ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೫

ಮೇಷ್ಟ್ರು ರಂಗಪ್ಪ

ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠ ಶಾಲೆಗಳಿಗೆ ಕಟ್ಟಡಗಳಿಲ್ಲ. ಮಾರಿಗುಡಿ, ಆಂಜನೇಯನ ದೇವಸ್ಥಾನ, ಚಾವಡಿ,ಹಳೆಯ ಮರುಕಲು ಮನೆ- ಇವುಗಳಲ್ಲೇ ಬಹುಮಟ್ಟಿಗೆ ಪಾಠಶಾಲೆಗಳು ನಡೆಯುತ್ತಿದ್ದುವು. ಸರ್ಕಾರದ ಕಟ್ಟಡಗಳು ಕಲವು ಹಳ್ಳಿಗಳಲ್ಲಿ ಮಾತ್ರ ಇದ್ದುವು. ಅವುಗಳಲ್ಲಿ ಹಲವುದರ ನೆಲ ಕಿತ್ತು ಹೋಗಿ ಗೋಡೆಗಳು ಕೆತ್ತಿ ಹೋಗಿ, ಹಂಚುಗಳು ಹಲವು ಮುರಿದು ಹೋಗಿ ಆ ಕಟ್ಟಡಗಳೂ ಬಹಳ ಹೀನಸ್ಥಿತಿಯಲ್ಲಿದ್ದು ವು ಸಾಕಾದಷ್ಟು ಬೆಂಚುಗಳಿರಲಿಲ್ಲ, ಹಲಗೆಗಳಿರಲಿಲ್ಲ. ಕೆಲವು ಪಾಠ ಶಾಲೆಗಲ್ಲಿ ಬೋರ್ಡು ಸಹ ಇರಲಿಲ್ಲ. ಸಾಮಾನ್ಯವಾಗಿ ಒಬ್ಬರೇ ಮೇಷ್ಟರು ಇರುವ ಪಾಠ ಶಾಲೆಗಳ ಸಂಖ್ಯೆ ಹೆಚ್ಚು ; ಸೇಕಡಾ ಎಪ್ಪತ್ತರವರೆಗೆ ಎಂದು ಹೇಳಬಹುದಾಗಿತ್ತು. ಅಲ್ಲೆಲ್ಲಾ ಸರಾಸರಿ ಹುಡುಗರ ಸಂಖ್ಯೆ ಹದಿನೈದು. ಕೆಲವು ಪಾಠಶಾಲೆಗಳಲ್ಲಿ ಆರು ಏಳು ಮಕ್ಕಳು ಮಾತ್ರ. ಎಲ್ಲೋ ಅಪರೂಪವಾಗಿ ಒಂದೊಂದು ಕಡೆ ಮುವ್ವತ್ತೈದು ನಲವತ್ತು ಹುಡುಗರು. ಮೊದಲನೆಯ ತರಗತಿಯಲ್ಲಿ ನಾಲ್ಕೂ ಐದೂ ವರ್ಷ ಹಿಂದೆ ಬಿದ್ದಿದ್ದ ಹುಡುಗರು ಇರುತ್ತಿದ್ದರು. ಗ್ರಾಮಸ್ಥರಿಗೆ ಪಾಠಶಾಲೆಯ ವಿಷಯದಲ್ಲಿ ಅಕ್ಕರೆ ಕಡಿಮೆ. ಇವುಗಳನ್ನೆಲ್ಲ ನೋಡಿ ರಂಗಣ್ಣನಿಗೆ ಬಹಳ ವ್ಯಸನವಾಯಿತು.

ಒಂದು ದಿನ ಸಾಯಂಕಾಲ ಕೆಂಪಾಪುರದ ಬಂಗಲೆಯಲ್ಲಿ ರಂಗಣ್ಣ ಮೊಕ್ಕಾಂ ಮಾಡಿದ್ದಾನೆ. ಸಾಹೇಬರಿಗೆ ಗೋಪಾಲ ಕಾಫಿ ಮತ್ತು ಬೋಂಡ ತಯಾರುಮಾಡುತ್ತಾ ಅಡಿಗೆಯ ಮನೆಯಲ್ಲಿದ್ದಾನೆ. ಗುಮಾಸ್ತೆ