಳಿಸಿದ ಶಿಫಾರಸಿನ ಕಾಗದಗಳೂ ಹೀಗೆಯೇ ಕೊಳೆಯ ಬೇಕಾಗಿದ್ದು ವು. ಆದರೆ ರಂಗಣ್ಣ ಸಾಹೇಬರಿಗೆ ಬರೆದಿದ್ದ ಖಾಸಗಿ ಕಾಗದ ಆವರ ಕೈಗೆ ನೇರವಾಗಿ ಹೋಯಿತು. ಅವರು ಅದನ್ನು ಓದಿಕೊಂಡು ಕೂಡಲೇ ಆ ಶಿಫಾರಸು ಕಾಗದಗಳನ್ನು ತರುವಂತೆ ಅಸಿಸ್ಟೆಂಟರಿಗೆ ಹೇಳಿದರು. ಅಸಿಸ್ಟೆಂಟರು ಕಷ್ಟಪಟ್ಟು ಹುಡುಕಿ ತೆಗೆದುಕೊಂಡು ಹೋಗಿ ಸಾಹೇಬರ ಕೈಗೆ ಕೊಟ್ಟರು. ಆಗ ಸಾಹೇಬರು, ಹಾಕಿದ ಜುಲ್ಮಾನೆಯನ್ನು ನಾನು ವಜಾ ಮಾಡಿದ್ದು ಇದುವರೆಗೂ ಇಲ್ಲ. ಆದರೆ ರಂಗಣ್ಣನವರು ಶಿಫಾರಸು