ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ರಂಗಣ್ಣನ ಕನಸಿನ ದಿನಗಳು

'ಅವರೂ ಹಾಗೇ ವಿಚಾರಿಸಿಕೊಳ್ಳುತ್ತಾರೆ ಅನ್ನಿ ! ಚಾಡಿಕೋರರು ಹೇಳಿದ್ದನ್ನೇ ನಂಬಿ ಕೆಲಸ ಮಾಡುತ್ತಾರೆಯೆ ? ಅಂತೂ ತಮಗೆ ವಿಚಾರ ತಿಳಿಸೋಣ ಎಂದು ಬಂದೆ. ತಾವು ಸಂಘದ ಸಭೆಗಳನ್ನು ಹಳ್ಳಿಗಳಲ್ಲಿ ಸೇರಿಸುತ್ತಿದ್ದೀರಷ್ಟೆ. ಗ್ರಾಮಸ್ಥರಿಂದ ದವಸ ಧಾನ್ಯ ವಸೂಲ್ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತೀರಂತೆ! ಊಟದ ಖರ್ಚು ಏಳುವ ಬಗ್ಗೆ ಉಪಾಧ್ಯಾಯರಿಂದ ಮಾಟಿಂಗೊ೦ದಕ್ಕೆ ಎಂಟಾಣೆ ವಸೂಲ್ಮಾಡುತ್ತೀರಂತೆ ! ನಿಮ್ಮಿಂದ ಹಳ್ಳಿಯವರಿಗೂ ಮೇಷ್ಟುಗಳಿಗೂ ಬಹಳ ಹಿಂಸೆಯಂತೆ ! ಚಿರೋಟಿ ಲಾಡುಗಳ ಸಮಾರಾಧನೆ ಮಾಡಿಸಿಕೊಂಡು ಹಳ್ಳಿಗಳನ್ನು ಕೊಳ್ಳೆ ಹೊಡೆಯುತ್ತಿದ್ದೀರಂತೆ !- ಇವೆಲ್ಲ ನಿಮ್ಮ ಮೇಲೆ ಪುಕಾರು ?

ವಿಚಾರವೆಲ್ಲ ನಿಮಗೆ ತಿಳಿದಿದೆ ಗೌಡರೇ ! ನಾನು ಪುನಃ ಏಕೆ ಹೇಳಲಿ ? ನಿಮ್ಮ ಆಹ್ವಾನದ ಮೇಲೆ ಆವಲಹಳ್ಳಿಯಲ್ಲಿ ಸಭೆ ಅಲ್ಲಿ ಏನಾಯಿತು ಎಂಬುದು ನಿಮಗೆ ತಿಳಿದಿದೆ. ಹಳ್ಳಿಗಳಲ್ಲಿ ಸಭೆ ಸೇರಬೇಕಾದರೆ ಗ್ರಾಮ ಪಂಚಾಯತಿಗಳು ರೆಜಲ್ಯೂಷನ್ ಮಾಡಿ ಆಹ್ವಾನ ಕೊಡುತ್ತಾರೆ. ಪಂಚಾಯತಿ ಸದಸ್ಯರೇ ಬಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮಂಥ ಉದಾರಿಗಳಾದ ರೈತರು ತಾವೇ ಖರ್ಚನ್ನೆಲ್ಲ ವಹಿಸಿಕೊಂಡು : ಒಪ್ರೊತ್ತು ಊಟವನ್ನು ಬಡ ಮೇಷ್ಟರುಗಳಿಗೆ ಹಾಕುತ್ತಾರೆ. ಅಲ್ಲಿ ಏನು ಸಮಾರಾಧನೆ ನಡೆಯುತ್ತೆ ? ಯಾರೋ ಗ್ರಾಮಸ್ಥರು ಕೆಲವರು ಉತ್ಸಾಹದಿಂದ ಒಂದಿಷ್ಟು ಚಿತ್ರಾನ್ನ, ಎರಡು ಆಂಬೊಡೆ ಮಾಡಿಸಿ ಹಾಕುತ್ತಾರೆ. ಅವುಗಳಿಲ್ಲದೆ ಸಾಮಾನ್ಯ ಅಡಿಗೆಯೂ ಎಷ್ಟೋ ದಿನಗಳಲ್ಲಿ ನಡೆದಿಲ್ಲವೆ ? ಗ್ರಾಮಸ್ಥರು ಕರೆಯದೇ ನಾವು ಅಲ್ಲಿ ಸಭೆ ಸೇರಿಸುವುದಿಲ್ಲ. ನನ್ನ ಮೇಲೆ ಪುಕಾರು ಬರುವುದಕ್ಕೆ, ಅರ್ಜಿ ಹೋಗುವುದಕ್ಕೆ ಕಾರಣವಿಲ್ಲ !'

ಅರ್ಜಿಗಳು ಹೊಗಿವೆ ಸ್ವಾಮಿ ! ಯಾರು ಬರೆದು ಕಳಿಸಿದ್ದೂ ಏನೋ ಹೋಗಿವೆ, ಅಷ್ಟು ನನಗೆ ಗೊತ್ತಿದೆ. ನಾನು ದಿವಾನರಿಗೆ ಸತ್ಯಾಂಶಗಳನ್ನು ತಿಳಿಸಿದೆ. ಆವಲಹಳ್ಳಿಯಲ್ಲಿ ನಡೆದದ್ದನ್ನೆಲ್ಲ ವಿವರಿಸಿದೆ. ಅವರು ಸಂತೋಷಪಟ್ಟು ಕೊಂಡು, ಗ್ರಾಮಸ್ಥರನ್ನೂ ಉಪಾಧ್ಯಾಯರನ್ನೂ